ಮದ್ದೂರು: ಪಟ್ಟಣದ ಉಪವಿಭಾಗದ ಕಾರ್ಯ ಮತ್ತು ಪಾಲನಾ ಘಟಕ-1 ರ ಗ್ರಾಮೀಣ ಶಾಖಾ ವ್ಯಾಪ್ತಿಯ ಮಠದದೊಡ್ಡಿ ಎನ್.ಜೆ.ವೈ ಮತ್ತು ಕ್ಯಾತಘಟ್ಟ ಐ.ಪಿ.ಫೀಡರ್ ವಿದ್ಯುತ್ ಮಾರ್ಗದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 17ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ 66/11 ಕೆ.ವಿ. ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಮಠದದೊಡ್ಡಿ ಎನ್.ಜೆ.ವೈ ಮತ್ತು ಕ್ಯಾತಘಟ್ಟ ಐ.ಪಿ.ಫೀಡರ್‌ನ ಗ್ರಾಮಗಳಾದ ಕ್ಯಾತಘಟ್ಟ, ಬೊಮ್ಮನದೊಡ್ಡಿ, ಮಠದದೊಡ್ಡಿ, ವೈದ್ಯನಾಥಪುರ, ನಗರಕೆರೆ, ಉಪ್ಪಿನಕೆರೆ, ಸೋಂಪುರ, ಉಪ್ಪಾರದೊಡ್ಡಿ, ಮಾಲಗಾರನಹಳ್ಳಿ ಮತ್ತು ಅಜ್ಜಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
