ರೈಸ್ ಇಂಡಸ್ಟ್ರೀಸ್‌ನಲ್ಲಿ ಮಾಲಿನ್ಯ ತಪಾಸಣೆ

blank

ಹೊಳೆಹೊನ್ನೂರು: ಪಟ್ಟಣದ ರಬ್ಬಾನಿ ರೈಸ್ ಇಂಡಸ್ಟ್ರೀಸ್‌ನಿಂದ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಆಗುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶನಿವಾರ ಯಂತ್ರ ಅಳವಡಿಸಿ ಮಾಲಿನ್ಯ ತಪಾಸಣೆ ನಡೆಸಲಾಯಿತು.
ಪಟ್ಟಣದ ಚನ್ನಗಿರಿ ರಸ್ತೆಯಲ್ಲಿರುವ ರೈಸ್ ಇಂಡಸ್ಟ್ರೀಸ್‌ನಲ್ಲಿ ಭತ್ತ ಬೇಯಿಸಿ ಕುಚ್ಚಲಕ್ಕಿ ಮಾಡುತ್ತಾರೆ. ಭತ್ತ ಬೇಯಿಸಿದ ನೀರು ಶ್ರೀ ವೀರಭದ್ರೇಶ್ವರ ಲೇಔಟ್‌ನ ಚರಂಡಿ ಮೂಲಕ ಹರಿಸುವುದರಿಂದ ದುರ್ವಾಸನೆ ಬರುತ್ತಿದೆ. ಅಲ್ಲದೆ ಭತ್ತ ಸಂಸ್ಕರಣೆ ಸಂದರ್ಭ ಹೊರ ಸೂಸುವ ಹೊಗೆ, ಬೂದಿ ಹಾಗೂ ಭತ್ತದ ಸಣ್ಣ ಹೊಟ್ಟು ಸ್ಥಳೀಯ ನಿವಾಸಿಗಳ ಮನೆಯೊಳಗೆ ಹಾಗೂ ಆಹಾರ ಪದಾರ್ಥದ ಮೇಲೆ ಕೂರುತ್ತಿದೆ. ಆದ್ದರಿಂದ ಈ ಬಗ್ಗೆ ಕ್ರಮ ವಹಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗಿತ್ತು. ಯಂತ್ರದ ಮೂಲಕ ಸುಮಾರು 8 ಗಂಟೆಗಳ ಕಾಲ ಸುತ್ತಮುತ್ತಲ ಪರಿಸರದಲ್ಲಿನ ಮಾಲಿನ್ಯ ಸಂಗ್ರಹಿಸಲಾಯಿತು. ಅದನ್ನು ದಾವಣಗೆರೆಯಲ್ಲಿರುವ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಮಾಲಿನ್ಯದ ಬಗ್ಗೆ ದೃಢಪಟ್ಟಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತದೆ ಎಂದು ಪರಿಸರ ಅಧಿಕಾರಿ ವಿ.ರಮೇಶ್ ತಿಳಿಸಿದರು.
ಕ್ಷೇತ್ರ ಸಹಾಯಕ ಬಿ.ಆರ್.ವಿನಾಯಕ, ಸ್ಥಳೀಯ ನಿವಾಸಿ ಎಚ್.ಬಿ.ಶ್ರೀನಿವಾಸ್ ಇತರರಿದ್ದರು.

Share This Article

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…