ನಾನು ಮಾರಾಟವಾಗಿದ್ದೇನೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಉಮೇಶ್​ ಜಾಧವ್​ ಸವಾಲು

ಕಲಬುರಗಿ: ರಾಜ್ಯ ಸರ್ಕಾರವೇ ಚಿಂಚೋಳಿಗೆ ಬಂದರೂ ನಮ್ಮ ಜನ ಮರಳಾಗಲ್ಲ, ನಾನು ಮಾರಾಟವಾಗಿಲ್ಲ, ನಾನು ಮಾರಾಟವಾಗಿದ್ದೇನೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾರಾಟವಾಗಿರುವ ಜಾಧವ್​ಗೆ ಪಾಠ ಕಲಿಸಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಜಿ ಶಾಸಕ ಉಮೇಶ್ ಜಾಧವ್​ ತಿರುಗೇಟು ನೀಡಿದ್ದಾರೆ.

ಚಿಂಚೋಳಿಯಲ್ಲಿ ಮಾತನಾಡಿದ ಅವರು, ಸ್ಥಳೀಯರಿಗೆ ಟಿಕೆಟ್​ ನೀಡುವುದು ಬಿಟ್ಟು ಅವರ ಕಾಲಿಗೆ ಬಿದ್ದವರಿಗೆ ಟಿಕೆಟ್ ನೀಡಿದ್ದಾರೆ, ಮೈತ್ರಿ ಪಕ್ಷದ ಅಭ್ಯರ್ಥಿ ಸುಭಾಷ್ ರಾಠೋಡ ಸ್ಥಳೀಯರಲ್ಲ, ಸುಭಾಷ್ ರಾಠೋಡ ನನ್ನನ್ನು ಬೈದಿದ್ದಕ್ಕೆ ಕಾಂಗ್ರೆಸ್ ಟಿಕೆಟ್​ ನೀಡಿದೆ ಎಂದು ವ್ಯಂಗ್ಯವಾಡಿದರು.

ಮಲ್ಲಿಕಾರ್ಜುನ ಖರ್ಗೆಯವರು ಜನರನ್ನು ಮರಳು ಮಾಡಲು ಯತ್ನಿಸಿದರೆ ಯಾರೂ ನಂಬುವುದಿಲ್ಲ. ಗುರುಮಠಕಲ್ ಕ್ಷೇತ್ರದಲ್ಲಿ 80 ಪ್ರತಿಶತ ಜನತೆ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ ಎಂದು ಮಾಜಿ ಶಾಸಕ ಉಮೇಶ್​ ಜಾಧವ್​ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಸಚಿವ ಪ್ರಿಯಾಂಕ ಖರ್ಗೆ ಸುಳ್ಳು ಹೇಳುತ್ತಿದ್ದಾರೆ, ನನ್ನ ಹತ್ತಿರ ಜನಬಲವಿದೆ, ಖರ್ಗೆ ಹತ್ತಿರ ಹಣ ಬಲವಿದೆ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *