More

    ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಹೊಸ ವರ್ಷದಂದು ದೇಶದ ಜನತೆಗೆ ಬಯಸಿದ್ದೇನು?

    ನವದೆಹಲಿ: ಹಳೇ ಕ್ಷಣಗಳನ್ನು ಮೆಲಕು ಹಾಕಿ 2019ನೇ ಇಸವಿಯನ್ನು ಆತ್ಮೀಯವಾಗಿ ಬೀಳ್ಕೊಡುತ್ತಾ ಹೊಸ ಅನುಭವಕ್ಕೆ ಎದುರು ನೋಡುತ್ತಾ 2020ನೇ ಇಸವಿಯನ್ನು ಅದ್ಧೂರಿಯಾಗಿ ಜಗತ್ತು ಬರಮಾಡಿಕೊಂಡಿದೆ. ಹೊಸ ವರ್ಷದ ಆರಂಭದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವೆಲ್ಲಾ ಗಣ್ಯರು ಜನತೆಗೆ ಯಾವ ರೀತಿ ಶುಭ ಸಂದೇಶವನ್ನು ರವಾನಿಸಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ತಣಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ.

    ಮೊದಲಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ಅವರ ಸಂದೇಶ ನೋಡುವುದಾದರೆ, ಪ್ರಧಾನಿ ಹಿಂದಿನ ವರ್ಷವನ್ನು ಸ್ಮರಿಸಿ, ಭವಿಷ್ಯ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

    2019ನೇ ಇಸವಿ ಸುಂದರವಾದ ಸಂಕಲನವಾಗಿತ್ತು. 2019 ನಾವು ಸಾಧಿಸಿದ ಸಾಕಷ್ಟು ಪ್ರಗತಿಯನ್ನು ಒಳಗೊಂಡಿದೆ. 130 ಕೋಟಿ ಜನರ ಸಬಲೀಕರಣ ಮತ್ತು ಭಾರತದ ಸುಧಾರಣೆಯ ಮುಂದುವರಿದ ಭಾಗವಾಗಿ 2020 ಗುರುತಾಗಲಿದೆ. ಅದ್ಭುತವಾದ 2020ನೇ ಇಸವಿಯನ್ನು ಹೊಂದಿದ್ದೇವೆ. ಈ ವರ್ಷವೂ ನಿಮ್ಮ ಜೀವನದಲ್ಲಿ ಏಳಿಗೆ ಮತ್ತು ಸಂತಸ ಮನೆ ಮಾಡಲಿ. ಎಲ್ಲರೂ ಆರೋಗ್ಯಯುತವಾಗಿರಲಿ, ಎಲ್ಲರ ಆಸೆಗಳು ನೆರವೇರಲಿ ಎಂದು ಪ್ರಧಾನಿ ಶುಭಕೋರಿದ್ದಾರೆ.

    2020ನೇ ಇಸವಿ ಎಲ್ಲರಿಗೂ ಏಳಿಗೆಯುತವಾಗಿರಲಿ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಶುಭಕೋರಿದರೆ, ಎಲ್ಲರಿಗೂ ಹೊಸ ವರ್ಷದ ಶುಭಕೋರುತ್ತಾ, ಈ ವರ್ಷ ಸಂತೋಷ, ಒಳ್ಳೆಯ ಆರೋಗ್ಯ ನಿಮ್ಮದಾಗಲಿ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಶುಭಕಾಮನೆ ತಿಳಿಸಿದ್ದಾರೆ.

    ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು. ಅದ್ಭುತ ವರ್ಷ ನಿಮ್ಮದಾಗಲಿ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

    ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ಸುಖ, ಸಮೃದ್ಧಿ, ನೆಮ್ಮದಿಯ ವರ್ಷವಾಗಲಿ. ರಾಜ್ಯದಾದ್ಯಂತ ಸಂಭ್ರಮ ನೆಲೆಸಲಿ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವ ನಮ್ಮ ಸಂಕಲ್ಪಕ್ಕೆ ಆ ಭಗವಂತ ಮತ್ತಷ್ಟು ಬಲ ನೀಡಲಿ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಶುಭ ಹಾರೈಸಿದ್ದಾರೆ.

    ಹೊಸ ನಾಳೆಗಳನ್ನು ತರಲಿರುವ ಹೊಸ ವರುಷ ಜನರಿಗೆ ಒಳಿತು ಮಾಡಲಿ. ಸುಖ ಸಮೃದ್ಧಿಗಳನ್ನು ಪ್ರಾಪ್ತಿ ಮಾಡಲಿ. ನಾಡು ದಿಗಂತದತ್ತ ಹಜ್ಜೆ ಹಾಕಲಿ, ಹೊಸ ಮನ್ವಂತರ ಸೃಷ್ಟಿಸಲಿ. ಸಮಸ್ತ ನಾಗರಿಕರಿಗೆ, ಪಕ್ಷದ ಕಾರ್ಯಕರ್ತ ಸೋದರರಿಗೆ, ಅಭಿಮಾನಿಗಳಿಗೆ 2020ರ ಹೊಸ ವರ್ಷದ ತುಂಬು ಹೃದಯದ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಶುಭಕೋರಿದ್ದಾರೆ.

    ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾರ್ದಿಕ‌ ಶುಭಾಶಯಗಳು. ತಮ್ಮೆಲ್ಲರ ಕಷ್ಟದ ದಿನಗಳು ಕಳೆದು ಸುಖ, ಶಾಂತಿ, ಸಮೃದ್ಧಿಯ ಬದುಕು ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಸಂದೇಶ ರವಾನಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts