ಬಾಲಕನ ನಗ್ನ ಫೋಟೋ ಕದ್ದು ಹಣ, ಒಡವೆ ಸುಲಿಗೆ ಮಾಡುತ್ತಿದ್ದವನ ಬಂಧನ

ಬೆಂಗಳೂರು: ಇನ್​ಸ್ಟಾಗ್ರಾಂ ಖಾತೆಯಲ್ಲಿ 17 ವರ್ಷದ ಹುಡುಗನ ನಗ್ನ ಫೋಟೋ ಕದ್ದು ಆತನನ್ನು ಬ್ಲ್ಯಾಕ್​  ವೆುೕಲ್ ಮಾಡಿ 4.5 ಕೆಜಿ ಬೆಳ್ಳಿ ವಸ್ತು ಹಾಗೂ 6.5 ಲಕ್ಷ ರೂ. ಸುಲಿಗೆ ಮಾಡಿದವನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಕೆಜಿಎಫ್ ಮತ್ತು ಆಂಧ್ರ ಗಡಿಭಾಗದ ಎನ್.ಜಿ. ಹುಲ್ಕೂರ್ ಗ್ರಾಮದ ವಿಶ್ವನಾಥ್ (21) ಬಂಧಿತ. ವರ್ತರು ಪ್ರಕಾಶ್ ಲೇಔಟ್​ನಲ್ಲಿ ನೆಲೆಸಿದ್ದ ಆರೋಪಿ ದೂರುದಾರ ಹುಡುಗನ ಬಳಿ ಹಣ ಪಡೆಯಲು ಬಂದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹುಡುಗ, ತನ್ನ ಪ್ರೇಯಸಿಯ ಇನ್​ಸ್ಟಾಗ್ರಾಂ ಖಾತೆಗೆ ಬೆತ್ತಲೆ ಫೋಟೋ ಸೆಂಡ್ ಮಾಡಿದ್ದ. ಇದನ್ನು ಗಮನಿಸಿದ ವಿಶ್ವನಾಥ್, ಪ್ರೇಮಿಗಳ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿ ನಗ್ನ ಫೋಟೋ ಕದ್ದಿದ್ದ.

ಇನ್​ಸ್ಟಾಗ್ರಾಂ ಖಾತೆ ಅಡ್ಮಿನ್ ಕಡೆಯಿಂದ ಮೊಬೈಲ್ ನಂಬರ್ ಸಂಗ್ರಹಿಸಿ ಆತನ ಹಿನ್ನೆಲೆಯನ್ನು ಸಂಗ್ರಹಿಸಿದ್ದ. 2018ರ ಡಿಸೆಂಬರ್​ನಲ್ಲಿ ಹುಡುಗನ ಮೊಬೈಲ್​ಗೆ ಕರೆ ಮಾಡಿ ‘ನಗ್ನ ಫೋಟೋ ನನ್ನ ಬಳಿಯಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಮಾಡಿ ಮರ್ಯಾದೆ ತೆಗೆಯುತ್ತೇನೆ’ ಎಂದು ಬ್ಲಾ್ಯಕ್​ವೆುೕಲ್ ಮಾಡಿ 10 ಲಕ್ಷ ರೂ.ಕ್ಕೆ ಬೇಡಿಕೆ ಇಟ್ಟಿದ್ದ.

ನಗ್ನ ಫೋಟೋಗಳು ಹುಡುಗನ ಮೊಬೈಲ್​ಗೆ

ಬಂದಾಗ ಹಣ ಕೊಡದಿದ್ದರೆ ಮರ್ಯಾದೆ ಹೋಗುತ್ತದೆ ಎಂಬ ಭಯಕ್ಕೆ ಆರೋಪಿ ಹೇಳಿದಂತೆ 50 ಸಾವಿರ ರೂ. ಅನ್ನು ಮಾರತ್​ಹಳ್ಳಿ ಬಸ್ ನಿಲ್ದಾಣದ ಬಳಿಗೆ ತೆಗೆದುಕೊಂಡು ಕೊಟ್ಟಿದ್ದ. ಫೆಬ್ರವರಿಯಲ್ಲಿ ಮತ್ತೆ 1.5 ಲಕ್ಷ ರೂ. ಕೊಟ್ಟಿದ್ದಾನೆ. 36 ಸಾವಿರ ರೂ. ಮತ್ತು ಮನೆಯಲ್ಲಿದ್ದ ಬೆಳ್ಳಿ ವಸ್ತುಗಳನ್ನು ಕೊಟ್ಟಿದ್ದ. ಒಟ್ಟಾರೆ 6.50 ಲಕ್ಷ ರೂ. ಕೊಟ್ಟಿದ್ದ. ಅಷ್ಟಕ್ಕೆ ಸುಮ್ಮನಾಗ ಆರೋಪಿ, ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ಮನೆಗೆ ಬಂದು ಪಾಲಕರನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದ.

ಕೊನೆಗೆ ಆನ್​ಲೈನ್ ಕಳ್ಳನ ಬ್ಲಾ್ಯಕ್​ವೆುೕಲ್ ಕುರಿತು ಪಾಲಕರ ಬಳಿ ಅಳಲು ತೋಡಿಕೊಂಡಿದ್ದ. ಪಾಲಕರು ಠಾಣೆಗೆ ಬಂದು ಹುಡುಗನ ಮೂಲಕ ದೂರು ಕೊಡಿಸಿದ್ದರು. ದೂರು ಪಡೆದ ರಾಜಾಜಿನಗರ ಇನ್​ಸ್ಪೆಕ್ಟರ್ ರಾಮರೆಡ್ಡಿ ನೇತೃತ್ವದ ತಂಡ ಆರೋಪಿ ಬಂಧನಕ್ಕೆ ಖೆಡ್ಡ ಸಿದ್ಧಪಡಿಸಿತ್ತು. ಹುಡುಗನ ಮೂಲಕ ಹಣ ಕೊಡುವುದಾಗಿ ಆರೋಪಿ ಮೊಬೈಲ್​ಗೆ ಕರೆ ಮಾಡಿಸಿದ್ದರು. ಹಣ ಪಡೆಯಲು ಪ್ಲಾಟ್​ಫಾರಂ ರಸ್ತೆಯ ಕೃಷ್ಣ ಫ್ಲೋರ್​ವಿುಲ್ ಬಳಿಗೆ ಬಂದಾಗ ್ಲ ಹೊಂಚು ಹಾಕಿದ್ದ ಪೊಲೀಸರು ವಿಶ್ವನಾಥ್​ನನ್ನು ವಶಕ್ಕೆ ಪಡೆದಿದ್ದಾರೆ.

2 ಬೆಡ್​ರೂಂ ಮನೆ ಭೋಗ್ಯಕ್ಕಿದ್ದ: ಬ್ಲಾ್ಯಕ್​ವೆುೕಲ್ ಮಾಡಿ 6.50 ಲಕ್ಷ ರೂ. ಮತ್ತು 4.50 ಕೆಜಿ ಬೆಳ್ಳಿ ವಸ್ತು ಸುಲಿಗೆ ಮಾಡಿದ್ದ ಆರೋಪಿ ವರ್ತರು ಪ್ರಕಾಶ್ ಲೇಔಟ್​ನಲ್ಲಿ 2 ಬೆಡ್​ರೂಂ ಮನೆ ಭೋಗ್ಯಕ್ಕೆ ಪಡೆದು ನೆಲೆಸಿದ್ದ. ಇದಕ್ಕೂ ಮೊದಲು ಕೊಳೆಗೇರಿಯಲ್ಲಿ ಸಣ್ಣ ಕೊಠಡಿಯಲ್ಲಿ ವಾಸಿಸುತ್ತಿದ್ದ. ವಿಶ್ವನಾಥ್ ಸ್ನಾತಕೋತ್ತರ ಪದವೀಧರನಾಗಿದ್ದು, ಸುಲಿಗೆ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿತನದ ಫೋಟೋ ಸಂಗ್ರಹಿಸದಂತೆ ಮನವಿ

ಖಾಸಗಿ ಫೋಟೋ ತೆಗೆದುಕೊಳ್ಳು ವುದಾಗಲಿ ಅಥವಾ ಮೊಬೈಲ್, ಲ್ಯಾಪ್​ಟ್ಯಾಪ್, ಕಂಪ್ಯೂಟರ್ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಸಂಗ್ರಹಿಸುವುದಾಗಲಿ ಮಾಡಿದಲ್ಲಿ ವೈಯಕ್ತಿಕ ಜೀವನಕ್ಕೆ ಅಪಾಯವಾಗಲಿದೆ. ಖಾಸಗಿ ಫೋಟೋ ಅಥವಾ ವಿಡಿಯೋ ಗಳನ್ನು ಚಿತ್ರೀಕರಿಸಿಕೊಂಡಾಗ ಅವು ಯಾವುದೇ ರೂಪದಲ್ಲಿ ಬೇರೆಯವರ ಕೈ ಸೇರಿದರೆ ಬ್ಲಾ್ಯಕ್​ವೆುೕಲ್​ಗೆ ಒಳಗಾಗ ಬೇಕಾಗುತ್ತದೆ. ಇಲ್ಲವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭವಿಷ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *