ಹೈದರಾಬಾದ್: ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’, ‘ಹೌಸ್ಫುಲ್ 4’ ಸೇರಿದಂತೆ ಹಲವು ಸಿನಿಮಾಗಳ ಮುಖೇನ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟ ಸೌತ್ ಬ್ಯೂಟಿ, ನಟಿ ಪೂಜಾ ಹೆಗ್ಡೆ ಸದ್ಯ ಚಿತ್ರರಂಗದಿಂದ ಅದ್ಯಾಕೋ ದೂರ ಉಳಿದಂತೆ ಕಂಡುಬಂದಿದೆ. ಪ್ರಸ್ತುತ ಬಾಲಿವುಡ್ ಚಿತ್ರದಲ್ಲಿ ಅಭಿಯಿಸುತ್ತಿರುವ ಪೂಜಾ, ಹೆಚ್ಚೆಚ್ಚು ಅವಕಾಶಗಳನ್ನು ಪಡೆಯದೆ, ಟಾಪ್ ನಟಿಯರ ಸಾಲಿನಿಂದ ಸದ್ಯ ಬಹಳ ದೂರ ಉಳಿದಿದ್ದಾರೆ.
ಇದನ್ನೂ ಓದಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ! ದೇವರ ದರ್ಶನಕ್ಕೆ ಹೊರಟ್ಟಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣ
2024ರ ಜನವರಿಯಲ್ಲಿ ರಿಲೀಸ್ ಆದ ಮಹೇಶ್ ಬಾಬು ಅವರ ‘ಗುಂಟೂರು ಕಾರಂ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಪೂಜಾ, ಆ ಚಿತ್ರದಿಂದ ಸಂಭಾವನೆ ಮತ್ತು ಕೆಲವು ವಿಷಯಕ್ಕಾಗಿ ಹೊರನಡೆದರು. ಇದಾದ ನಂತರ ಹಲವು ಅವಕಾಶಗಳನ್ನು ಕಳೆದುಕೊಂಡ ಸ್ಟಾರ್ ಬೆಡಗಿ, ತಮ್ಮ ಕೈಯಲ್ಲಿ ಸ್ಟಾರ್ ನಟರೊಂದಿಗಿನ ಬಿಗ್ ಪ್ರಾಜೆಕ್ಟ್ ಹಿಡಿಯುವಲ್ಲಿ ವಿಫಲರಾದರು. ಇದರ ಜತೆಗೆ ಅವರ ಡಿಮ್ಯಾಂಡ್ ಮತ್ತು ಸಂಭಾವನೆ ಮೊತ್ತ ಕೂಡ ದಿಢೀರ್ ಇಳಿಕೆಯಾಯಿತು. ಸದ್ಯ ಈ ಎಲ್ಲಾ ವಿಷಯಗಳು ಅವರ ಅಭಿಮಾನಿಗಳಲ್ಲಿ ತೀವ್ರ ಗೊಂದಲ ಹುಟ್ಟುಹಾಕಿತ್ತು. ಇದೀಗ ಆ ಪ್ರಶ್ನೆಗಳಿಗೆ ಪೂಜಾ ಕಡೆಗೂ ಉತ್ತರಿಸಿದ್ದಾರೆ.
ಏರಿಳತದ ಬಗ್ಗೆ ಮೌನ ಮುರಿದ ನಟಿ
ತಮಿಳು ನಟ ದಳಪತಿ ವಿಜಯ್ ಜತೆಗಿನ ‘ಬೀಸ್ಟ್’ ಚಿತ್ರದಲ್ಲಿ ಅಭಿನಯಿಸಿದ ಪೂಜಾ ಹೆಗ್ಡೆ, ನಂತರದಲ್ಲಿ ಅಷ್ಟಾಗಿ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಮತ್ತು ಜನಪ್ರಿಯತೆ ಪಡೆಯಲಿಲ್ಲ. ಸದ್ಯ ಯಾವುದೇ ಹಿಟ್ ಸಿನಿಮಾ ಕೊಡದ ಪೂಜಾ, ತಮ್ಮ ಕರಿಯರ್ನಲ್ಲಿ ಕಾಣುತ್ತಿರುವ ಏರಿಳತದ ಬಗ್ಗೆ ಇದೀಗ ಕಡೆಗೂ ಮೌನ ಮುರಿದಿದ್ದಾರೆ. ಹಿಟ್ ಫ್ಲಾಪ್ಗಳ ನನಗೆ ಚಿಂತೆಯಿಲ್ಲ, ಅದರ ಬಗ್ಗೆ ಭಯವೂ ಇಲ್ಲ ಎಂದು ಹೇಳಿದ್ದಾರೆ.
ನೂರರಷ್ಟು ನ್ಯಾಯ
“ನನಗೆ ಸಿಗುವ ಪಾತ್ರಗಳಿಗೆ ನೂರಕ್ಕೆ ಒದಗಿಸುತ್ತಿದ್ದೇನೆ ಮತ್ತು ಒಳ್ಳೆಯ ಸಮಯಕ್ಕಾಗಿ ಎದುರು ನೋಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಎರಡು ತಮಿಳು ಮತ್ತು ಒಂದು ಹಿಂದಿ ಸಿನಿಮಾದಲ್ಲಿ ಬಿಸಿಯಾಗಿರುವ ಪೂಜಾ ಹೆಗ್ಡೆ, ಶೀಘ್ರವೇ ತಮ್ಮ ಅಭಿಮಾನಿಗಳ ಮುಂದೆ ಹಾಜರಾಗಲು ಸಕಲ ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್).
ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ