ಬೆಂಗಳೂರು ಪೊಲೀಸರಿಂದ ಬೆಳ್ಳಂಬೆಳಗ್ಗೆ ಸರಗಳ್ಳರ ಮೇಲೆ ಫೈರಿಂಗ್​, ಇಬ್ಬರ ಬಂಧನ

ಬೆಂಗಳೂರು: ನಗರದಲ್ಲಿ ಮೊಬೈಲ್​ಕಳ್ಳರು, ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಸೋಮವಾರ ಬೆಳಗ್ಗೆ ನಂದಿನಿ‌ಲೇಔಟ್, ಬಾಗಲಗುಂಟೆ, ಸೋಲದೇವನಹಳ್ಳಿ‌ ಪೊಲೀಸರು ಒಂದಾಗಿ ಕಾರ್ಯಾಚರಣೆ ನಡೆಸುವ ಮೂಲಕ, ಇಬ್ಬರು ಸರಗಳ್ಳರ ಕಾಲಿಗೆ ಗುಂಡುಹಾರಿಸಿ ಬಂಧಿಸಿದ್ದಾರೆ.

ಸೋಲದೇವನಹಳ್ಳಿಯ ಸಾಸಿವೆಘಟ್ಟ ಬಳಿ ಫೈರಿಂಗ್​ ನಡೆದಿದ್ದು, ಸುರೇಂದ್ರ ಸಿಂಗ್, ಕರಣ್ ಗುಪ್ತಾ ಬಂಧಿತ ಆರೋಪಿಗಳು. ಪೊಲೀಸರು ಕಳ್ಳರನ್ನು ಬೆನ್ನಟ್ಟಿ ಬಂಧಿಸಲು ಯತ್ನಿಸಿದ ವೇಳೆ ಕಳ್ಳರು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಎರಡು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಕಳ್ಳರಿಗೆ ಎಚ್ಚರಿಕೆ ನೀಡಿದರೂ ಹಲ್ಲೆಗೆ ಮುಂದಾಗಿದ್ದರಿಂದ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಬಾಗಲಗುಂಟೆ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ ಶಿವಸ್ವಾಮಿ, ನಂದಿನಿಲೇಔಟ್ ಠಾಣೆಯ ಇನ್ಸ್​​ಪೆಕ್ಟರ್ ಲೋಹಿತ್​ ಫೈರಿಂಗ್​ ನಡೆಸಿದ ಪೊಲೀಸ್​ ಸಿಬ್ಬಂದಿ.

ಮೇ 12ರಿಂದ 17ರವರೆಗೂ ನಗರದ ಬ್ಯಾಡರಹಳ್ಳಿ, ನೆಲಮಂಗಲ, ಮಾದನಾಯಕನಹಳ್ಳಿಯಲ್ಲಿ ಸರಗಳ್ಳತನ ನಡೆದಿತ್ತು. ಈ ಪ್ರಕರಣ ಬೇಧಿಸಲು ಉತ್ತರ ವಿಭಾಗದ ಮೂರು ಮಂದಿ ಇನ್ಸ್ಪೆಕ್ಟರ್​ಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *