ವಿದ್ಯುತ್ ತಗುಲಿ ಪವರ್‌ಮ್ಯಾನ್ ಸಾವು

ನಾಗರಮುನ್ನೋಳಿ: ಗ್ರಾಮದ ಹೊರವಲಯದ ವಿಠ್ಠಲ ಬಾನೆ ಅವರ ಹೊಲದಲ್ಲಿ ಗುರುವಾರ ಸಂಜೆ ಟ್ರಾನ್‌ಸ್ಾರ್ಮರ್ ದುರಸ್ತಿ ಮಾಡುತ್ತಿದ್ದ ಸಂದರ್ಭ ವಿದ್ಯುತ್ ತಗುಲಿ ಪವರ್‌ಮ್ಯಾನ್ ಶ್ರೀಶೈಲ ದರ್ಶನಾಳ(26) ಮೃತಪಟ್ಟಿದ್ದಾರೆ. ಮೂಲತಃ ವಿಜಯಪುರದ ಸಿಂದಗಿ ತಾಲೂಕಿನ ಕುಳೆಕುಮಟ್ಟಿ ಗ್ರಾಮದ ಶ್ರೀಶೈಲ ಕಳೆದ ಐದು ವರ್ಷಗಳ ಹಿಂದೆ ಹೆಸ್ಕಾಂ ಇಲಾಖೆಗೆ ಸೇರಿ ನಾಗರಮುನ್ನೋಳಿ ಗ್ರಾಮದಲ್ಲಿ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದೇ ವಾರದಲ್ಲಿ ಇದು 2ನೇ ಘಟನೆಯಾಗಿದ್ದು, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷೃದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.