ಹುಕ್ಕೇರಿ: ಜನಸಂಖ್ಯೆಯಿಂದ ಮೂಲಸೌಕರ್ಯ ಕೊರತೆ ಉಂಟಾಗಲಿದೆ. ಆದ್ದರಿಂದ, ಜನಸಂಖ್ಯೆ ನಿಯಂತ್ರಣ ಅನಿವಾರ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಪ್ರಾಚಾರ್ಯ ಲಕ್ಷ್ಮಣ ಪಟಾಯಿತ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅನಿಲ ಕಾಂಬಳೆ, ಗ್ರಂಥಪಾಲಕ ರಾಜೇಶ ಕುಂಬಾರ, ಡಾ.ಮಹಾದೇವಿ ಮರಾಠೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪ್ರಮೋದ ಜಾಧವ ಸ್ವಾಗತಿಸಿದರು. ಪ್ರೊ.ಲತಾ ವಿಜಯನಗರ ಪರಿಚಯಿಸಿದರು. ಡಾ.ಎಸ್.ಎಂ.ಕರಾಡೆ ನಿರೂಪಿಸಿದರು. ಪ್ರೊ.ತ್ರಿವೇಣಿ ಸೇಠ್ ವಂದಿಸಿದರು.