17 C
Bangalore
Monday, December 9, 2019

ಹೆಲ್ತ್​ಕಾರ್ಡ್ ಅಧ್ವಾನ

Latest News

ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಗೆ ಅಂತ್ಯ ಹಾಡುತ್ತಾ?

ಬೆಂಗಳೂರು: ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿದ್ದ ರಾಜಕೀಯ ಅಸ್ಥಿರತೆಯ ಗ್ರಹಣ ಸೋಮವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಉಪಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಂತೆಯೇ ಜನಾಭಿಪ್ರಾಯ ರೂಪುಗೊಂಡಿದ್ದರೆ, ಬಿಜೆಪಿ...

ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ಮಾಣ

ಹುಬ್ಬಳ್ಳಿ: ಇಲ್ಲಿಯ ಬಿಡ್ನಾಳ ಮುಖ್ಯ ರಸ್ತೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ವಿುಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನೀರು ಇರುವುದೇ ಪೋಲು ಮಾಡಲು!

ಹುಬ್ಬಳ್ಳಿ: ಜಲ ಮಂಡಳಿ ತಾನೇ ಹೊಸ ನಿಯಮವೊಂದನ್ನು ಕಂಡುಕೊಂಡಿದೆ. ಅದೇನು ಎನ್ನುವ ಆಶ್ಚರ್ಯವೇ? ನೀರು ಇರುವುದೇ ಪೋಲು ಮಾಡಲು ಎನ್ನುವುದು!

ಈಜಿಪ್ತ್ ಈರುಳ್ಳಿ ಕೊಳ್ಳುವವರೇ ಇಲ್ಲ

ಹುಬ್ಬಳ್ಳಿ: ಇಲ್ಲಿಗೆ ತರಿಸಲಾಗಿದ್ದ ಈಜಿಪ್ತ್ ಈರುಳ್ಳಿಗೆ ಖರೀದಿದಾರರು ಟೆಂಡರ್ ಹಾಕಿಲ್ಲ. ಹೀಗಾಗಿ, ಈಜಿಪ್ತ್ ಈರುಳ್ಳಿಯನ್ನು ಬೇರೆ ಮಾರುಕಟ್ಟೆಗೆ ಕೊಂಡೊಯ್ಯಲಾಗಿದೆ.

ನಿರಾಶೆ ಭಾವ ತಗ್ಗಿಸಿದ ತೃಪ್ತಿ

ಕಲಘಟಗಿ: ಹಳ್ಳಿಗಳ ನಿರುದ್ಯೋಗಿ ಯುವ ಸಮೂಹದಲ್ಲಿ ವಿದ್ಯಾವಂತ ರಾಗಿಯೂ ಉದ್ಯೋಗವಿಲ್ಲ ಎಂಬ ನಿರಾಶೆ ಭಾವನೆಯನ್ನು ಕಿಂಚಿತ್ತಾದರೂ ತಗ್ಗಿಸಿದ ಆತ್ಮತೃಪ್ತಿ ಇದೆ ಎಂದು ಶಾಸಕ...

|ವರುಣ ಹೆಗಡೆ

ಬೆಂಗಳೂರು: ಬಡವರಿಗೂ ಸಮಗ್ರ ಆರೋಗ್ಯ ಸೇವೆ ಭಾಗ್ಯ ಕಲ್ಪಿಸುವ ಉದ್ದೇಶದ ಆರೋಗ್ಯ ಕರ್ನಾಟಕ ಯೋಜನೆಯ ಅವ್ಯವಸ್ಥೆ ಕೋಟ್ಯಂತರ ಜನರ ನಿದ್ದೆಗೆಡಿಸಿದೆ. ಅನಾರೋಗ್ಯಪೀಡಿತರ ಚಿಕಿತ್ಸೆ ಸೌಲಭ್ಯಕ್ಕೆ ಕಡ್ಡಾಯವಾದ ಆರೋಗ್ಯ ಕಾರ್ಡ್ ಸಿಗದ ಪರಿಣಾಮ ಜನರ ಆರೋಗ್ಯ ಹದಗೆಡಲಾರಂಭಿಸಿದೆ.

ಯೋಜನೆಯಡಿ 1.34 ಕೋಟಿ ಕುಟುಂಬಗಳಿಗೆ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ರಕ್ಷಣೆ ಒದಗಿಸುವ ಸರ್ಕಾರದ ಮಾತು ಮಾತಾಗಿಯೇ ಉಳಿದ ಪರಿಣಾಮ ಕೇವಲ 3 ಲಕ್ಷ ಜನರಷ್ಟೇ ಕಾರ್ಡ್ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ರಾಜ್ಯದ 11 ಆಸ್ಪತ್ರೆಗಳನ್ನು ಬಿಟ್ಟು ಬೇರೆ ಯಾವ ಆಸ್ಪತ್ರೆಗಳಲ್ಲೂ ಈವರೆಗೆ ಕಾರ್ಡ್ ದರ್ಶನವಾಗಿಲ್ಲ.

ಬಡವರ ಪಾಲಿಗೆ ಸಂಜೀವಿನಿಯಂತಿದ್ದ ಯಶಸ್ವಿನಿ ಯೋಜನೆ ಕೂಡ ಮೇ 31ಕ್ಕೆ ಅಂತ್ಯಗೊಂಡಿದೆ. ಇತ್ತ ಯಶಸ್ವಿನಿ ಸೌಲಭ್ಯವೂ ಇಲ್ಲದೆ ಹೊಸ ಯೋಜನೆಯ ಲಾಭವನ್ನೂ ಪಡೆಯಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿ ರಾಜ್ಯದ ಜನ ಒದ್ದಾಡುತ್ತಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ವಿಳಂಬ

ಜೂ.30ರ ಒಳಗಾಗಿ 33 ಪ್ರಮುಖ ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ವಿತರಿಸಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಬೇಕೆಂದು ಸರ್ಕಾರ ಆದೇಶಿಸಿತ್ತು. ಆದರೆ, ಬೆರಳಣಿಕೆಯಷ್ಟು ಆಸ್ಪತ್ರೆಗಳಲ್ಲಿ ಮಾತ್ರ ಕಾರ್ಡ್ ವಿತರಣೆ ಆರಂಭವಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಪ್ಪಳ, ಕೊಡಗು ಸೇರಿ ಬಹುತೇಕ ಜಿಲ್ಲೆಗಳಲ್ಲಿ ವಿತರಣೆ ಆರಂಭವಾಗಿಲ್ಲ.

ಎಲ್ಲೆಲ್ಲಿ ಕಾರ್ಡ್ ವಿತರಣೆ

ಪಿಎಂಎಸ್​ಎಸ್​ವೈ ಬೆಂಗಳೂರು, ಕೆ.ಸಿ.ಜನರಲ್ ಆಸ್ಪತ್ರೆ ಬೆಂಗಳೂರು, ಜಯದೇವ ಆಸ್ಪತ್ರೆ ಬೆಂಗಳೂರು, ಮಿಮ್್ಸ ಮಂಡ್ಯ, ಮೆಗ್ಗಾನ್ ಶಿವಮೊಗ್ಗ, ವೆನ್​ಲಾಕ್ ಮಂಗಳೂರು, ಕಿಮ್್ಸ ಹುಬ್ಬಳ್ಳಿ, ವಿಮ್್ಸ ಬಳ್ಳಾರಿ, ಜಿಮ್್ಸ ಕಲಬುರಗಿ, ಎಸ್​ಎನ್​ಆರ್ ಆಸ್ಪತ್ರೆ ಕೋಲಾರ, ಟಿ.ನರಸೀಪುರ ಸೇರಿದಂತೆ ಒಟ್ಟು 11 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಉಳಿದಂತೆ ಇತರ ಎಲ್ಲ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆ.31ರೊಳಗೆ ಆರಂಭವಾಗುತ್ತದೆ.

1.50 ಲಕ್ಷ ರೂ. ಲಭ್ಯ

5 ಸದಸ್ಯರಿರುವ ಒಂದು ಕುಟುಂಬಕ್ಕೆ (ಅರ್ಹತಾ ಕುಟುಂಬ) ನಿರ್ದಿಷ್ಟ ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ಒಂದು ವರ್ಷಕ್ಕೆ 30ಸಾವಿರ ರೂ.ವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ನಿರ್ದಿಷ್ಟ ತೃತೀಯ ಹಂತದ ಚಿಕಿತ್ಸೆಗೆ 1.50 ಲಕ್ಷ ರೂ.ವರೆಗೆ ಒದಗಿಸಲಾಗುತ್ತದೆ. ಆದರೆ, ಯಶಸ್ವಿನಿ ಯೋಜನೆ ಅಡಿಯಲ್ಲಿ 2ಲಕ್ಷ ರೂ.ವರೆಗೆ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿತ್ತು.

ಯೂನಿವರ್ಸಲ್ ಹೆಲ್ತ್ ಕಾರ್ಡ್​ಗಾಗಿ ನೋಂದಣಿ ಕಾರ್ಯ ನಡೆಯುತ್ತಿದ್ದು, ಇನ್ನೂ ಕಾರ್ಡ್​ಗಳು ಬರಬೇಕಾಗಿದೆ. ಆದರೂ ರೋಗಿಗಳಿಗೆ ಅನನುಕೂಲವಾಗದಂತೆ ಹಿಂದಿನ ವಿವಿಧ ಯೋಜನೆಗಳ ವ್ಯಾಪ್ತಿಯಲ್ಲಿರುವವರಿಂದ ಅಗತ್ಯ ದಾಖಲೆ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ.

| ಡಾ.ಲಕ್ಷ್ಮಿಬಾಯಿ ಡಿಎಚ್​ಒ ರಾಯಚೂರು

ಕಾರ್ಡ್ ಕಳೆದಿದ್ದರೆ ಆತಂಕ ಬೇಡ

ಆರೋಗ್ಯ ಕಾರ್ಡ್ ಕಳೆದುಕೊಂಡರೆ ಆತಂಕ ಪಡಬೇಕಾಗಿಲ್ಲ. ಯಾವುದೇ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಆಧಾರ್ ಅಥವಾ ಪಡಿತರ ಚೀಟಿ ಹಾಜರುಪಡಿಸಿ, ಆಧಾರ್ ದೃಢೀಕರಣದ ನಂತರ 20ರೂ.ಪಾವತಿಸುವ ಮೂಲಕ ನಕಲು ಹೆಲ್ತ್ ಕಾರ್ಡ್ ಪಡೆದುಕೊಳ್ಳಬಹುದು.

ಬಿಪಿಎಲ್ ಕಾರ್ಡ್ ಹೊಂದಿರುವ ನಮ್ಮಂತ ಹಲವರಿಗೆ ಈ ಯೋಜನೆ ಪ್ರಯೋಜನವಾಗುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ. ಆದರೆ, ಕಾರ್ಡ್ ವಿತರಣೆ ವ್ಯವಸ್ಥಿತವಾಗಿ ನಡೆಯುತ್ತಿಲ್ಲ.

| ಧರಣಿ ಬೆಂಗಳೂರಿನ, ಕಾಮಾಕ್ಷಿಪಾಳ್ಯ ನಿವಾಸಿ

ಮುಂದುವರಿದ ಗೊಂದಲ

ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಸಹಕಾರಿ ಸಂಘದ ಲಕ್ಷಾಂತರ ಸದಸ್ಯರಿದ್ದು, ಕಳೆದ ಮೇ 31ರವರೆಗೆ ಯಶಸ್ವಿನಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಆದರೆ ಇದೀಗ ಏಕಾಏಕಿ ಯಶಸ್ವಿನಿ ಯೋಜನೆ ಕೈ ಬಿಟ್ಟ ಕಾರಣ ದಿಕ್ಕು ತೋಚದೆ ಗೊಂದಲಕ್ಕೆ ಒಳಗಾಗಿದ್ದಾರೆ. ಹೀಗಾಗಿ ನೂತನ ಹೆಲ್ತ್ ಕಾರ್ಡ್ ಮಾಡಿಸಿಕೊಳ್ಳುವ ಗೋಜಿಗೂ ಹೋಗಿಲ್ಲ. ಇನ್ನು ಸಾರ್ವಜನಿಕ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳು ಸಂಕೀರ್ಣ ಚಿಕಿತ್ಸೆಗೆ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ರೆಫರಲ್ ಮಾಡಲು ಹಿಂದೇಟು ಹಾಕುತ್ತಿರುವುದಕ್ಕೆ ರೋಗಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದೆಡೆ ವಿವಿಧ ಜಿಲ್ಲೆಗಳಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಪ್ಯಾಕೇಜ್ ಅಡಿ ಚಿಕಿತ್ಸೆ ನೀಡಬೇಕಾಗಿದ್ದರಿಂದ ರೆಫರಲ್ ಪತ್ರ ಸ್ವೀಕರಿಸಲು ಹಿಂದೇಟು ಹಾಕಲಾರಂಭಿಸಿವೆ.

ಕಾರ್ಡ್​ಗಾಗಿ ಜಾಗರಣೆ: ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಜನರು ಬರುತ್ತಾರೆ. ದೂರದ ಊರುಗಳಿಂದ ರಾತ್ರಿಯೇ ಬಂದು ಆಸ್ಪತ್ರೆ ಆವರಣದಲ್ಲಿ ಕಾರ್ಡ್​ಗಾಗಿ ಸರದಿ ಸಾಲಿನಲ್ಲಿ ಕುಳಿತುಕೊಳ್ಳಬೇಕು. ಆದರೆ, ದಿನಕ್ಕೆ 400 ಮಂದಿಗಷ್ಟೇ ಕಾರ್ಡ್ ದೊರೆಯುತ್ತಿದೆ. ಉಳಿದವರು ರಾತ್ರಿಯಿಡೀ ಕಾದರೂ ಕಾರ್ಡ್ ಸಿಗುವುದಿಲ್ಲ.

ಕಾರ್ಡ್​ಗಾಗಿ ನಿತ್ಯ ಪರದಾಟ

ರೋಗಿಗಳಿಗೆ ನೋಂದಣಿ ಕೌಂಟರ್​ನಲ್ಲಿ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಆಧರಿಸಿ ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ. ರೋಗಿಗಳು 10 ರೂ. ಪಾವತಿಸಬೇಕಾಗುತ್ತದೆ. ಆದರೆ ಪಡಿತರ ಚೀಟಿಯಲ್ಲಿ ಫಲಾನುಭವಿಯ ಫೋಟೋ ಇಲ್ಲವೆಂಬ ಕಾರಣಕ್ಕೆ ಚಿಕ್ಕ ಮಕ್ಕಳು ಸೇರಿ ಹಲವರು ಕಾರ್ಡ್ ವಂಚಿತರಾಗುತ್ತಿದ್ದಾರೆ. ಇನ್ನು ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಗೊಂದಲಕ್ಕೆ ಒಳಗಾಗಿದ್ದು, ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ತೆರಳಿ ಆರೋಗ್ಯ ಕಾರ್ಡ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಹಲವರಿಗೆ ಕಹಿಮಾತ್ರೆ

ಯಶಸ್ವಿನಿ ಯೋಜನೆ ಅಡಿಯಲ್ಲಿ 2 ಲಕ್ಷ ರೂ.ವರೆಗೆ ವೈದ್ಯಕೀಯ ಸೌಲಭ್ಯ ಪಡೆಯುತ್ತಿದ್ದ ಸಹಕಾರಿ ಸಂಘದ ಸದಸ್ಯರು ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಿಗೆ ಆರೋಗ್ಯ ಕರ್ನಾಟಕ ನುಂಗಲಾಗದ ಕಹಿ ಮಾತ್ರೆಯಾಗಿ ಪರಿಣಮಿಸಿದೆ. ಎಪಿಎಲ್ ಪಡಿತರ ಚೀಟಿ ಹೊಂದಿರುವ ಸಹಕಾರಿ ಸಂಘದ ಸದಸ್ಯರಿಗೆ ಯೋಜನಾ ಪ್ಯಾಕೇಜ್ ದರದ ಶೇ.30 ಮಾತ್ರ ಸಿಗುತ್ತದೆ. ಹೀಗಾಗಿ ಯಶಸ್ವಿನಿ ಯೋಜನೆಯ ಲಾಭವನ್ನು ಹಾಗೇ ಮುಂದುವರಿಸುವಂತೆ ಆಗ್ರಹಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ1,89,655 ಮಂದಿ ಸಹಕಾರಿ ಸಂಘದ ಸದಸ್ಯರಿದ್ದಾರೆ. ಜಿಲ್ಲೆಯ 1,028 ಸಹಕಾರ ಸಂಘಗಳ ಪೈಕಿ ಸಕ್ರಿಯವಾಗಿರುವ ಸುಮಾರು 650 ಸೊಸೈಟಿಗಳಲ್ಲಿ ಯಶಸ್ವಿನಿ ವಿಮಾ ಕಂತು ಪಾವತಿಸಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆಯಡಿ 18 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರದ ಆರೋಗ್ಯ ಸೇವೆಗಾಗಿ ಹೊರಗಡೆ ಕಳುಹಿಸಲಾಗುತ್ತಿದೆ. ಮುಂದಿನ ತಿಂಗಳಿಂದ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲೂ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

|ಎಸ್.ಎನ್.ವಿಜಯಕುಮಾರ್, ಆರೋಗ್ಯ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಲಾರ

ಆರೋಗ್ಯ ಕರ್ನಾಟಕ ಉತ್ತಮ ಯೋಜನೆಯಾಗಿದ್ದು, ಬಡ ರೋಗಿಗಳಿಗೆ ಬಹುತೇಕ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ. ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ತಂದಲ್ಲಿ ಆರೋಗ್ಯ ಕಾರ್ಡ್ ಹೊಂದಿರದಿದ್ದರೂ ಚಿಕಿತ್ಸೆ ನೀಡಲಾಗುತ್ತದೆ. ಮಾಹಿತಿ ಕೊರತೆಯಿಂದ ಜನತೆ ಕಾರ್ಡ್​ಗೆ ಮುಗಿಬೀಳುತ್ತಿದ್ದಾರೆ.

|ಡಾ.ಪಿ. ಸತೀಶ್, ಒಪಿಡಿ ಸರ್ಜನ್ ಕೆ.ಸಿ. ಜನರಲ್ ಆಸ್ಪತ್ರೆ

ಈ ಹಿಂದಿನ ಆರೋಗ್ಯ ಯೋಜನೆಗಳೇ ಉತ್ತಮವಾಗಿದ್ದವು. ಇದೀಗ ನಮ್ಮಂತಹ ಜನಸಾಮಾನ್ಯರು ಪರದಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಫೋಟೋ ಇಲ್ಲ ಎಂಬ ಕಾರಣಕ್ಕೆ ಹೆಲ್ತ್ ಕಾರ್ಡ್ ನಿರಾಕರಿಸುತ್ತಿದ್ದಾರೆ.

|ಶಿವಕುಮಾರ್, ಮೈಸೂರು ರಸ್ತೆ ನಿವಾಸಿ

Stay connected

278,745FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...