ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೀದರ್​ ಪೊಲೀಸ್ ಕಾನ್​​ಸ್ಟೆಬಲ್​ ಸಾವು

ಬೀದರ್​: ಕರೊನಾ ಸೋಂಕಿಗೆ ಜಿಲ್ಲೆಯಲ್ಲಿ ನಾಲ್ಕೇ ದಿನಗಳಲ್ಲಿ 12 ಮಂದಿ ಸಾವನ್ನಪ್ಪಿದ್ದು, ಇಂದು ಪೊಲೀಸ್​ ಕಾನ್ಸ್​ಟೆಬಲ್​ ಓರ್ವ ಸೋಂಕಿಗೆ ಬಲಿಯಾಗಿದ್ದಾರೆ. ಬೀದರ್​ ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್​ ಕಾನ್ಸ್ಟೇಬಲ್​ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಚಳಿ, ಜ್ವರದಿಂದ ಆಗಸ್ಟ್​ 15ರಂದು ಹುಮನಾಬಾದ್​ ಆಸ್ಪತ್ರೆಗೆ ದಾಖಲಾಗಿದ್ದರು. ಆ್ಯಂಟಿಜೆನ್​ ಟೆಸ್ಟ್​​ನಲ್ಲಿ ಇವರಿಗೆ ಕರೊನಾ ಇರುವುದು ದೃಢಪಟ್ಟಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. … Continue reading ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೀದರ್​ ಪೊಲೀಸ್ ಕಾನ್​​ಸ್ಟೆಬಲ್​ ಸಾವು