20.3 C
Bangalore
Sunday, December 15, 2019

ಕಲೋತ್ಸವದಲ್ಲಿ ಜನಮನ ಸೂರೆಗೊಳ್ಳಲಿದೆ ಪೂರಕ್ಕಳಿ

Latest News

ನಿರ್ದೇಶಕ ಪ್ರಶಾಂತ್​ ರಾಜ್​ ಮತ್ತಿಬ್ಬರು ಆಪ್ತರ ವಿರುದ್ಧ ವಂಚನೆ, ಜೀವ ಬೆದರಿಕೆ ಆರೋಪ: ಎಫ್​ಐಆರ್​ ದಾಖಲು

ಬೆಂಗಳೂರು: ಸ್ಯಾಂಡಲ್​ವುಡ್​ ಖ್ಯಾತ ನಿರ್ದೇಶಕ ಪ್ರಶಾಂತ್​ ರಾಜ್​ ಮತ್ತು ಇಬ್ಬರು ಆಪ್ತರ ವಿರುದ್ಧ ಬೆದರಿಕೆ ಹಾಗೂ ವಂಚನೆ ಆರೋಪ ಕೇಳಿಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವೃದ್ಧೆ...

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ಕಾಸರಗೋಡು: ಜಿಲ್ಲೆಯಲ್ಲಿ ದೀರ್ಘಕಾಲದ ನಂತರ ನಡೆಯಲಿರುವ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಯಕ್ಷಗಾನದಂತೆಯೇ, ಜಿಲ್ಲೆಯ ಸ್ವಂತ ಕಲೆಯಾಗಿರುವ ಪೂರಕ್ಕಳಿಯೂ ತಮ್ಮದೇ ಅಸ್ತಿತ್ವ ತೋರಿಸಿಕೊಡಲಿದೆ. ಚಂದ್ರಗಿರಿ ನದಿಯ ತಟದಲ್ಲಿ ಬಹಳ ಪ್ರಸಿದ್ಧವಾಗಿರುವ ಪೂರಂ ಉತ್ಸವದ ಭಾಗವಾಗಿ ಜಾರಿಗೆ ಬಂದಿರುವುದು ಈ ಪೂರಕ್ಕಳಿ.

ಹಾಡಿಗೆ ಸರಿಯಾದ ಹೆಜ್ಜೆಯಿರಿಸಿ, ಅದನ್ನೇ ತಾಳವಾಗಿ ಪರಿವರ್ತಿಸುವ ಅಂಗಕ್ರಿಯೆ ಪ್ರಧಾನ ಕಲೆಯಿದು. ಕೇರಳದ ಪ್ರಸಿದ್ಧ ಯುದ್ಧಕಲೆ ಕಳರಿಪಯಟ್‌ನೊಂದಿಗೆ ನಿಕಟ ಹೋಲಿಕೆ ಈ ಕಲೆ ಹೊಂದಿದೆ. ಕಲಾಪ್ರಸ್ತುತಿಗೆ ಮುನ್ನ ದೇವಸನ್ನಿಧಿಯಿಂದ ನೀಡಲಾಗುವ ಎಣ್ಣೆ ಮೈಗೆ ಲೇಪಿಸಿಕೊಂಡು ಈ ಪ್ರದರ್ಶನ ನಡೆಯುತ್ತದೆ. ಪ್ರಧಾನವಾಗಿ 4 ವಿಭಾಗಗಳಾಗಿ ಪೂರಕ್ಕಳಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಪೂರಮಾಲ, ವನ್‌ಕಳಿ, ಆಟ್ಟಂ, ತೊಳುತ್ತುಕಳಿ ಎಂಬುದು ಇಲ್ಲಿನ ಪ್ರಧಾನ ಅಂಗಗಳು. ನೇರ್ಕಳಿ, ಚಾಞಕಳಿ, ಇರುನ್ನುಕಳಿ, ಮರಿಂಞಕಳಿ ಎಂಬುದು ಈ ಕಲೆಯ ಪ್ರಭೇದಗಳು. ವಿವಿಧ ಸಂಸ್ಕೃತಿಗಳ ಸಮನ್ವಯವನ್ನು ಈ ಕಲಾಪ್ರಕಾರದಲ್ಲಿ ನಾವು ಕಾಣಬಹುದಾಗಿದೆ. ಶೈವ ಮತ್ತು ವೈಷ್ಣವ ಸಿದ್ಧಾಂತಗಳ ಗಾಢ ಪ್ರಭಾವ ಇಲ್ಲಿ ಕಂಡುಬರುತ್ತದೆ. ಇದೇ ಕಾರಣಕ್ಕೆ ಈ ಕಲಾಪ್ರಕಾರಕ್ಕೆ ‘ಶಂಕರನಾರಾಯಣೀಯಂ’ ಎಂದೂ ಕರೆಯಲಾಗುತ್ತದೆ.

ಇನ್ನೊಂದೆಡೆ ಜೈನ ಧರ್ಮದ ಉಲ್ಲೇಖವೂ ಕಂಡುಬರುತ್ತದೆ. ಪೂರಕ್ಕಳಿಯ ಪಳ್ಳ್ ಎಂಬ ಭಾಗ ಕೃಷಿ ವಲಯದ ಪ್ರಾಧಾನ್ಯವನ್ನು ತಿಳಿಸುತ್ತದೆ. ಪೂರಕ್ಕಳಿಯ ಪ್ರಸ್ತುತಿಯ ಕೊನೆಗೆ ಮಾಪಿಳ್ಳೆ ಹಾಡುಗಳನ್ನು ಆಲಾಪಿಸುವ ಸಂಪ್ರದಾಯವನ್ನು ಗಮನಿಸಿದರೆ ಮತೀಯ ಸೌಹಾರ್ದ ಸಂದೇಶವನ್ನೂ ಗುರುತಿಸಬಹುದಾಗಿದೆ. ಪೂರಕ್ಕಳಿಯನ್ನು ಕಲಾಪ್ರಕಾರವಾಗಿ ಗುರುತಿಸಬೇಕೋ, ಅಥವಾ ಅದನ್ನೊಂದು ಕ್ರೀಡೆಯಾಗಿ ಪರಿಶೀಲಿಸಬೇಕೋ ಎಂಬ ಗೊಂದಲ ಜಿಜ್ಞಾಸೆ ಹುಟ್ಟಿಕೊಂಡಿದೆ. ಇದಕ್ಕೆ ಇಲ್ಲಿನ ತಾಳ ಮತ್ತು ಲಯದ ಗತಿಗಳು ಪ್ರಧಾನಕಾರಣ. ಪ್ರಸಕ್ತ ಕೇರಳದ ಉತ್ತರದ ಭಾಗದ ಜಿಲ್ಲೆಗಳ (ಮಲಬಾರ್) ಜಾನಪದ ಕಲೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಆದರೆ ಇದಕ್ಕೆ ಶಾಸ್ತ್ರೀಯ ಕಲೆ ಮನ್ನಣೆ ಸಿಗಬೇಕು ಎಂದು ವಿದ್ವಾಂಸರ ವಿಭಾಗವೊಂದು ಪ್ರಬಲ ಧ್ವನಿ ಎತ್ತುತ್ತಿದೆ. ಈಗ ಉಳಿದ ಜಿಲ್ಲೆಗಳಲೂ ್ಲಪೂರಂ ಉತ್ಸವ ಪ್ರಸಿದ್ಧವಾಗಿರುವಂತೆಯೇ ಪೂರಕ್ಕಳಿಯೂ ಖ್ಯಾತವಾಗಿದೆ. ರಾಜ್ಯ ಮಟ್ಟದ ಕಲೋತ್ಸವಗಳಲ್ಲಿ ಕೇರಳದ 13 ಜಿಲ್ಲೆಗಳ ತಂಡಗಳು ಸ್ಪರ್ಧಾ ಕಣದಲ್ಲಿರಲಿದೆ.

60ಕ್ಕೂ ಅಧಿಕ ಶೈಕ್ಷಣಿಕ ಸ್ಟಾಲ್‌ಗಳು: ಕಲೋತ್ಸವ ಅಂಗವಾಗಿ ‘ದಿಶಾ’ಎಂಬ ಹೆಸರಿನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕಾಞಂಗಾಡ್ ಬಲ್ಲ ಈಸ್ಟ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಎಕ್ಸಿಬಿಷನ್ ನಡೆಯಲಿದೆ. ಇದರಲ್ಲಿ ವಿವಿಧ ವಲಯಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟಗಳು ನಡೆಯಲಿದೆ. ಜತೆಗೆ ರಾಜ್ಯ ಹೈಯರ್ ಸೆಕೆಂಡರಿ ಶಿಕ್ಷಣ ಇಲಾಖೆ ವ್ಯಾಪ್ತಿಯ ಕೆರಿಯರ್ ಗೈಡೆನ್ಸ್ ಆ್ಯಂಡ್ ಅಡೋಲ್‌ಸೆಂಟ್ ಕೌನ್ಸೆಲಿಂಗ್ ಸೆಂಟರ್ ವತಿಯಿಂದ ಉನ್ನತ ಶಿಕ್ಷಣ ಸಂಬಂಧ ಮಾಹಿತಿ ನೀಡುವ ಮಳಿಗೆ ತೆರೆದುಕೊಳ್ಳಲಿವೆ. ನ.27ರಿಂದ ಡಿ.1ರ ವರೆಗೆ ಈ ಮಳಿಗೆಗಳು ಇರಲಿವೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರಿಗೆ ವಿವಿಧ ತರಬೇತಿಗಳ ಕುರಿತು ಮಾಹಿತಿ ನೀಡುವ, ಸಂಶಯ ನಿವಾರಿಸುವ ಅವಕಾಶ ಇಲ್ಲಿದೆ. ವಿವಿಧ ಸಂಸ್ಥೆಗಳಲ್ಲಿರುವ ಅವಕಾಶಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ದೇಶದ ಉನ್ನತ ಶಿಕ್ಷಣ ಸಂಬಂಧ ವಿಷಯಗಳ ಬಗ್ಗೆ, ಶಿಕ್ಷಣ ಸಂಬಂಧ 60 ಸ್ಟಾಲ್‌ಗಳು ಇಲ್ಲಿರಲಿವೆ. ಕೇರಳ ಕಲಾಮಂಡಲಂನಿಂದ ತೊಡಗಿ ಆಲಿಘಡ್ ವಿವಿವರೆಗೆ, ಕೃಷಿ ವಿವಿಯಿಂದ ಆರೋಗ್ಯ ವಿಜ್ಞಾನ ವಿವಿವರೆಗೆ, ಏಷ್ಯಾದಲ್ಲೇ ಏಕೈಕ ಸಂಸ್ಥೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸಯನ್ಸ್ ಆಂಡ್ ಟೆಕ್ನಾಲಜಿ ಸಹಿತ ವಿವಿಧ ಸಂಸ್ಥೆಗಳ ಸ್ಟಾಲ್‌ಗಳು ಇರಲಿವೆ.

ಪ್ರಕೃತಿ ಸ್ನೇಹಿ ಕಲೋತ್ಸವ: ಕಲೋತ್ಸವದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಪೂರ್ಣ ಕೈಬಿಡಲಾಗಿದ್ದು, ಬಟ್ಟೆಯ ಚೀಲ ಸಹಿತ ಪ್ರಕೃತಿಸ್ನೇಹಿ ಸಾಮಗ್ರಿ ಬಳಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶಿಸಿದ್ದಾರೆ. ಇದರ ಅಂಗವಾಗಿ ಶಾಲೆ ಮಕ್ಕಳು ಕಲೋತ್ಸವದಲ್ಲಿ ಬಳಸುವ ನಿಟ್ಟಿನಲ್ಲಿ ಸುಮಾರು 300 ಬಟ್ಟೆಯ ಚೀಲಗಳನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ್ದಾರೆ. ಮುಳ್ಳೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್, ಪೆನ್ ಫ್ರೆಂಡ್ ಯೋಜನೆ ಸದಸ್ಯರು, ಬಳಕೆಯಿಲ್ಲದ ಪೆನ್‌ಗಳನ್ನು ಸಂಗ್ರಹಿಸಿ, ಗುಜರಿಗೆ ಮಾರಾಟ ಮಾಡಿ ಲಭಿಸಿದ ಹಣದೊಂದಿಗೆ ಶಾಲೆಯ ರಕ್ಷಕ-ಶಿಕ್ಷಕ ಸಂಘದ ನಿಧಿಯನ್ನೂ ಸೇರಿಸಿ ಬಟ್ಟೆ ಚೀಲಗಳನ್ನು ತಯಾರಿಸಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚೀಲಗಳನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಎ.ಅಶೋಕ್ ಅರಳಿತ್ತಾಯ, ಇಕೋ ಕ್ಲಬ್ ಸಂಚಾಲಕಿ ಎಂ.ಸಾವಿತ್ರಿ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಎ.ಪದ್ಮನಾಭ, ಇಕೋ ಕ್ಲಬ್ ಸದಸ್ಯರಾದ ಬಿ.ಯದುಕೃಷ್ಣನ್, ಸಿ.ಎಚ್.ಸುಭಾಷ್ ಚೀಲ ಹಸ್ತಾಂತರ ವೇಳೆ ಜತೆಗಿದ್ದರು.

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...