More

    ಕನ್ನಡತಿ ಪೂಜಾ ಹೆಗ್ಡೆ ಬಲು ದುಬಾರಿ

    ಕನ್ನಡತಿ ಪೂಜಾ ಹೆಗ್ಡೆ ಸದ್ಯ ಕಾಲಿವುಡ್, ಟಾಲಿವುಡ್, ಬಾಲಿವುಡ್​ಗಳಲ್ಲಿ ಬಿಜಿ ನಟಿ. ತಮಿಳಿನ ’ಮೂಗಮುಡಿ’ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟ ಅವರು, ಮೊದಲ ಚಿತ್ರದಲ್ಲಿನ ಅಭಿನಯದಿಂದ ‘ಉತ್ತಮ ನಟಿ’ ಎಂದು ಕರೆಸಿಕೊಂಡ ಪ್ರವೀಣೆ. ಸದ್ಯ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆಂಬ ಮಾತುಗಳು ಬಾಲಿವುಡ್​ನಿಂದ ಕೇಳಿಬರುತ್ತಿವೆ.

    ತೆಲುಗಿನ ‘ಒಕ ಲೈಲಾ ಕೋಸಂ’, ‘ಮುಕುಂದ’, ‘ದುವ್ವಡ ಜಗನ್ನಾಥಮ್, ‘ಸಾಕ್ಷ್ಯಂ’, ‘ಮಹರ್ಷಿ’, ಹಿಂದಿಯ ‘ಮೊಹೆಂಜೊದಾರೋ’, ‘ಹೌಸ್​ಫುಲ್-4’ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಪೂಜಾ ಹೆಗ್ಡೆಗೆ ಸದ್ಯ ಬೇಡಿಕೆ ಹೆಚ್ಚಾಗಿದೆ. ಈ ಹಿಂದಿನ ಒಂದೆರೆಡು ಚಿತ್ರಕ್ಕೆ 1.5 ಕೋಟಿ ರೂ. ಪಡೆದಿದ್ದ ಪೂಜಾ, ಬಾಲಿವುಡ್​ನ ‘ಹೌಸ್​ಫುಲ್-4’ ಚಿತ್ರದ ಸೂಪರ್ ಹಿಟ್ ನಂತರ ಸಂಭಾವನೆ ಏಕ್​ದಂ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಸದ್ಯ ತೆಲುಗಿನ ‘ಜಾನ್’ ಚಿತ್ರದಲ್ಲಿ ಬಿಜಿ ಇರುವ ಪೂಜಾಗೆ ಬಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸಲು ಅವಕಾಶ ಬಂದಿದ್ದು, ಇದಕ್ಕಾಗಿ ಇವರು ಬರೋಬ್ಬರಿ 2.5 ಕೋಟಿ ರೂ. ಬೇಡಿಕೆ ಇಟ್ಟಿದ್ದಾರಂತೆ. ಸದ್ಯ ಬಹುಬೇಡಿಕೆ ನಟಿಯಾಗಿರುವ ಪೂಜಾ ಹೆಗ್ಡೆ, ಇಷ್ಟು ಮೊತ್ತದ ಸಂಭಾವನೆ ಕೇಳಿದ್ದರೂ ಅಚ್ಚರಿ ಇಲ್ಲ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts