ಚಾಮರಾಜನಗರ: ಮಹಾಮಾರಿ ಕರೊನಾ ತೊಲಗಿಸಿ ನಮ್ಮನ್ನ ರಕ್ಷಿಸು ದೇವರೆ ಎಂದು ವಿಶ್ವಾದ್ಯಂತ ಕೋಟ್ಯಂತರ ಜನರು ದೇವನಾಮ ಜಪಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಯುವಕ ಲಾಕ್ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿರುವ ಮದ್ಯದಂಗಡಿ ಶೀಘ್ರವೇ ತೆರೆಯಲೆಂದು ಪ್ರಾರ್ಥಿಸಿ ಎಂಎಸ್ಐಎಲ್ ಮಳಿಗೆಯೊಂದರ ಬಾಗಿಲಿಗೆ ಪೂಜೆ ಸಲ್ಲಿಸಿದ್ದಾನೆ!
ನಗರದ ಮಹದೇವ ಪ್ರಸಾದ್ ಎಂಬಾತ ಶನಿವಾರ ಖಾಸಗಿ ಬಸ್ ನಿಲ್ದಾಣ ಪಕ್ಕದ ರಸ್ತೆಯಲ್ಲಿರುವ ಎಂಎಸ್ಐಎಲ್ ಮಳಿಗೆ ಬಾಗಿಲಿಗೆ ಅರಿಶಿಣ-ಕುಂಕುಮ ಹಚ್ಚಿ, ನೈವೇದ್ಯಕ್ಕೆಂದು ಬಾಳೆಹಣ್ಣು ಇಟ್ಟು, ಗಂಧದಕಡ್ಡಿ ಬೆಳಗಿ ಪೂಜೆ ಸಲ್ಲಿಸಿದ್ದಾನೆ. ಮದ್ಯದಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಬೇಗ ತೀರ್ಮಾನ ಕೈಗೊಳ್ಳಬೇಕು ಎಂದು ಪ್ರಾರ್ಥಿಸಿದ್ದಾನೆ.
ಮೇ 4ರಿಂದ ಜನ್ ಧನ್ ಖಾತೆಗೆ 2ನೇ ಹಂತದ ಹಣ ಜಮೆ, ಈ ಹಣ ಪಡೆಯಲು ಕೆಲದಿನ ಕಾಯಬೇಕು ಏಕೆ?