ಆಸ್ಪತ್ರೆ ಕೆಲಸದಲ್ಲಿ ತೊಡಗಿರುವುದಾಗಿ ಹೇಳಿಕೊಂಡು ಕರೊನಾ ಲಸಿಕೆ ತೆಗೆದುಕೊಂಡ ಶಾಸಕರು

blank

ಕೋಲ್ಕತ: ನಮ್ಮ ದೇಶದಲ್ಲಿ ಯಾವ ಕ್ಷೇತ್ರದಲ್ಲಿ ಪ್ರಭಾವ, ಅಧಿಕಾರ ದುರುಪಯೋಗ ನಡೆಯೋಲ್ಲ ಹೇಳಿ… ಇದೀಗ ಕರೊನಾ ಲಸಿಕೆಯ ವಿಷಯದಲ್ಲೂ ಅದನ್ನೇ ಮಾಡಲು ಕೆಲವು ರಾಜಕಾರಣಿಗಳು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪಶ್ಚಿಮ ಬಂಗಾಳದ ಪೂರ್ಬ ಬರ್ಧಮಾನ ಜಿಲ್ಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ​(ಟಿಎಂಸಿ) ಪಕ್ಷದ ಇಬ್ಬರು ಶಾಸಕರೂ ಸೇರಿ ಹಲವಾರು ನಾಯಕರು ಕ್ಯೂ ತಪ್ಪಿಸಿ ಮೊದಲ ಹಂತದಲ್ಲೇ ಕರೊನಾ ಲಸಿಕೆ ಪಡೆದಿದ್ದಾರೆ ಎಂಬ ಕೂಗು ಎದ್ದಿದೆ. ಅದೇ ಹಲವಾರು ಆರೋಗ್ಯ ಕಾರ್ಯಕರ್ತರು ಸೂಚನೆಯಂತೆ ಲಸಿಕಾ ಕೇಂದ್ರಗಳಿಗೆ ಹೋದಾಗ್ಯೂ ಲಸಿಕೆ ಪಡೆಯಲಾಗಿಲ್ಲ ಎಂದು ದೂರಿದ್ದಾರೆ.

ಬರ್ಧಮಾನ ಜಿಲ್ಲೆಯ ಕಾತ್ವಾ ಎಂಬ ಪ್ರದೇಶದಲ್ಲಿ ಶನಿವಾರ ಟಿಎಂಸಿಯ ಶಾಸಕ ರಬೀಂದ್ರನಾಥ ಚಟರ್ಜಿ ಲಸಿಕೆ ಪಡೆದಿದ್ದು ಕಂಡುಬಂತು. ಪ್ರಶ್ನೆಗಳು ಎದ್ದಾಗ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಸಕರ ಪರ ವಹಿಸಿ, ಅವರು ಕಾತ್ವಾ ಉಪವಿಭಾಗೀಯ ಆಸ್ಪತ್ರೆಯ ರೋಗಿ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿರುವುದಾಗಿ ಹೇಳಿದರು. ಲಸಿಕೆ ಪಡೆದ ಇತರರೆಂದರೆ ಭಾತರ್​ನ ಟಿಎಂಸಿ ಶಾಸಕ ಸುಭಾಷ್ ಮೊಂಡಲ್, ಮಾಜಿ ಶಾಸಕ ಬನಮಾಲಿ ಹಾಜ್ರ, ಜಿಲ್ಲಾ ಪರಿಷತ್ ಸದಸ್ಯ ಜಹರ್ ಬಗ್ಡಿ ಮತ್ತು ಭಾತರ್ ಪಂಚಾಯತಿ ಸಮಿತಿ ಸಾರ್ವಜನಿಕ ಆರೋಗ್ಯ ಅಧಿಕಾರಿ ಮಹೇಂದ್ರ ಹಾಜ್ರ. ಅವರೆಲ್ಲ ಬೇರೆಬೇರೆ ಸರ್ಕಾರಿ ಆಸ್ಪತ್ರೆಗಳ ರೋಗಿ ಕಲ್ಯಾಣ ಸಮಿತಿಗಳಿಗೆ ಸೇರಿದ್ದಾರೆ ಎನ್ನಲಾಗಿದೆ.

“ರೋಗಿ ಕಲ್ಯಾಣ ಸಮಿತಿಗಳ ಸದಸ್ಯರಾಗಿರುವವರೂ ಆರೋಗ್ಯ ಕಾರ್ಯಕರ್ತರ ಪಟ್ಟಿಯಲ್ಲಿದ್ದಾರೆ. ರಬೀಂದ್ರನಾಥ ಚಟರ್ಜಿ, ಸುಭಾಷ್ ಮೊಂಡಲ್ ಮತ್ತು ಬನಮಾಲಿ ಹಾಜ್ರ ಆಸ್ಪತ್ರೆಗಳ ಕಾರ್ಯದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಹೆಸರು ಕೋವಿಡ್ ಲಸಿಕೆ ಪಟ್ಟಿಯಲ್ಲಿ ಇತ್ತು” ಎಂದು ಬರ್ಧಮಾನದ ಮುಖ್ಯವೈದ್ಯಾಧಿಕಾರಿ ಪ್ರಣಬ್ ಕುಮಾರ್ ರಾಯ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, “ಲಸಿಕಾ ಅಭಿಯಾನದ ಮೊದಲ ಹಂತದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರು, ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರು ಲಸಿಕೆ ಪಡೆಯಲು ಅರ್ಹರು. ಆದರೆ ಟಿಎಂಸಿ ಶಾಸಕರು ಮತ್ತು ಇತರರು ಲಸಿಕೆ ಪಡೆಯುವುದನ್ನು ನಾವು ನೋಡಿದ್ದೇವೆ. ಅವರು ಈ ಹಂತದ ಪಟ್ಟಿಯಲ್ಲಿರಬಾರದು. ಪಟ್ಟಿಯನ್ನು ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರಕ್ಕೆ ಕಳುಹಿಸುವುದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಟ್ಟಿಯನ್ನು ಬಹಿರಂಗ ಪಡಿಸಬೇಕು” ಎಂದಿದ್ದಾರೆ.

ಕಾರಿನ ಡೆಂಟ್ ತೆಗೆಯಲು ಇಲ್ಲಿದೆ ಸುಲಭೋಪಾಯ…!

ನಿಮ್ಮ ಪ್ರಶ್ನೆ ಓದಿ ನಗ್ಬೇಕೋ, ಅಳ್ಬೆಕೋ ಗೊತ್ತಾಗ್ತಿಲ್ವಲ್ಲಾ ಸ್ವಾಮಿ… ಯಾವ ಕಾಲದಲ್ಲಿದ್ದೀರಿ ನೀವು?

48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್​: ನರಕಯಾತನೆ ಬಿಚ್ಚಿಟ್ಟ 9ನೇ ತರಗತಿ ವಿದ್ಯಾರ್ಥಿನಿ!

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…