Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಬಡ ಜೈನ ವಿದ್ಯಾರ್ಥಿಗಳಿಗೆ ಅರಿಹಂತ ಫೌಂಡೇಶನ್‌ ನೆರವು

Thursday, 14.06.2018, 5:44 PM       No Comments

ಹಾರೂಗೇರಿ: ಬಡ ಪ್ರತಿಭಾವಂತ ಜೈನ ವಿದ್ಯಾರ್ಥಿಗಳು ಬಡತನದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಯಬಾಗ ತಾಲೂಕಿನ ಜೈನ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅರಿಹಂತ ಚಾರಿಟೇಬಲ್ ೌಂಡೇಶನ್ ಆರ್ಥಿಕ ನೆರವು ನೀಡುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಫೌಂಡೇಶನ ಅಧ್ಯಕ್ಷ ಡಿ.ಸಿ.ಸದಲಗಿ ಹೇಳಿದ್ದಾರೆ.
ಸ್ಥಳೀಯ ಜೈನ ಮಂದಿರದಲ್ಲಿ ಮಂಗಳವಾರ ನಡೆದ ಫೌಂಡೇಶನ್ ದಾನಿಗಳಿಗೆ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಡು ಬಡತನ ಹಾಗೂ ಸಾಂಸಾರಿಕ ತೊಂದರೆಗಳಿಂದ ಜೈನ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದಾರೆ. ಜೈನ ಸಮಾಜದಿಂದ ಹಿಂದುಳಿದವರಿಗಾಗಿಯೇ ಅರಿಹಂತ ಚಾರಿಟೇಬಲ್ ಫೌಂಡೇಶನ್ ಎಂಬ ಬೃಹತ್ ಸಂಘಟನೆಯನ್ನು ಸ್ಥಾಪಿಸಿ, ಅವರಿಗೆ ಸೂಕ್ತ ಸಹಾಯ ಸಹಕಾರ ನೀಡಲಾಗುತ್ತಿದೆ ಎಂದರು.
ಕಾರ್ಯದರ್ಶಿ ಎಂ.ಪಿ.ಖಾನಟ್ಟಿ ಮಾತನಾಡಿ ಫೌಂಡೇಶನ್ ಆಶ್ರಯದಲ್ಲಿ ಗಣಪತರಾಯ ಗಂಗಾರಾಮ ಹಜಾರೆ ಮತ್ತು ಶ್ರೀಮತಿ ಪ್ರಭಾವತಿ ಹಜಾರೆ ದಂಪತಿಗಳು ತಾಲೂಕಿನ ಜೈನ ಬಡ ವಿದ್ಯಾರ್ಥಿಗಳಿಗೆ ನೆರವಾಗಲು 2018-19 ನೇ ಸಾಲಿಗೆ ಪ್ರೋತ್ಸಾಹ ಧನ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದಲ್ಲಿ ಶೇ 80 ಕ್ಕಿಂತ ಹೆಚ್ಚು ಅಂಕಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.
ಅರ್ಹ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯೊಂದಿಗೆ ಅರ್ಜಿ ಜೊತೆಗೆ ದೃಢೀಕೃತ ಅಂಕಪಟ್ಟಿ, ವ್ಯಾಸಂಗ ಪ್ರಮಾಣ ಪತ್ರದ ವಿವರಗಳೊಂದಿಗೆ ಜುಲೈ 31 ರೊಳಗಾಗಿ ಕಾರ್ಯದರ್ಶಿಗಳು ಅರಿಹಂತ ಚಾರಿಟೇಬಲ್ ಫೌಂಡೇಶನ, ಪಿ.ಎಂ.ಖಾನಟ್ಟಿ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಹತ್ತಿರ ಅಳಗವಾಡಿ, ತಾಲೂಕ ರಾಯಬಾಗ ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 9482383030 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಫೌಂಡೇಶನ ಸದಸ್ಯರಾದ ನೇಮಿನಾಥ ಅಸ್ಕಿ, ಡಿ.ಎಂ.ಶೆಟ್ಟಿ, ಶೀತಲ ಬೇಡಕಿಹಾಳೆ, ಸಂಜಯ ಹಂಜೆ, ಧರ್ಮಪಾಲ ಕುರಾಣಿ, ಸಿದ್ದಪ್ಪ ನಾಗನೂರ, ಈರಗೌಡ ಪಾಟೀಲ, ಭರತೇಶ ಪಾಟೀಲ, ಸಂಜು ಬಡೋರೆ, ಪಾರೀಸ್ ಉಗಾರೆ, ವರ್ಧಮಾನ ಬನವಣೆ, ಕಾರ್ಯದರ್ಶಿ ಎಂ.ಪಿ.ಖಾನಟ್ಟಿ ಹಾಗೂ ಫೌಂಡೇಶನ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back To Top