More

    VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ವಿಡಿಯೋ ಇದು: ಪೊಲೀಸಪ್ಪನ ಕೈಚಳಕ ನೋಡಿ….

    ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ ಹಾಲಿನ ಪಾಕೆಟ್​ಗಳನ್ನು ಪೊಲೀಸ್​ ಸಿಬ್ಬಂದಿಯೊಬ್ಬ ಕಳ್ಳತನ ಮಾಡಿದ್ದಾರೆ. ಇದು ಅಂಗಡಿ ಮುಂದೆ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.

    ವಿಡಿಯೋದಲ್ಲಿ ಏನಿದೆ?: ಪೊಲೀಸ್​ ಗಸ್ತು ವಾಹನವನ್ನು ನಿಲ್ಲಿಸಿ, ಸಮೀಪದ ಅಂಗಡಿಯೊಂದರ ಮುಂದೆ ಜೋಡಿಸಲಾಗಿದ್ದ ಬಾಕ್ಸ್​ಗಳಿಂದ ಹಾಲಿನ ಪಾಕೆಟ್​ಗಳನ್ನು ಕದ್ದುಕೊಂಡು ವಾಹನ ಒಳಗೆ ಇಡುತ್ತಾರೆ. ವಾಹನದೊಳಗೆ ಮತ್ತೊಬ್ಬ ಸಿಬ್ಬಂದಿ ಇದ್ದಂತೆ ಕಾಣುತ್ತದೆ.

    ಜನವರಿ 19ರ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದ್ದು, ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಕಳ್ಳತನ ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಗಾದೆ ಮಾತಿಗೆ ನಿಜವಾಗಿಯೂ ಪೂರಕವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts