ಸುಮಾರು 20 ಲಕ್ಷ ರೂ. ನಷ್ಟ, ದುಷ್ಕರ್ಮಿಗಳು ಹಚ್ಚಿರುವ ಶಂಕೆ
ಬೇತಮಂಗಲ: ಕೆಜಿಎಫ್ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರದಲ್ಲಿ ಸಮಾಜಸೇವಕ ಮೋಹನ್ ಕೃಷ್ಣ ಅವರಿಗೆ ಸೇರಿದ ಕೋಳಿ ಫಾರ್ಮ್‌ನ ಶೆಡ್ ಒಂದಕ್ಕೆ ಬೆಂಕಿ ಬಿದ್ದು 12 ಸಾವಿರ ಕೋಳಿ ಮರಿಗಳೂ ಸೇರಿ ಶೆಡ್‌ನಲ್ಲಿದ್ದ ಪರಿಕರಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 20 ಲಕ್ಷ ನಷ್ಟ ರೂ. ನಷ್ಟವುಂಟಾಗಿದೆ.
ಫಾರ್ಮ್‌ಆವರಣದಲ್ಲಿರುವ ಒಂದು ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೋಳಿ ಮರಿಗಳ ಸಮೇತ ಪರಿಕರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮಂಗಳವಾರ ಮಧ್ಯರಾತ್ರಿ ಘಟನೆ ನಡೆದಿದ್ದು, ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಶಂಕಿಸಿ, ಫಾರ್ಮ್‌ನ ಕಾರ್ಯದರ್ಶಿ ನಾಗೇಶ್ ಅವರು ಬೇತಮಂಗಲ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸ್ಥಳಕ್ಕೆ ಕೆಜಿಎ್ ಜಿಲ್ಲಾ ವರಿಷ್ಠಾಧಿಕಾರಿ ಶಾಂತರಾಜು, ಸರ್ಕಲ್ ಇನ್‌ಸ್ಪೆಕ್ಟರ್ ರಂಗಸ್ವಾಮಯ್ಯ, ಸಬ್ ಇನ್‌ಸ್ಪೆಕ್ಟರ್ ಗುರುರಾಜ್ ಚಿಂತಾಕಲ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು. ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳದಲ್ಲಿ ಪರೀಕ್ಷೆ ನಡೆಸಲಾಗಿದೆ.