More

  ಪೊಲೀಸರಲ್ಲಿರಲಿ ಪ್ರಾಮಾಣಿಕತೆ :ಆಯುಕ್ತ ಚೇತನ್ ಆರ್. ಸಲಹೆ

  ಕಲಬುರಗಿಯಲ್ಲಿ ಪೊಲೀಸ್ ಧ್ವಜ, ಕಲ್ಯಾಣ ದಿನಾಚರಣೆ

  ವಿಜಯವಾಣಿ ಸುದ್ದಿಜಾಲ ಕಲಬುರಗಿ
  ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಸೇವೆಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಹೇಳಿದರು.
  ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಜಿ¯್ಲÁ ಪೊಲೀಸ್, ನಗರ ಪೊಲೀಸ್ ಆಯುಕ್ತಾಲಯದ ಸಹಯೋಗದಡಿ ಆಯೋಜಿಸಿದ್ದ ಪೊಲೀಸ್ ಧ್ವಜ ಹಾಗೂ ಪೊಲೀಸ್ ಕಲ್ಯಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿವೃತ್ತಿ ನಂತರ ಪೊಲೀಸರ ಕ್ಷೇಮಾಭಿವೃದ್ಧಿ ಅಗತ್ಯವಾಗಿದೆ. ಪೊಲೀಸ್ ಆರೋಗ್ಯ ಭಾಗ್ಯದಡಿ ೨೦೨೩ರಲ್ಲಿ ೧೫೦ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಮತ್ತು ಅವರ ಮಕ್ಕಳು ಚಿಕಿತ್ಸೆ ಪಡೆದಿz್ದÁರೆ. ಪೊಲೀಸ್ ಸಿಬ್ಬಂದಿ ಮತ್ತು ಮಕ್ಕಳಿಗೆ ೨.೨೫ ಲP್ಷÀ ರೂ. ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು.
  ಕಲಬುರಗಿ ವೃತ್ತ ಮುಖ್ಯ ಅರಣ್ಯ ಸಂರP್ಷÀಣಾಧಿಕಾರಿ ಡಾ.ಸುನೀಲ್ ಪನ್ವಾರ್ ವಿಶೇಷ ಆಹ್ವಾನಿತರಾಗಿದ್ದರು. ಈಶಾನ್ಯ ವಲಯ ಪೊಲೀಸ್ ಉಪ ಮಹಾನಿರೀP್ಷÀಕ ಅಜಯ ಹಿಲೋರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅP್ಷÀಯ ಎಂ.ಹಾಕೆ, ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯ ಡೆಕ್ಕಾ ಕಿಶೋರಬಾಬು, ಕೆಎಸ್‌ಆರ್‌ಪಿ ಕಮಾಂಡೆAಟ್ ಬಸವರಾಜ ಜಿಳ್ಳೆ, ಲೋಕಾಯುಕ್ತ ಎಸ್‌ಪಿ ಜಾನ್ ಆ್ಯಂಟನಿ ಇತರರಿದ್ದರು.
  ಹೆಚ್ಚುವರಿ ಎಸ್‌ಪಿ ಶ್ರೀನಿಧಿ ವಂದಿಸಿದರು. ಅಶೋಕ ನಗರ ಠಾಣೆ ನಿವೃತ್ತ ಪಿಎಸ್‌ಐ ಅಬ್ದುಲ್ ಜಬ್ಬಾರ್ ಪೊಲೀಸ್ ಧ್ವಜ ದಿನಾಚರಣೆ ವಿಶೇಷ ಪರೇಡ್ ವಂದನೆ ಸ್ವೀಕರಿಸಿ ಮಾತನಾಡಿದರು. ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಸ್ವಾಗತಿಸಿದರು. ೨೦೨೪ರ ಪೊಲೀಸ್ ಧ್ವಜಗಳನ್ನು ಬಿಡುಗಡೆ ಮಾಡಲಾಯಿತು.

  ದಶ ತಂಡದಿAದ ವಂದನೆ
  ಅಶೋಕ ನಗರ ಠಾಣೆ ನಿವೃತ್ತ ಪಿಎಸ್‌ಐ ಅಬ್ದುಲ್ ಜಬ್ಬಾರ್ ನೇತೃತ್ವದ ವಿಶೇಷ ಪರೇಡ್‌ನಲ್ಲಿ ನಗರ ಸಶಸ್ತç ಮೀಸಲು ಪಡೆಯ ಆರ್‌ಎಸ್‌ಐ ಸಂತೋಷ, ಜಿಲ್ಲಾ ಸಶಸ್ತç ಮೀಸಲು ಪಡೆಯ ಆರ್‌ಎಸ್‌ಐ ಪೃಥ್ವಿರಾಜ, ಕೆಎಸ್‌ಆರ್‌ಪಿ ಆರ್‌ಎಸ್‌ಐ ಸಿ.ಜಿ.ತಳವಾರ, ದಕ್ಷಿಣ ವಿಭಾಗದ ಅಶೋಕನಗರ ಠಾಣೆ ಪಿಎಸ್‌ಐ ಬಸಲಿಂಗಪ್ಪ, ಕೆಎಸ್‌ಆರ್‌ಪಿ ೨ನೇ ತುಕಡಿಯ ಆರ್‌ಎಸ್‌ಐ ಮೋಸಿನ್ ಖಾನ್, ಉಪವಿಭಾಗದ ಆರ್‌ಎಸ್‌ಐ ರಾಘವೇಂದ್ರ, ನಾಗನಹಳ್ಳಿ ಪ್ರೊಬೇಷನರಿ ಪಿಎಸ್‌ಐಗಳ ತಂಡದ ಆರ್‌ಎಸ್‌ಐ ಮಂಜುನಾಥ, ಸಿಎಆರ್ ಆರ್‌ಎಸ್‌ಐ ಮಂಜುನಾಥ ಮತ್ತು ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts