More

    ರಾಜಕಾರಣ, ಸಾಹಿತ್ಯ ಮತ್ತು ಸಮರ್ಥ ರಾಷ್ಟ್ರನಿರ್ಮಾಣ

    ಕ್ರಿಶ ಹದಿನೆದನೇ ಶತಮಾನದಲ್ಲಿ ರಾಣಿ ಇಸಬೆಲ್ಲಾಳ ಆಳ್ವಿಕೆಯ ಸ್ಪೇನ್​ನಲ್ಲಿ ಕೊಲಂಬಸ್​ಗೆ ಸಮಕಾಲೀನನಾಗಿ ಆಂಟೋನಿಯೋ ನೆಬ್ರಿಜಾ (1444&1522) ಎಂಬುವನಿದ್ದ. ಆ ವೇಳೆಗೆ ಇಸಬೆಲ್ಲಾ ಕೊಲಂಬಸನಿಗೆ, ಖಂಡಾಂತರ ಸಮುದ್ರಯಾನಕ್ಕಾಗಿ ಸಹಾಯ ಮಾಡಿದ್ದಳು. ಆಗ ನೆಬ್ರಿಜಾ ರಾಣಿಗೆ ಒಂದು ಅಹವಾಲು ಸಲ್ಲಿಸಿದ: “ಸ್ಪೇನ್​ ಸಾಮ್ರಾಜ್ಯದ ನಿರ್ಮಾಣಕ್ಕೆ ಅಸ್ತಿವಾರವಾಗಬಹುದಾದ ಸಂಗತಿಯೆಂದರೆ, ಖಂಡಾಂತರ ಸಮುದ್ರಯಾನದ ಸಾಹಸವಲ್ಲ; ಅದಕ್ಕೂ ಮೊದಲು ಸ್ಪಾನಿಶ್​ ಭಾಷೆಯ ಹತ್ತು ಹಲವು ಗ್ರಾಮ್ಯರೂಢಿಗಳನ್ನು ಏಕೀಕರಿಸಿ, ಅದನ್ನು ಶುದ್ಧೀಕರಿಸಿ ಒಂದು ಅಧಿಕತ ರಾಜಭಾಷೆಯನ್ನು ಸಿದ್ಧಗೊಳಿಸಬೇಕು; ಅದಕ್ಕೆ ಸ್ಪಾನಿಶ್​ ಭಾಷೆಯ ಒಂದು ಅಧಿಕತ ವ್ಯಾಕರಣ ಅಗತ್ಯ. ನಾನು ವ್ಯಾಕರಣ ರಚನೆ ಮಾಡುತ್ತೇನೆ. ನನಗೆ ರಾಜಸಹಾಯವನ್ನು ನೀಡಿ’. ಆ ನಂತರದಲ್ಲಿ ಆತ ಸ್ಪಾನಿಶ್​ ಭಾಷೆಯ ಅಧಿಕತ ವ್ಯಾಕರಣ ರಚಿಸಿದ.

    ರಾಜಕಾರಣ, ಸಾಹಿತ್ಯ ಮತ್ತು ಸಮರ್ಥ ರಾಷ್ಟ್ರನಿರ್ಮಾಣಕೆ.ವಿ.ಸುಬ್ಬಣ್ಣನವರು ನೆಬ್ರಿಜಾನ ಪ್ರಸಂಗವನ್ನು ಉಲ್ಲೇಖಿಸಿ ಭಾಷೆ ಹಾಗೂ ರಾಜ್ಯದ ಸಂಬಂಧವನ್ನು ವಿವರಿಸುತ್ತಾರೆ: “ಒಂದು ರಾಜ್ಯ ಅಥವಾ ಸಾಮ್ರಾಜ್ಯದ ನಿರ್ಮಾಣಕ್ಕೆ ಮೊದಲು ಭಾಷೆಯ ನಿರ್ಮಾಣವಾಗಬೇಕು ಹಾಗೂ ಭಾಷೆಯಲ್ಲಿ ಭಾವೀ ರಾಜ್ಯದ ಅಸ್ತಿವಾರನೆಯನ್ನು ಸಿದ್ಧಪಡಿಸಿಕೊಳ್ಳಬೇಕು’. ನೆಬ್ರಿಜಾನ ಚಿಂತನೆಯ ಸ್ವರೂಪವಿದು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ನಂದರು ಸಾಮ್ರಾಜ್ಯ ನಿರ್ಮಿಸಲು ಮುಂದಾದಾಗ ಅದಕ್ಕೆ ಹಿನ್ನೆಲೆಯಾಗಿ “ಅರ್ಥಶಾಸ್ತ್ರ’ ರಚನೆಯಾದದ್ದನ್ನು ಸುಬ್ಬಣ್ಣ ಇಲ್ಲಿ ನೆನಪಿಸಿಕೊಳ್ಳುತ್ತಾರೆ. ಅರ್ಥಶಾಸ್ತ್ರವೆಂದರೆ ಇಲ್ಲಿ ರಾಜ್ಯಶಾಸ್ತ್ರ ಹಾಗೂ ಆಡಳಿತಶಾಸ್ತ್ರವೇ! ನಂತರ ಅಶೋಕನ ಕಾಲಕ್ಕೆ “ಸಾಮ್ರಾಜ್ಯ ನಿರ್ಮಾಣವೆಂದರೆ ಕೇವಲ ರಾಜ್ಯಶಾಸ್ತ್ರ, ಆಡಳಿತಶಾಸ್ತ್ರಗಳ ಬುನಾದಿಯಷ್ಟೇ ಸಾಲದು ಭಾಷೆಯ ಮೂಲಕ ಪ್ರಜಾಜನರನ್ನು ಶಿಣ ಕೊಟ್ಟು ಸಂಸ್ಕಾರಗೊಳಿಸುವ ಕಾರ್ಯವೂ ನಡೆಯಬೇಕು’ ಎಂಬ ಭಾವನೆಯುಂಟಾಯ್ತು. ಈ ಹಿನ್ನೆಲೆಯಲ್ಲಿಯೇ ಅಶೋಕನ ಕಾಲದಲ್ಲಿ ನಮ್ಮಲ್ಲಿ ವ್ಯಾಪಕವಾಗಿ ಲಿಪಿಗಳ ಬಳಕೆಯಾಗತೊಡಗಿದ್ದು. ಸಾಮ್ರಾಜ್ಯ ನಿರ್ಮಾಣದ ಅಶೋಕನ ಚಿಂತನೆಯಲ್ಲಿ ಎರಡು ಸಂಗತಿಗಳು ಮುಖ್ಯವೆನ್ನಿಸುತ್ತವೆ: ಒಂದು ಭಾಷೆಯ ಮೂಲಕ ಪ್ರಜಾಜನರಿಗೆ ಶಿಣ ನೀಡುವುದು; ಮತ್ತೊಂದು ಆ ಮೂಲಕ ಸಂಸ್ಕಾರವಂತ ಪ್ರಜೆಗಳನ್ನು ರೂಪಿಸುವುದು. ಕನ್ನಡದ “ಕವಿರಾಜಮಾರ್ಗ’ ದ ಚಿಂತನೆಗಳನ್ನು ನಾವು ಈ ಹಿನ್ನೆಲೆಯಲ್ಲಿಯೇ ಗಮನಿಸಬೇಕು.

    “ಕವಿರಾಜಮಾರ್ಗ’ದ ಶೀರ್ಷಿಕೆಗೆ ಸಾಮಾನ್ಯವಾಗಿ ಕವಿಗಳಿಗೆ ರಾಜಮಾರ್ಗವನ್ನು ತೋರಿಸುವಂಥದು ಹಾಗೂ ಸಮರ್ಥ ಕವಿಯೊಬ್ಬ ಹಾಕಿಕೊಟ್ಟ ರಾಜಮಾರ್ಗ ಎಂಬ ಎರಡು ಅರ್ಥಗಳು ರೂಢಿಯಲ್ಲಿವೆ. ಆದರೆ ಸುಬ್ಬಣ್ಣ ಇದನ್ನು ಮತ್ತೊಂದು ರೀತಿಯಲ್ಲಿ ವಿವರಿಸಿದ್ದಾರೆ. “ಕವಿರಾಜಮಾರ್ಗ’ವೆಂದರೆ “ಕವಿ’ಯೂ ರಾಜನೂ ಕೂಡಿ ನಿರ್ಮಿಸಿರುವ ಮಾರ್ಗ’. ಇದನ್ನು ಅವರು ಹೀಗೆ ವಿವರಿಸುತ್ತಾರೆ: ಶ್ರೀವಿಜಯ ಕವಿ, ನಪತುಂಗ ರಾಜ, ಇವರಿಬ್ಬರೂ ಕೂಡಿ ರಚಿಸಿರುವ ಗ್ರಂಥವಿದು. ಕವಿಕಾಯಕ ಮತ್ತು ರಾಜಕಾಯಕಗಳ ಅರ್ಥಾತ್​ ಕಾವ್ಯ(ಭಾಷೆ) ಮತ್ತು ಪ್ರಭುತ್ವಗಳ ಶಕ್ತಿಯುತ ಸಂಬಂಧವನ್ನು ಇದು ಸೂಚಿಸುತ್ತದೆ. ಕವಿಕಾಯಕವು “ಭಾವ’ದ ಸೂಕ್ಷ$್ಮಸ್ತರಕ್ಕೆ ಸಂಬಂಧಿಸಿದ್ದು ಮತ್ತು ಪ್ರಭುತ್ವಕಾಯಕವು “ಭವ’ದ ಮೂರ್ತಸ್ತರಕ್ಕೆ ಸಂಬಂಧಿಸಿದ್ದು. ಮೊದಲು “ಭಾವಲೋಕ’ದ ನಿರ್ಮಾಣವಾಗಿ ನಂತರ ಅದರ ಅಸ್ತಿವಾರದ ನೆಯ ಮೇಲೆ “ಭವಲೋಕ’ ನಿರ್ಮಾಣಗೊಳ್ಳುತ್ತದೆ. ಕವಿಯೂ ರಾಜನೂ ಕೂಡಿಕೊಂಡು ಭಾವಕನ್ನಡ, ಭವಕನ್ನಡಗಳ ಹೊಂದಾಣಿಕೆಯ ಸಷ್ಟಿಗೆ ಕೆಚಾಚಿರುವುದನ್ನು “ಕವಿರಾಜಮಾರ್ಗ’ ನಿರೂಪಿಸುತ್ತದೆ.

    ಅಂದರೆ ಕನ್ನಡ ಮನಸ್ಸು ಪ್ರಭುತ್ವ ಹಾಗೂ ಸಜನಶೀಲ ಮನಸ್ಸು ಒಟ್ಟಿಗೆ ಸೇರಿ ರಾಷ್ಟ್ರನಿರ್ಮಾಣ ಮಾಡಬೇಕಾದ ಅಗತ್ಯವನ್ನು, ಅದರ ಅರ್ಥಪೂರ್ಣತೆಯನ್ನು ಇಲ್ಲಿ ಚಿಂತಿಸುತ್ತಿದೆ. ಮನುಷ್ಯನಿಗೆ ಭಾವದ ಲೋಕಾಕಾರವನ್ನು ರೂಪಿಸಿಕೊಡುವ ಪ್ರಮುಖ ಸಾಧನ ಭಾಷೆ; ಭವದ ಲೋಕಾಕಾರವನ್ನು ನಿರ್ಮಿಸಿಕೊಡುವಂಥದು ರಾಜಕೀಯ. ಇವೆರಡೂ ಪರಸ್ಪರ ಪ್ರಭಾವಿಸುತ್ತ ಸಹಧಾರೆಗಳಾಗಿ ಮುನ್ನಡೆದಾಗ ಮಾತ್ರ ಸಮರ್ಥ ರಾಷ್ಟ್ರನಿರ್ಮಾಣ ಸಾಧ್ಯವೆಂಬುದು ಕವಿರಾಜಮಾರ್ಗದ ನಿಲವು. ಕ್ರಿ ಶ 9ನೇ ಶತಮಾನದಲ್ಲಿ ಕನ್ನಡ ಮನಸ್ಸು ರಾಜಕಾರಣ ಹಾಗೂ ಸಾಹಿತ್ಯದ ಸಂಬಂಧವನ್ನು ಹೀಗೆ ವಿಶ್ಲೇಷಿಸಿರುವುದು ಇಂದಿಗೂ ಪ್ರಸ್ತುತವಾಗಿದೆ. ಕನ್ನಡ ಸಾಹಿತ್ಯದಲ್ಲಿ ಉದ್ದಕ್ಕೂ ಪ್ರಭುತ್ವ ಹಾಗೂ ಸಜನಶೀಲತೆಯ ವ್ಯಾಖ್ಯೆ ಬೇರೆ ಬೇರೆ ನೆಲೆಗಳಲ್ಲಿ ನಡೆದಿರುವುದನ್ನು ನಾವು ಗಮನಿಸಬಹುದು.

    ನಪತುಂಗನದೇ ಆದ “ಸಂಜಾನ ಶಾಸನ’ (ಕ್ರಿ ಶ 871)ದ ಒಂದು ವತ್ತ ಹೀಗಿದೆ: “ರಾಜಾತ್ಮ ಮನ ಏವ ತಸ್ಯ ಸಚಿವ@ ಸಾಮಂತಚಕ್ರಂ ಪುನ@/ತನ್ನಿತ್ಯೇಂದ್ರಿಯವರ್ಗ ಏಷ ವಿಧಿವದ್ವಾಗಾದಯಸ್ಸೇವಕಾ@/ದೇಹಸ್ಥಾನಮಧಿಷ್ಠಿತ@ ಸ್ವವಿಷಯಂ ಭೋಕ್ತುಂ ಸ್ವತಂತ್ರ@ ಮ@/ತಸ್ಮಿನ್​ ಭೋಕ್ತರಿ ಸನ್ನಿಪಾತವಿವಶೇ ಸರ್ವೇಪಿ ನಶ್ಯಂತಿ ತೇ/’. ಇದರ ಅರ್ಥ ಹೀಗಿದೆ: ತನ್ನ ಆತ್ಮವೇ ರಾಜ, ತನ್ನ ಮನಸ್ಸೇ ಮಂತ್ರಿ, ತನ್ನ ಇಂದ್ರಿಯಗಳೇ ಸಾಮಂತವರ್ಗ, ತನ್ನ ಮಾತು ಮುಂತಾದವೇ ಸೇವಕರು& ಹೀಗೆ ತನ್ನ ದೇಹದಲ್ಲೇ ದೇಶವನ್ನು ಅಧಿಷ್ಠಾನಗೊಳಿಸಿಕೊಂಡಿರುವವನು ರಾಜ್ಯವನ್ನು ಸಂಪೂರ್ಣವಾಗಿ ಅನುಭವಿಸಲಿಕ್ಕೆ ತಕ್ಕ ಸಹನಾಶಕ್ತಿಯನ್ನೂ ಸ್ವಾತಂತ್ರ$್ಯವನ್ನೂ ಪಡೆದಿರುತ್ತಾನೆ. ಹೀಗಿದ್ದಾಗ ರಾಜ್ಯದಲ್ಲಿ ಹುಟ್ಟಿಕೊಳ್ಳುವ ರೋಗಸನ್ನಿಪಾತಗಳು ಸಮಸ್ತವೂ ನಾಶವಾಗಿ ಹೋಗುತ್ತವೆ (ನೋಡಿ: ಅರೆಶತಮಾನದ ಅಲೆಬರಹಗಳು, ಕೆ ವಿ ಸುಬ್ಬಣ್ಣ ಪುಟ 411).

    “ದೇಹವೇ ದೇಗುಲ’ ಎಂಬುದು ನಮಗೆ ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಕೊಟ್ಟ ಅದ್ಭುತ ಪರಿಕಲ್ಪನೆ. ಧರ್ಮದ ವ್ಯಾಖ್ಯಾನವನ್ನೇ ಹೊಸ ರೀತಿ ಮಾಡಲು ಇದು ಅವಕಾಶ ಕಲ್ಪಿಸಿತು. ಆದರೆ ಒಂಬತ್ತನೇ ಶತಮಾನದಲ್ಲಿ “ದೇಹವೇ ದೇಶ’ ಎಂದು ಹೇಳುವ ಈ ಪರಿಕಲ್ಪನೆ ನಮಗೆ ಬೆರಗು ಮೂಡಿಸುತ್ತದೆ. ರಾಜ, ಮಂತ್ರಿ, ಸಾಮಂತರು, ಸೇವಕರು& ಎಲ್ಲರೂ ಈ ದೇಹದಲ್ಲಿಯೇ ಇದ್ದಾರೆ. ದೇಶವೇ ದೇಹದಲ್ಲಿ ಅಡಗಿದೆ. ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾದರೆ ದೇಶವನ್ನಾಳುವುದು ಸುಲಭವಾಗುತ್ತದೆ. ಈ ಪದ್ಯ ಕುವೆಂಪು ಹೇಳುವ “ಆತ್ಮಶಕ್ತಿ’ಯನ್ನು ನೆನಪಿಸುತ್ತದೆ. ಯಾವಾತನು ಆತ್ಮಶಕ್ತಿ ಪಡೆದಿರುತ್ತಾನೆಯೋ ಅಂಥವನು ಬುದ್ಧಿಯಲ್ಲಿ, ಭಾವದಲ್ಲಿ, ಹೋರಾಟದಲ್ಲಿ, ಆಡಳಿತಕೌಶಲದಲ್ಲಿ ಆತ್ಮಶ್ರೀವಿಹೀನನಿಗಿಂತಲೂ ನಿಸ್ಸಂದೇಹವಾಗಿ ಮೇಲುಗೆಯಾಗಿರುತ್ತಾನೆ. ರಾಜಕೀಯ&ಸಾಹಿತ್ಯ&ಅಧ್ಯಾತ್ಮ ಇವೆಲ್ಲವೂ ಪರಸ್ಪರ ಪೂರಕವಾದಂಥವು. ನಮ್ಮ ಪುಣ್ಯಭೂಮಿ ಭಾರತದಲ್ಲಿ ಸಮಾಜದ ಅವನತಿಗೆ ಭೋಗಾಕಾಂೆ, ಅತಿಯಾಸೆ ಮಾತ್ರ ಕಾರಣವಲ್ಲ; ಆತ್ಮಸಂಯಮವಿಲ್ಲದೆ ಸುಲಭವಾಗಿ ಪ್ರಭಾವಕ್ಕೊಳಗಾಗುವ ದುರ್ಬಲ ಮನೋಭಾವವೂ ಕಾರಣವಾಗಿದೆ. ನಮ್ಮ ಮತಿ ಎಲ್ಲ ಬಗೆಯ ಬಂಧನಗಳಿಂದ ಬಿಡುಗಡೆ ಪಡೆದು ಸಂಯಮಪೂರ್ಣವಾದ ಬುದ್ಧಿಸ್ವಾತಂತ್ರ$್ಯವನ್ನು ಪಡೆದುಕೊಳ್ಳಬೇಕು. ಮತಿ ನಿಸ್ತೇಜವಾಗದೆ ಕಾಂತಿಯುತವಾಗಿರುವಂತೆ ಕಾಪಾಡಿಕೊಳ್ಳಬೇಕು. ಹೊರಗಿನ ಶತ್ರುವನ್ನು ಎದುರಿಸುವುದಕ್ಕೆ ಮೊದಲು ನಮ್ಮೊಳಗಿನ ಶತ್ರುವನ್ನು ಎದುರಿಸಬೇಕು. ಇಡೀ ಜಗತ್ತನ್ನು ಹೀಗೆ ತನ್ನೊಳಗೆ ಒಳಗೊಳ್ಳುವ ಬಗೆಯೇ ಅತ್ಯಂತ ವಿಶಿಷ್ಟವಾಗಿದೆ.
    ನಮ್ಮ ಕಾಲದ ಆಧುನಿಕ ಸಂದರ್ಭದಲ್ಲಿಯೂ ಕುವೆಂಪು “ರಾಜ್ಯ’ದ ಪರಿಕಲ್ಪನೆಯನ್ನು ರಾಜಕೀಯವಾಗಿಯಾಗಲೀ, ಭೌಗೋಳಿಕವಾಗಿಯಾಗಲೀ ನೋಡುವುದಿಲ್ಲ. ಅವೆರಡನ್ನು ಅವರು ಸ್ವೀಕರಿಸಿಯೂ ಅದನ್ನು ಮೀರಿದ “ಸಾಂಸತಿಕ ಕರ್ನಾಟಕ’ದ ಬಗ್ಗೆ ಅವರ ಆಸಕ್ತಿ. ಈ ಚಿಂತನೆಯನ್ನೇ ಅವರು ಹೀಗೆ ಹೇಳಿದ್ದಾರೆ: “ಇಂದು ಬಂದು ನಾಳೆ ಸಂದು/ ಹೋಹ ಸಚಿವ ಮಂಡಲ/ರಚಿಸುವೊಂದು ಕತಕವಲ್ತೊ/ಸಿರಿಗನ್ನಡ ಸರಸ್ವತಿಯ/ವಜ್ರ ಕರ್ಣಕುಂಡಲ/ಅಖಂಡ ಕರ್ನಾಟಕ/ಅಲ್ತೊ ನಾಲ್ಕು ದಿನದ ರಾಜಕೀಯ ನಾಟಕ /ನಪತುಂಗನೆ ಚಕ್ರವರ್ತಿ/ಪಂಪನಲ್ಲಿ ಮುಖ್ಯಮಂತ್ರಿ/ರನ್ನ ಜನ್ನ ನಾಗವರ್ಮ/ರಾವಾಂಕ ಹರಿಹರ/ಬಸವೇಶ್ವರ ನಾರಣಪ್ಪ/ಸರ್ವ ಷಡರ/ಸರಸ್ವತಿಯೆ ರಚಿಸಿದೊಂದು/ ನಿತ್ಯ ಸಚಿವ ಮಂಡಲ/ತನಗೆ ರುಚಿರ ಕುಂಡಲ’. ಕುವೆಂಪು ಅವರ ಈ ಭಾವಜಗತ್ತಿನ ಮಂತ್ರಿಮಂಡಲದ ರಚನೆಯ ಹಿನ್ನೆಲೆಯಲ್ಲಿ “ಸಾಂಸತಿಕ ಕರ್ನಾಟಕ’ದ ಪರಿಕಲ್ಪನೆಯಿದೆ.

    ಲೌಕಿಕವಾಗಿ ಒಂದು ೇಮರಾಜ್ಯವನ್ನು ನಾವು ರೂಪಿಸಬೇಕು. ಆ ವಿಷಯದಲ್ಲಿ ಸಂಶಯ ಬೇಡ. ಲೌಕಿಕ ಸವಲತ್ತುಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯವೆಂಬುದನ್ನೂ ನಾವು ಒಪ್ಪೋಣ. ಇದು ಭವಜಗತ್ತು. ಈ ಭವಜಗತ್ತಿನಲ್ಲಿ ರಾಜಕೀಯದ ಪಾತ್ರ ಪ್ರಮುಖವಾದುದು. ಆದರೆ ಭವಜಗತ್ತಿನಲ್ಲಿ ಪಡೆದ ಸುಖ, ಸವಲತ್ತುಗಳನ್ನು ಅನುಭವಿಸುವ ಚೇತನ ಅದಕ್ಕೆ ಸಿದ್ಧವಾಗದಿದ್ದರೆ ಏನೆಲ್ಲ ಸವಲತ್ತುಗಳನ್ನು ಒದಗಿಸಿಯೂ ಏನು ಪ್ರಯೋಜನ? ಸುಖ ಭವಜಗತ್ತಿಗೆ ಸಂಬಂಧಿಸಿದ್ದು; ಆದರೆ ಸಂತೋಷ ಭಾವಜಗತ್ತಿಗೆ ಸಂಬಂಧಿಸಿದ್ದು. ಈ ಭಾವಜಗತ್ತನ್ನು ಪೋಷಿಸುವುದು ಸಾಹಿತ್ಯ, ಕಲೆ, ಸಂಸತಿ ಇತ್ಯಾದಿ. ಹೀಗಾಗಿ ಭೌತಿಕ ಅನುಕೂಲಗಳನ್ನು ಒದಗಿಸಿಕೊಡಲು ನಾವು ಎಷ್ಟು ಗಮನ ನೀಡುತ್ತೇವೆಯೋ, ಅಷ್ಟೇ, ಅಥವಾ ಅದಕ್ಕೂ ಕಿಂಚಿತ್​ ಮಿಗಿಲಾಗಿ ನಾಡಿನ ಸಾಹಿತ್ಯ, ಕಲೆ, ಸಂಸತಿ ಇವುಗಳ ಬೆಳವಣಿಗೆಗೆ ಕೊಡಬೇಕೆಂದು ಕುವೆಂಪು ಪ್ರತಿಪಾದಿಸುತ್ತಾರೆ. ಆಧುನಿಕ ಪರಿಭಾಷೆಯಲ್ಲಿ ಇದನ್ನೇ ವಿಜ್ಞಾನ (ಸೆನ್ಸ್​) ಮತ್ತು ಮಾನವಿಕ (ಆರ್ಟ್ಸ್​) ಎಂದು ಕರೆಯಬಹುದು. ವಿಜ್ಞಾನ ಭವಜಗತ್ತಿನ ಸುಖಕ್ಕೆ ಬೇಕಾದ ಸವಲತ್ತುಗಳನ್ನು ಕಲ್ಪಿಸಿದರೆ, ಮಾನವಿಕ ಭಾವಜಗತ್ತಿನ ಸಂತೋಷದ ಮನ@ಸ್ಥಿತಿಯನ್ನು ಪೋಷಿಸುತ್ತದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಮಾನವನ ಪ್ರಾಪಂಚಿಕ ಜೀವನದಲ್ಲಿ ನಾವೆಂದೂ ಕಾಣದ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆ ಇತ್ಯಾತ್ಮಕ ಪರಿಣಾಮ ಬೀರಬೇಕಾದರೆ ಮನುಷ್ಯ ಬೌದ್ಧಿಕವಾಗಿ ಬೆಳೆದರೆ ಸಾಲದು, ಸಂಸತಿಯ ಸ್ಪರ್ಶವೂ ಆತನ ವ್ಯಕ್ತಿತ್ವಕ್ಕಿರಬೇಕು. ಆಗ ಮಾತ್ರ ವಿಜ್ಞಾನದ ಸಾಧನೆ ಅರ್ಥಪೂರ್ಣವಾಗುತ್ತದೆ. ಮಾನವಕುಲದ ಪ್ರಗತಿಗೆ ಎರಡು ನೆಲೆಗಳಿವೆ. ಒಂದು ಬಾಹ್ಯಜಗತ್ತು, ಮತ್ತೊಂದು ಅಂತರಂಗ ಜಗತ್ತು. ಬಹಿರ್ಮುಖತೆಯಿಲ್ಲದ ಅಂತರ್ಮುಖತೆ ಭ್ರಾಂತಿವಿಲಾಸವಾಗುತ್ತದೆ. ಅಂತ@ಶಕ್ತಿಯಿಲ್ಲದ ಬಾಹ್ಯಬದುಕು ರಸವಿಹೀನವಾಗುತ್ತದೆ. ಇವೆರಡರ ಸಮತೂಕ ಹಾಗೂ ಸಮನ್ವಯದಿಂದಲೇ ಸಾರ್ಥಕ ಬದುಕು ಸಾಧ್ಯ. ಆದ್ದರಿಂದ ಉತ್ತಮ ರಾಷ್ಟ್ರನಿರ್ಮಾಣದಲ್ಲಿ ರಾಜಕೀಯ ಎಷ್ಟು ಮುಖ್ಯವೋ ಸಾಹಿತ್ಯ, ಸಂಸತಿ, ಕಲೆಗಳೂ ಅಷ್ಟೇ ಮುಖ್ಯ.

    ನಮ್ಮಲ್ಲಿ ಇತಿಹಾಸವೆಂದರೂ ಅದು ದಿಗ್ವಿಜಯದ ಕತೆಯೇ! ಆದರೆ ಈ ದಿಗ್ವಿಜಯದ ಕತೆ ಜನಸಾಮಾನ್ಯರ ಬದುಕಿನ ಲಯವನ್ನು ಕಿಂಚಿತ್ತೂ ಹಿಡಿಯುವುದಿಲ್ಲ. ಹಾಗೆ ಚಿತ್ರಿಸುವುದು ಸಾಹಿತ್ಯ ಮಾತ್ರ. ರಾಜಕೀಯ ಇತಿಹಾಸ ರಕ್ತರಂಜಿತವೂ ದಾರುಣವೂ ಆದ “ಸಮರಕತೆ’; ರಾಜಕೀಯ ಸಾರ್ವಭೌಮತ್ವಕ್ಕಾಗಿ ನಡೆದ ಸಂಚುಗಳ ಕಥಾನಕ. ಎಲ್ಲ ಕಾಲದಲ್ಲಿಯೂ ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟ ಹಾಗೂ ಅದನ್ನು ಉಳಿಸಿಕೊಳ್ಳಲು, ಪಡೆಯಲು ನಡೆಸುವ ಸಂಚುಗಳ ಕಥನ. ಅಲ್ಲಿ ಸಾಮಾನ್ಯ ಜನತೆಯ ಯಾವ ಬಗೆಯ ಸೂಕ್ಷ$್ಮಸಂವೇದನೆಗಳಿಗೂ ಅವಕಾಶ ಇರುವುದಿಲ್ಲ. ಹೀಗಾಗಿ ಇತಿಹಾಸದ ನಮ್ಮ ಕಲ್ಪನೆಯೂ ಬದಲಾಗಬೇಕು. ಇತಿಹಾಸಕ್ಕೆ ಸಂವೇದನೆಯ ಸ್ಪರ್ಶ, ಸಾಹಿತ್ಯಕ್ಕೆ ಇತಿಹಾಸದ ಪ್ರಜ್ಞೆ ಇಂದಿನ ಅಗತ್ಯ.
    ಎಂತಹ ಸಂಕಷ್ಟದ ಕಾಲದಲ್ಲಿಯೂ ಬದುಕಿಗೆ ಸಾಹಿತ್ಯ ಅಗತ್ಯವೆಂಬುದನ್ನು ಪ್ರಭುತ್ವ ಅರ್ಥಮಾಡಿಕೊಳ್ಳಬೇಕು. ವಾಸ್ತವದ ಪ್ರಖರ ಅರಿವು ಮಾತ್ರವಲ್ಲ ಕನಸು ಕಾಣುವ ಶಕ್ತಿಯೂ ನಮಗೆ ಬೇಕು. ಭೌತಿಕ ಸವಲತ್ತುಗಳು ನಮಗೆ ಏನೆಲ್ಲ ಅನುಕೂಲ ಕಲ್ಪಿಸಿಕೊಟ್ಟರೂ ಕನಸು ಕಾಣುವ ಶಕ್ತಿ ನೀಡಲಾರವು. ಕನಸು ಎಂದರೆ ಕಣಸು/ದರ್ಶನ ಎಂಬ ಅರ್ಥದ ನೆಲೆಯೂ ನನ್ನ ಮನಸ್ಸಿನಲ್ಲಿದೆ. ಇಂತಹ ಕನಸನ್ನು ಸಾಹಿತ್ಯ ನೀಡುತ್ತದೆ. ರಾಷ್ಟ್ರನಿರ್ಮಾಣದಲ್ಲಿ ಇಂತಹ ದರ್ಶನ (ಡಜಿಠಜಿಟ್ಞ) ಅತ್ಯಗತ್ಯ.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts