ಪವರ್ ಸ್ಟಾರ್ ದರ್ಶನಕ್ಕೆ ಮುಗಿಬಿದ್ದ ಯುವಜನತೆ

ಇಳಕಲ್ಲ: ಬಾದಾಮಿ ವ್ಯಾಪ್ತಿಯಲ್ಲಿ ನಟಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಪವರ್ ಸ್ಟಾರ್ ಪುನಿತ್ ರಾಜಕುಮಾರ ಅವರನ್ನು ನೋಡಲು ನಗರದಿಂದ ಬಾದಾಮಿಗೆ ನೂರಾರು ಯುವಕರು ಪ್ರಯಾಣ ಬೆಳೆಸಿದ್ದಾರೆ.

ಎರಡು ದಿನಗಳಿಂದ ಯುವಕರು ಹಾಗೂ ಅಭಿಮಾನಿಗಳು ತಂಡೋಪ ತಂಡವಾಗಿ ವಾಹನದ ಮೂಲಕ ತೆರಳಿ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ ಸೆಲ್ಪಿ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಬೆಂಗಳೂರಿಗೆ ಹೋಗಿ ಪುನಿತ್ ರಾಜಕುಮಾರ ಅವರನ್ನು ಕಾಣುವುದು ಕಷ್ಟ. ಹೀಗಾಗಿ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಅವರನ್ನು ಭೇಟಿಯಾಗಿ ಬಂದಿದ್ದೇವೆ. ಅವರೊಂದಿಗೆ ಫೊಟೋಗಳನ್ನು ತೆಗೆಸಿಕೊಂಡಿದ್ದೇವೆ. ಪುನಿತ್ ರಾಜಕುಮಾರ ಅವರು ಕೆಲ ಸಮಯವನ್ನು ಅಭಿಮಾನಿಗಳೊಂದಿಗೆ ಕಳೆದರು ಎಂದು ಇಳಕಲ್ಲ ನಿವಾಸಿ ಸಂಗಮೇಶ ಸುಲ್ತಾಪುರ ಹೇಳಿದರು.

Leave a Reply

Your email address will not be published. Required fields are marked *