ವಿದ್ಯುತ್ ಶಾಕ್, ವ್ಯಕ್ತಿ ಸಾವು

ಕೊಕಟನೂರ: ದರೂರ ಗ್ರಾಮದ ಹೊರವಲಯದ ಕೃಷ್ಣಾನದಿ ದಡದಲ್ಲಿರುವ ಪಂಪ್‌ಸೆಟ್ ಚಾಲು ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೊಬ್ಬರು ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.
ಕಿರಣಗಿ ಗ್ರಾಮದ ಸಂಗಪ್ಪ ನಿಂಗಪ್ಪ ಮೆಂಡಿಗೇರಿ (40) ಮೃತಪಟ್ಟವರು. ಇವರು ದರೂರ ಗ್ರಾಮದ ಸಂಬಂಧಿಕರಾದ ಅಣ್ಣಾಸಾಬ ಬಸಗೌಡ ಚೌಗಲಾ ಇವರ ಜಮೀನದಲ್ಲಿರುವ ಕಬ್ಬಿನ ಬೆಳೆಗೆ ನೀರುಣಿಸಲು ಕೃಷ್ಣಾನದಿ ದಡದಲ್ಲಿರುವ ಪಂಪ್‌ಸೆಟ್ ಪ್ರಾರಂಭಿಸುವಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆಂದು ಮೃತರ ಪತ್ನಿ ಶೋಭಾ ಅಥಣಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಥಣಿ ಪಿಎಸ್‌ಐ ಸುರೇಶ ಬೆಂಡೆಗೊಂಬಳ, ಹವಾಲ್ದಾರ ಯಶವಂತ ರಾಮೀಜಿ, ಸುಭಾಷ ಬಬಲೇಶ್ವರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *