ಧರ್ಮಸ್ಥಳಕ್ಕೆ ಪತ್ನಿಯನ್ನು ಕರೆದೊಯ್ದು ಮರಳಿ ಬರುವಾಗ ಆತ ದಾರಿ ಮಧ್ಯ ಮಾಡಿದ್ದು ನೀಚಕೃತ್ಯ…

ಬೆಂಗಳೂರು: ಧರ್ಮಸ್ಥಳ ದೇವರ ದರ್ಶನಕ್ಕೆಂದು ಪತ್ನಿಯನ್ನು ಕರೆದುಕೊಂಡು ಹೋದ ಪತಿ ನೀಚಕೃತ್ಯ ಎಸಗಿದ್ದಾನೆ.

ಸದಾ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಪತಿ, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈಯ್ಯಲು ಯತ್ನಿಸಿದ್ದಾನೆ. ಬೆಂಗಳೂರು ರಾಜಾಜಿನಗರ ನಿವಾಸಿ ನವೀನ್​ ಆರೋಪಿಯಾಗಿದ್ದು ಈಗ ಆತನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

ಟೆಕ್ಕಿ ನವೀನ್​ ಹಾಗೂ ಆತನ ಪತ್ನಿ ರಾಜಾಜಿನಗರದಲ್ಲಿ ವಾಸವಾಗಿದ್ದರು. ವರದಕ್ಷಿಣೆಗಾಗಿ ಸದಾ ಪೀಡಿಸುತ್ತಿದ್ದ. ಇತ್ತೀಚೆಗೆ ಅವರಿಬ್ಬರ ನಡುವೆ ಕಲಹವೂ ಆಗಿತ್ತು. ಆದರೆ ನವೀನ್​ ಧರ್ಮಸ್ಥಳಕ್ಕೆ ಪತ್ನಿಯನ್ನು ಕರೆದೊಯ್ದಿದ್ದ. ಅಲ್ಲಿಂದ ಬರುವಾಗ ಕುಣಿಗಲ್​ ಬಳಿ ಬರುತ್ತಿದ್ದಂತೆ ಕಬ್ಬಿಣದ ರಾಡ್​ನಿಂದ ಪತ್ನಿ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಆದರೆ ಅದೃಷ್ಟವಶಾತ್​ ಆಕೆ ತಪ್ಪಿಸಿಕೊಂಡು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಮಹಿಳೆಯ ಪಾಲಕರು ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

3 Replies to “ಧರ್ಮಸ್ಥಳಕ್ಕೆ ಪತ್ನಿಯನ್ನು ಕರೆದೊಯ್ದು ಮರಳಿ ಬರುವಾಗ ಆತ ದಾರಿ ಮಧ್ಯ ಮಾಡಿದ್ದು ನೀಚಕೃತ್ಯ…”

  1. ವರದಕ್ಷಿಣೆ ತಗೊಳೋದೇ ದೊಡ್ಡ ಅಪರಾಧ ಅಂತದ್ರಲ್ಲಿ ಹೆಣ್ಣುಮಕ್ಳ ಗೆ ಚಿತ್ರಹಿಂಸೆ ಕೊಡೋರ್ನ್ ಬಿಡಬಾರ್ದು ಸರ್

Comments are closed.