ವಿಭಿನ್ನ ಮಹಿಳಾ ದಿನ ಆಚರಣೆ

ವಿಜಯವಾಣಿ ಸುದ್ದಿಜಾಲ ಬೀದರ್
ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರಿಗೆ ಅವರದೇ ಭಾವಚಿತ್ರ ಇರುವ ಅಂಚೆ ಚೀಟಿಗಳನ್ನು ಉಡುಗೊರೆಯಾಗಿ ಕೊಡುವ ಮೂಲಕ ಪ್ರಧಾನ ಅಂಚೆ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ಸಾಧಕರ, ಗಣ್ಯರ ಭಾವಚಿತ್ರ ಇರುವ ಅಂಚೆ ಚೀಟಿಗಳನ್ನು ಹೊರತರುವುದು ಸಾಮಾನ್ಯ. ಆದರೆ ತಮ್ಮ ಭಾವಚಿತ್ರದ ಅಂಚೆ ಚೀಟಿ ಹೊರತಂದಿದ್ದು ಮಹಿಳೆಯರಲ್ಲಿ ಸಂತಸ ಮೂಡಿಸಿತು.

ಅಂಚೆ ಅಧೀಕ್ಷಕ ವಿ.ಎಸ್.ಎಲ್. ನರಸಿಂಹರಾವ್ ಉದ್ಘಾಟಿಸಿ ಮಾತನಾಡಿ, ಜೀವನದ ಪ್ರತಿ ಹಂತದಲ್ಲಿ ಮಹಿಳೆ ತಾಯಿ, ಸಹೋದರಿ, ಪತ್ನಿ, ಸ್ನೇಹಿತೆ, ಮಗಳಾಗಿ ಪುರುಷರಿಗೆ ನೆರವಾಗುತ್ತಾಳೆ. ಅಂಥವಳಿಗೆ ಗೌರವ, ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಹೂ, ದೇವಸ್ಥಾನ, ವಿವಿಧ ರಾಶಿಗಳ ಚಿಹ್ನೆ, ಚಿಟ್ಟೆ ಚಿತ್ರ ಇರುವ ನನ್ನ ಸ್ಟ್ಯಾಂಪ್ ಅಂಚೆ ಚೀಟಿ ಫಲಕಗಳು ಲಭ್ಯ ಇವೆ. ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡಲು ಇಚ್ಛಿಸುವವರು ಸಂದರ್ಭಕ್ಕೆ ಅನುಗುಣ ಫಲಕಗಳ ಆಯ್ಕೆ ಮಾಡಿ ಪಾಸ್ಪೋಟರ್್ ಅಳತೆ ಭಾವಚಿತ್ರದೊಂದಿಗೆ ಪ್ರಧಾನ ಅಂಚೆ ಕಚೇರಿಯಲ್ಲಿ ಅಜರ್ಿ ಸಲ್ಲಿಸಿ ಅಂಚೆ ಚೀಟಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಸಹಾಯಕ ಅಂಚೆ ಅಧೀಕ್ಷಕ ರವೀಂದ್ರ ಮಾತನಾಡಿ, ಜನ್ಮ ದಿನ, ಮದುವೆ ವಾರ್ಷಿಕೋತ್ಸವ, ಸೇವಾ ನಿವೃತ್ತಿ ಸಂದರ್ಭದಲ್ಲಿ ನನ್ನ ಸ್ಟ್ಯಾಂಪ್ ಫಲಕ ನೆನಪಿನ ಕಾಣಿಕೆಯಾಗಿ ಕೊಡುವ ಹೊಸ ಬೆಳವಣಿಗೆ ಈಗ ಶುರುವಾಗಿದೆ ಎಂದು ಹೇಳಿದರು.

ಪ್ರಧಾನ ಅಂಚೆ ಪಾಲಕ ಗುಂಡಪ್ಪ ಕನಕ ಮಾತನಾಡಿ, ವಾಟ್ಸ್ಆ್ಯಪ್, ಫೇಸ್ಬುಕ್ನಂಥ ಸಾಮಾಜಿಕ ಜಾಲತಾಣದ ಯುಗದಲ್ಲಿ ದಾಖಲೆಯಾಗಿ ಉಳಿಯಬಲ್ಲ ಇಂಥ ಅಂಚೆ ಚೀಟಿಗಳು ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿದೆ ಎಂದು ವ್ಯಾಖ್ಯಾನಿಸಿದರು.

ಲಕ್ಷ್ಮೀ ಕಾಮೇಶ್ವರಿ ಮಾತನಾಡಿ, ಹಗಲಿರುಳು ಕುಟುಂಬದ ಒಳಿತಿಗಾಗಿ ಶ್ರಮಿಸುತ್ತಿರುವ ನಮಗೆ ನಮ್ಮದೇ ಭಾವಚಿತ್ರ ಇರುವ ಅಂಚೆ ಚೀಟಿಯ ಗೌರವ ದೊರೆತಿರುವುದು ಸಂತಸ ಮೂಡಿಸಿದೆ. ಇದರಿಂದ ಅಂಚೆ ಇಲಾಖೆ ಮೇಲಿನ ಗೌರವ ಇಮ್ಮಡಿಯಾಗಿದೆ ಎಂದು ಹೇಳಿದರು.