ಸುಳವಾಡಿ ದುರಂತ: ಅಡುಗೆ ಭಟ್ಟ ಪುಟ್ಟಸ್ವಾಮಿ ಪೊಲೀಸರ ವಶಕ್ಕೆ

ಮೈಸೂರು: ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ವಿಷಮಿಶ್ರಿತ ಪ್ರಸಾದ ಸೇವಿಸಿ 15 ಭಕ್ತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಅಡುಗೆ ಭಟ್ಟ ಪುಟ್ಟಸ್ವಾಮಿಯನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.

ವಿಷಮಿಶ್ರಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಪುಟ್ಟಸ್ವಾಮಿಗೆ ಮೈಸೂರಿನ ಕೆ.ಆರ್​. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಪೊಲೀಸರು ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆದು ತಮ್ಮೊಂದಿಗೆ ವಿಚಾರಣೆಗೆ ಕರೆದೊಯ್ದಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಆರ್​.ಆಸ್ಪತ್ರೆಯ ಅಧೀಕ್ಷಕ ಶ್ರೀನಿವಾಸ್​ ಅವರು ಪುಟ್ಟಸ್ವಾಮಿ ದೇಹದಲ್ಲಿ ಸ್ವಲ್ಪ ಪ್ರಮಾಣದ ವಿಷವಿತ್ತು. ಈಗ ಆತನ ಆರೋಗ್ಯ ಸ್ಥಿರವಾಗಿದೆ. ಪುಟ್ಟಸ್ವಾಮಿ ಮಾನಸಿಕವಾಗಿಯೂ ಸ್ಥಿರವಾಗಿದ್ದಾನೆ ಎಂದು ತಿಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ದೇವಸ್ಥಾನದ ವ್ಯವಸ್ಥಾಪಕ ಮಾದೇಶ್, ಪತ್ನಿ ಅಂಬಿಕಾ, ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ಮತ್ತು ದೊಡ್ಡಯ್ಯ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಂದು ಅವರನ್ನು ಕೊಳ್ಳೆಗಾಲ ಕೋರ್ಟ್​ಗೆ ಹಾಜರುಪಡಿಸುವ ಸಾಧ್ಯತೆ ಇದೆ.

ವಿಧಿಯಾಟಕ್ಕೆ ಬಲಿಯಾದ ಸುಂದರ ಕುಟುಂಬ

ವಿಷಮಿಶ್ರಿತ ಪ್ರಸಾದ ಸೇವನೆ, 15ಕ್ಕೇರಿದ ಸಾವಿನ ಸಂಖ್ಯೆ

ಸುಳ್ವಾಡಿ ವಿಷ ಪ್ರಸಾದ ದುರಂತ: ಪ್ರಭಾವಿಗಳ ಕೈವಾಡವಿದ್ರೂ ಬಂಧನ ಖಚಿತ ಎಂದ ಸಚಿವ

ಸುಳ್ವಾಡಿ ಮಾರಮ್ಮ ದೇವಿ ಪ್ರಸಾದಕ್ಕೆ ವಿಷ ಹಾಕಿದ್ದು ಅರ್ಚಕ?