ವಿದ್ಯುತ್ ತಂತಿ ತಗುಲಿ ಮಂಗ ಸಾವು

ಕಡಬಿ: ಸಮೀಪದ ಬೋಳಕಡಬಿ ಗ್ರಾಮದಲ್ಲಿ ಗುರುವಾರ ಗಿಡದಿಂದ ಗಿಡಕ್ಕೆ ಹಾರುವ ವೇಳೆ ವಿದ್ಯುತ್ ತಂತಿ ತಗುಲಿ ಮಂಗ ಸಾವನ್ನಪ್ಪಿದೆ. ಗ್ರಾಮದ ಯುವಕರು ಗ್ರಾಮದಲ್ಲಿ ಮೆರವಣಿಗೆ ಮಾಡಿ ನಂತರ ರೇವಣಸಿದ್ದೇಶ್ವರ ಗುಡಿಯ ಮುಂದೆ ಮಂಗನ ಅಂತ್ಯಕ್ರಿಯೆ ಮಾಡಿದರು.

ಸೋಮಪ್ಪ ಚುಂಚನೂರ, ವಿಠ್ಠಲ ಸೋಮನಟ್ಟಿ, ಸಿದ್ದಪ್ಪ ತುಬಾಕಿ, ಮಂಜು ಸರ್ವಿ, ವಿಠ್ಠಲ ಹಟ್ಟಿ, ಬೆಳ್ಳೆಪ್ಪ ಕೊತ್ತಲ, ಭೀಮಶಿ ಮರೆನ್ನವರ, ಬಸು ದೇವರಮನಿ, ವಿಠ್ಠಲ ಕಂಬಳಿ, ನಾಗರಾಜ ಗೋನ್ನನವರ, ಶಿವಾನಂದ ಜೋಗನ್ನವರ, ಶಿವಾನಂದ ದಡ್ಡಿ, ಯಲ್ಲಪ್ಪ ಸೋಮನಟ್ಟಿ ಹಾಗೂ ಗ್ರಾಮದ ಯುವಕರು ಇದ್ದರು.