ಅರಟಾಳ: ಮತಗಟ್ಟೆಗಳ ಪರಿಶೀಲನೆ

ಅರಟಾಳ: ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸುವ ವೃದ್ಧರಿಗೆ ಅನುಕೂಲವಾಗುವಂತೆ ಎರಡೂ ರ‌್ಯಾಂಪ್ ಬದಿಗೆ ಕಬ್ಬಿಣದ ರಾಡ್ ಅಳವಡಿಸಬೇಕು ಎಂದು ಅಥಣಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೆ.ಎಲ್. ಶ್ರೀನಿವಾಸ ಹೇಳಿದ್ದಾರೆ.

ಸಮೀಪದ ಕೋಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ಮತಗಟ್ಟೆ ಪರಿಶೀಲಿಸಿ ಮಾತನಾಡಿ, ಕೋಹಳ್ಳಿ ಗ್ರಾಮದಲ್ಲಿ ರಾಜಕೀಯ ಪಕ್ಷ, ನಾಯಕರನ್ನು ಒಳಗೊಂಡ ಬ್ಯಾನರ್, ಹೋರ್ಡಿಂಗ್ಸ್ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಕಕಮರಿ, ಕೊಟ್ಟಲಗಿ ಹಾಗೂ ಕೊಟ್ಟಲಗಿ ಸರಹದ್ದಿನಲ್ಲಿರುವ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿರುವುದಾಗಿ ತಿಳಿಸಿದ ಅವರು, ಪ್ರತಿ ಗ್ರಾಮದ ಮತಗಟ್ಟೆಯಲ್ಲಿ ಸಿಸಿ ಕ್ಯಾಮರಾ, ವಿದ್ಯುತ್ ಸೌಲಭ್ಯ, ರ‌್ಯಾಂಪ್, ಕಿಟಕಿ, ಬಾಗಿಲು, ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ತೆಲಸಂಗ ಕಂದಾಯ ನಿರೀಕ್ಷಕ ಬಿ.ಬಿ.ಮ್ಯಾಗೇರಿ, ಗ್ರಾಮ ಲೆಕ್ಕಾಧಿಕಾರಿ ಎಂ.ಎ.ಮುಜಾವರ, ಯಕ್ಕಂಚಿ ಗ್ರಾಮಲೆಕ್ಕಾಧಿಕಾರಿ ಎಸ್.ಡಿ. ಅವಟಿ, ಕೋಹಳ್ಳಿ ಗ್ರಾಮ ಸಹಾಯಕ ಮಹಾಂತೇಶ ನಾಟೀಕಾರ, ಮತಗಟ್ಟೆ ಅಧಿಕಾರಿಗಳಾದ ಸಿದ್ದರಾಮೇಶ್ವರ ಮೋಟಗಿ, ಕೆ.ಡಿ. ಸತ್ತಿ ಮತ್ತಿತರರಿದ್ದರು.