More

    ಸಿಸಿ ರಸ್ತೆ ಕಳಪೆ ಕಾಮಗಾರಿ, ಹಣ ದುರುಪಯೋಗ ಸಾಬೀತು

    ಸಿದ್ದಾಪುರ : ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ ಬೆಟ್ಟದಕಾಡು ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆ ಹಾಗೂ ಎಸ್ಟಿ ಹಣ ದುರುಪಯೋಗ ಆಗಿರುವುದು ತನಿಖೆಯಿಂದ ಸಾಬೀತಾಗಿದೆ. ನರೇಗಾ ಯೋಜನೆಯಡಿ ಪರಿಶಿಷ್ಟ ಜಾತಿ ಕಾಲನಿಯ ರಸ್ತೆ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣವನ್ನು ಸಾರ್ವಜನಿಕ ರಸ್ತೆಗೆ ಬಳಸಲಾಗಿದ್ದು, ಕೇವಲ 500 ಮೀಟರ್ ರಸ್ತೆಗೆ 23 ಲಕ್ಷ ರೂ. ಖರ್ಚು ಮಾಡಲಾಗಿದೆ. ಅಲ್ಲದೆ ರಸ್ತೆ ಸಂಪೂರ್ಣ ಹಾಳಾಗಿದ್ದು, ತನಿಖೆ ಆಗಬೇಕೆಂದು ಗ್ರಾಪಂ ಸದಸ್ಯ ಶಿವದಾಸ್ ಗ್ರಾಪಂ ಲೆಕ್ಕ ಪರಿಶೋಧನಾ ಸಭೆಯಲ್ಲಿ ದೂರು ನೀಡಿದ್ದರು.

    ಗುರುವಾರ ಜಿಲ್ಲಾ ಪಂಚಾಯಿತಿ ಒಂಬುಡ್ಸ್‌ಮನ್ ಮಹದೇವಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮವೆಸಗಿರುವುದು ಕಂಡುಬಂದಿದೆ. ಪರಿಶಿಷ್ಟ ಜಾತಿಯ ಲಕ್ಷ್ಮೀ ಅವರ ಮನೆಗೆ ತೆರಳುವ ರಸ್ತೆ ಕಾಮಗಾರಿ ಹೆಸರಿನಲ್ಲಿ ಬಿಲ್ ಪಾವತಿ ಮಾಡಲಾಗಿದ್ದು, ಲಕ್ಷ್ಮೀ ಅವರ ಮನೆ ಸಮೀಪ ರಸ್ತೆ ಕಾಮಗಾರಿ ಮಾಡದೆ ಸಾರ್ವಜನಿಕ ರಸ್ತೆಗೆ ಹಣ ವ್ಯಯಿಸಲಾಗಿದೆ. ಧನೇಶ್ ಅವರ ಅಂಗಡಿಯಿಂದ ಪ್ರಾರಂಭ ಮಾಡಬೇಕಿದ್ದ ಕಾಮಗಾರಿಯಲ್ಲಿ 80 ಮೀ. ದೂರ ಬಿಟ್ಟು ಪ್ರಾರಂಭಿಸಲಾಗಿದೆ. ಕಾಮಗಾರಿಯ ಫಲಕಗಳಲ್ಲಿ ಸಾಮಗ್ರಿ ಮೊತ್ತ ಪಾವತಿಸಲೇ ಇಲ್ಲ. ರಸ್ತೆಯ ಅಲ್ಲಲ್ಲಿ ಗುಂಡಿಗಳಾಗಿದ್ದು, ಕಾಮಗಾರಿ ಕಳಪೆ ಆಗಿದೆ ಎಂದು ಗ್ರಾಪಂ ಸದಸ್ಯರು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

    ಹಿಂದಿನ ಪಿಡಿಒ ಅನಿಲ್ ಕುಮಾರ್, ಅಧ್ಯಕ್ಷ ಸಾಬು ವರ್ಗೀಸ್, ಇಂದಿನ ಪಿಡಿಒ ನಂಜುಂಡಸ್ವಾಮಿ, ಅಧ್ಯಕ್ಷೆ ಧಮಯಂತಿ, ಗ್ರಾಪಂ ಸದಸ್ಯರಾದ ಹನೀಫ್, ಸಫಿಯಾ, ಶಿವದಾಸ್ ಇದ್ದರು.

    ಚಿತ್ರ 22ಎಸ್ ಡಿ ಪಿ 06:-ಗುರುವಾರ ಜಿಲ್ಲಾ ಪಂಚಾಯಿತಿ ಒಂಬುಡ್ಸ್‌ಮನ್ ಮಹದೇವಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts