More

  ಹಮಾಲಿಗಳ ಬೇಡಿಕೆ ಈಡೇರಿಕೆಗೆ ಪ್ರಯತ್ನ

  ಸವದತ್ತಿ: ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ರೈತರು, ಹಮಾಲಿ ಕಾರ್ಮಿಕರ ಪರವಾಗಿ ಧ್ವನಿ ಎತ್ತುವ ಮೂಲಕ ಅವರ ಬೇಡಿಕೆ ಈಡೇರಿಕೆಗಾಗಿ ಶ್ರಮಿಸುತ್ತೇನೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.


  ಪಟ್ಟಣದ ಎಪಿಎಂಸಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಪಿಎಂಸಿ ಹಮಾಲಿ ಕಾರ್ಮಿಕರ 3ನೇ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಅನೇಕರ ವಿರೋಧದ ಮಧ್ಯೆಯೂ ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದುಗೊಳಿಸಲಾಗಿದೆ. ಹಮಾಲಿ ಕಾರ್ಮಿಕರು ಶ್ರಮಜೀವಿಗಳು. ರೈತರಂತೆ ಹಮಾಲರೂ ದೇಶದ ಬೆನ್ನೆಲುಬು ಎಂದರು.


  ಹಮಾಲಿಗಳೊಂದಿಗೆ ನನ್ನದು 20 ವರ್ಷಗಳ ಒಡನಾಟ. ಅವರ ಕಷ್ಟ ಅರಿತಿರುವೆ. ಅವರ 9 ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು.


  ರಾಜ್ಯ ಹಮಾಲಿ ಕಾಮಿರ್ಕರ ೆಡರೇಷನ್ ಅಧ್ಯಕ್ಷ ಕೆ. ಮಹಾಂತೇಶ ಮಾತನಾಡಿ, ಅಸಂಘಟಿತ ವಲಯದಲ್ಲಿರುವ ಲಕ್ಷಾಂತರ ಹಮಾಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಸೌಲಭ್ಯ ಕಲ್ಪಿಸಬೇಕು. ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದಾಗಿ ಒಂದು ಲಕ್ಷ ಹಮಾಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಕೃಷಿ ಉತ್ಪನ್ನಗಳ ಆವಕ, ಆದಾಯವಿಲ್ಲದೆ ಎಪಿಎಂಸಿಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಸಿದ್ದರಾಮಯ್ಯ ನೇತತ್ವದ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಈ ಕಾಯ್ದೆಯನ್ನು ವಾಪಸ್ ಪಡೆಯಲು ಮುಂದಾಗಿದ್ದು ಸ್ವಾಗತಾರ್ಹ ಎಂದರು.


  ಹಮಾಲಿ ಕಾರ್ಮಿಕರಿಗೆ ರಾಜ್ಯ ಕಷಿ ಮಾರಾಟ ಮಂಡಳಿಯಿಂದ ಜಾರಿಯಾಗುತ್ತಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳ ವಿಸ್ತರಣೆ ಆಗಬೇಕಿದೆ. ನನೆಗುದಿಗೆ ಬಿದ್ದಿರುವ ನಿವತ್ತಿ ಪರಿಹಾರ, ವಸತಿ, ಕನಿಷ್ಠ ವೇತನ ಜಾರಿ ಮುಂತಾದ ಹಕ್ಕೊತ್ತಾಯ ಕುರಿತು ಕ್ರಮವಹಿಸಬೇಕು ಎಂದರು.
  ಟಿ.ಯಶವಂತ, ಚಂದ್ರು ಶ್ಯಾಮರಾಯನವರ, ಶಿವಾನಂದ ಪಟ್ಟಣಶೆಟ್ಟಿ, ಸದಾಶಿವ ಕೌಜಲಗಿ, ಬಸವರಾಜ ಕಾರದಗಿ, ಸಂಗಯ್ಯ ವಡೆಯರ, ಚಂದ್ರು ಜಂಬ್ರಿ, ಮದನಲಾಲ ಚೋಪ್ರಾ, ಎ್.ಎಂ. ನದ್ಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts