ನಾನಿನ್ನೂ ಜೆಡಿಎಸ್​ನಲ್ಲೇ ಇದ್ದೀನಿ ಎಂದ ನಟಿ ಪೂಜಾ ಗಾಂಧಿ ಮಂಡ್ಯ ರಾಜಕಾರಣ ಬಗ್ಗೆ ಹೇಳಿದ್ದು ಹೀಗೆ…

ಬೆಂಗಳೂರು: ಇಷ್ಟು ದಿನ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದ ನಟಿ ಪೂಜಾ ಗಾಂಧಿ ಅವರು ತಮ್ಮ ನಟನೆಯ ‘ಸಂಹಾರಿಣಿ’ ಚಿತ್ರದ ಕುರಿತು ಮಾತನಾಡಲು ಮತ್ತೆ ಮಾಧ್ಯಮಗಳ ಎದುರು ಬಂದ ಅವರು ತಮ್ಮ ಚಿತ್ರದ ಜತೆಯಲ್ಲಿಯೇ ರಾಜಕಾರಣದ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಾರಂಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಪೂಜಾ ಗಾಂಧಿ, ಸಂಹಾರಿಣಿ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಇದೊಂದು ಪಕ್ಕಾ ಮಾಸ್​ ಚಿತ್ರವಾಗಿದೆ ಎಂದು ಹೇಳಿದರು. ಬಳಿಕ ರಾಜಕೀಯ ಕುರಿತು ನಾನಿನ್ನೂ ಜೆಡಿಎಸ್​ ಪಕ್ಷದಲ್ಲೇ ಇದ್ದೀನಿ, ನಮ್ಮ ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಪಕ್ಷ ಅತ್ಯಧಿಕ ಸೀಟು ಗೆಲ್ಲುವ ಭರವಸೆಯಿದೆ. ಸದ್ಯದಲ್ಲೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಮತದಾನೋತ್ತರ ಸಮೀಕ್ಷೆ ಹಾಗೂ ಮಂಡ್ಯ ರಾಜಕಾರಣದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ ಪೂಜಾ, ಸಮೀಕ್ಷೆ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಕಳೆದ ಮೂರು ವರ್ಷದಿಂದ ನ್ಯೂಸ್​ ಪೇಪರ್​ ಓದುವುದನ್ನು ನಿಲ್ಲಿಸಿದ್ದೇನೆ ಎಂದರು. ಮಂಡ್ಯ ಚುನಾವಣೆ ಫಲಿತಾಂಶದ ಕುರಿತು ನಾನೇನೂ ಮಾತಾಡಲ್ಲ. ಅವರೆಲ್ಲರೂ ದೊಡ್ಡ ನಾಯಕರು. ಅವರ ಕುರಿತು ಮಾತಾಡುವಷ್ಟು ದೊಡ್ಡವಳು ನಾನಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *