Tuesday, 11th December 2018  

Vijayavani

Breaking News

ತುಮಕೂರು ಮಾಜಿ ಮೇಯರ್​ ರವಿ ಕೊಲೆ ಆರೋಪಿಗೆ ಗುಂಡೇಟು

Saturday, 06.10.2018, 6:36 PM       No Comments

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್​ ರವಿ ಕುಮಾರ್​ ಅವರ ಕೊಲೆ ಆರೋಪಿ ರಾಜೀ @ ರಾಜೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಶನಿವಾರ ಮಧ್ಯಾಹ್ನ ಕೋರಾ ಪೊಲೀಸ್​ ಠಾಣಾ ವ್ಯಾಪ್ತಿಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆರೋಪಿ ಅವಿತಿರುವ ಸುಳಿವು ಆಧರಿಸಿ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಆತ ಪಿಎಸ್​ಐ ರವಿಕುಮಾರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ. ಕೂಡಲೇ ನಗರ ಡಿವೈಎಸ್​ಪಿ ಕೆ.ಎಸ್​. ನಾಗರಾಜು ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂದಿಸಿದ್ದಾರೆ.

ಘಟನೆಯಲ್ಲಿ ಪಿಎಸ್​ಐ ರವಿಕುಮಾರ್​ ಅವರಿಗೆ ಗಾಯವಾಗಿದ್ದು, ಅವರನ್ನು ಮತ್ತು ಆರೋಪಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸೆ.30 ರಂದು ಬೆಳಗ್ಗೆ 8.30ರಲ್ಲಿ ಮಾಜಿ ಮೇಯರ್ ಹಾಲಿ ಕಾರ್ಫೋರೇಟರ್ ರವಿಕುಮಾರ್ ರನ್ನು ತುಮಕೂರಿನಲ್ಲಿ ನಡುರಸ್ತೆಯಲ್ಲೇ ಕೊಚ್ಚಿ ಕೊಲೆಗೈಯ್ಯಲಾಗಿತ್ತು.

ಮಾರಕಾಸ್ತ್ರಗಳಿಂದ ಕೊಚ್ಚಿ ಮಾಜಿ ಮೇಯರ್​ ರವಿಕುಮಾರ್​ ಕೊಲೆ

ತುಮಕೂರು ಮಾಜಿ ಮೇಯರ್ ಬರ್ಬರ ಹತ್ಯೆ

Leave a Reply

Your email address will not be published. Required fields are marked *

Back To Top