ಉತ್ತರಕನ್ನಡ: ಹುಡುಗಿಯರನ್ನು ಚುಡಾಯಿಸಿದ್ದಷ್ಟೇ ಅಲ್ಲದೆ ಅದನ್ನು ಪ್ರಶ್ನಿಸಿದವರನ್ನು ಕೊಲೆ ಮಾಡಿ ಪರಾರಿಯಾದವನನ್ನು ಒಂದೇ ದಿನದೊಳಗೆ ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಲೀನ್ ಕೋಟೆಬಾಗಿಲು ಎಂಬಾತ ಬಂಧಿತ ಆರೋಪಿ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಚಂದಾವರ ಎಂಬಲ್ಲಿ ನಿನ್ನೆ ಈ ಕೊಲೆ ನಡೆದಿತ್ತು. ಸಲೀನ್ ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಅಬು ತಲೀಬ್ ಶೇಖ್ ಎಂಬಾತ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಸಿಟ್ಟಾದ ಸಲೀನ್, ಅಬುವನ್ನು ಕೊಲೆ ಮಾಡಿ ಪರಾರಿಯಾಗಿದ್ದ.
ಇದನ್ನೂ ಓದಿ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೋವಿಡ್ಗೆ ಬಲಿ; ಕಿರಣ್ ಜನ್ಯ ಇನ್ನಿಲ್ಲ…
ಅಲ್ಲಿಂದ ಪರಾರಿಯಾದ ಸಲೀನ್, ಹತ್ತಿರದ ಬೆಟ್ಟವನ್ನು ಏರಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹೊನ್ನಾರ ಠಾಣೆ ಪೊಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದರು. ಕುಮಟಾ ಪೊಲೀಸರೊಂದಿಗೆ ಕಾರ್ಯಾಚರಣೆಗಿಳಿದ ಹೊನ್ನಾವರ ಪೊಲೀಸರು ಬೆಟ್ಟವೇರಿ ಪರಾರಿಯಾಗಿದ್ದ ಸಲೀನ್ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
500 ರೂ. ರಿಫಂಡ್ ನೆಪದಲ್ಲಿ 57 ಸಾವಿರ ರೂ. ಕನ್ನ! ಗೂಗಲ್ ಸರ್ಚ್ ಮಾಡೋ ಮುನ್ನ ಹುಷಾರ್!