ಪೊಳಲಿ ಮೂಲ ಗರ್ಭಗುಡಿ ಯಥಾಸ್ಥಿತಿ

Latest News

ಮೈಸೂರು: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎಲ್ಲೆಡೆ ಮಕ್ಕಳ ಕಲರವ, ಚಿಲಿಪಿಲಿ ಮೇಳೈಸಿತ್ತು. ಶಾಲಾ ಚೌಕಟ್ಟಿನಿಂದ ಹೊರ ಬಂದ ಮಕ್ಕಳು ಇಲ್ಲಿ ಕುಣಿದು ಕುಪ್ಪಳಿಸಿದರು,...

ಪ್ರತಿ ಎಕರೆ ಭೂಮಿಗೆ ರೂ.5ಲಕ್ಷ ಪರಿಹಾರ

ಜಾವಗಲ್: ಬಯಲು ಸೀಮೆ ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಭೂಮಿ ನೀಡುವ ಭಾಗದ ರೈತರಿಗೆ ಪ್ರತಿ ಎಕರೆಗೆ 5...

ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಕೂಟ, ಮತದಾರರ ಬಗೆಯುವ ನಂಬಿಕೆ ದ್ರೋಹ: ಸುಪ್ರೀಂಗೆ ಅರ್ಜಿ

ನವದೆಹಲಿ: ಮಹಾರಾಷ್ಟ್ರದಲ್ಲಿ ಅವಕಾಶವಾದಿ ರಾಜಕಾರಣ ನಡೆಯುತ್ತಿದೆ. ಅಧಿಕಾರದಾಹದ ಹಿನ್ನೆಲೆಯಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಅನೈತಿಕ ಮೈತ್ರಿ ಮಾಡಿಕೊಳ್ಳುತ್ತಿವೆ. ಇದು ಮತದಾರರಿಗೆ ಬಗೆಯುತ್ತಿರುವ...

ಉಪಚುನಾವಣೆಯಲ್ಲಿ ಜಾ.ದಳ, ಬಿಜೆಪಿಗೆ ಗೆಲುವು

ಸಕಲೇಶಪುರ: ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಮಲಾ 73...

ಸ್ವಸ್ಥ ಸಮಾಜಕ್ಕೆ ರೆಡ್‌ಕ್ರಾಸ್‌ನಿಂದ ಕೊಡುಗೆ

ಹಾಸನ: ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು...

ಭರತ್ ಶೆಟ್ಟಿಗಾರ್ ಮಂಗಳೂರು
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತ ತಲುಪಿದ್ದು, ಮೂಲ ಸ್ವರೂಪ ಉಳಿಸಿ ದೇವಳದ ಮರುನಿರ್ಮಾಣ ಮಾಡಲಾಗುತ್ತಿದೆ.

ದೇವಳದ ಗರ್ಭಗುಡಿಯ ನಾಲ್ಕು ಗೋಡೆಗಳನ್ನು ಯಥಾಸ್ಥಿತಿ ಉಳಿಸಿ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿವೆ. ದೇವರ ಮೂರ್ತಿ ಗರ್ಭಗುಡಿಯ ಗೋಡೆಗೆ ತಾಗಿ ಇರುವುದರಿಂದ ಅದನ್ನು ತೆಗೆಯುವ ಸಾಹಸ ಮಾಡಿಲ್ಲ. ಇಟ್ಟಿಗೆಯಲ್ಲಿ ಕಟ್ಟಿದ ಹಿಂದಿನ ಗರ್ಭಗುಡಿಯ ಗೋಡೆಯ ಧಾರಣಾ ಸಾಮರ್ಥ್ಯವನ್ನು ಎನ್‌ಐಟಿಕೆ ತಜ್ಞರಿಂದ ಪರೀಕ್ಷೆಗೊಳಪಡಿಸಿದಾಗ ಗೋಡೆ ಬಲಿಷ್ಠವಾಗಿದೆ ಎಂಬ ವರದಿ ಬಂದಿದೆ. ಆದ್ದರಿಂದ ಇಟ್ಟಿಗೆ ಗೋಡೆಗೆ ಹೊಂದಿಕೊಂಡಂತೆ ಕಲ್ಲಿನ ಕಂಬ ಅಳವಡಿಸಿ ಗರ್ಭಗುಡಿ ಏರಿಸಲಾಗಿದೆ. ಮೂಲ ಗರ್ಭಗುಡಿಯ ಹೊರಭಾಗದಲ್ಲಿ ಒಳಗೆ ಹೊರ ಎಡನಾಡಿ ಮತ್ತು ಒಳ ಎಡನಾಡಿ ಎಂದು ಎರಡು ವಿಭಾಗಗಳಿವೆ. ಗರ್ಭಗುಡಿಯ ಹೊರಭಾಗದಲ್ಲಿ ಒಳಾಂಗಣಕ್ಕೆ ಹೊಂದಿಕೊಂಡಂತೆ ಇರುವ ಗೋಡೆಯ ಮರದ ದರಿಯಲ್ಲಿ ವಿವಿಧ ಕೆತ್ತನೆಗಳ ಜತೆಗೆ ದೇವಳದ ಇತಿಹಾಸ ಚಿತ್ರಿಸಲಾಗಿದೆ. ದೇವಳದ ಜಾತ್ರೆಯ ಚಿತ್ರಣ ಶಿಲಾಮಯ ಗೋಡೆಯಲ್ಲಿ ಕೆತ್ತಲು ನಿರ್ಧರಿಸಲಾಗಿದೆ.

ಅಗಲದ ಮಹಾದ್ವಾರ:ನಾಲ್ಕು ಅಡಿ ಅಗಲವಿದ್ದ ಮಹಾದ್ವಾರವನ್ನು ಭಕ್ತರಿಗೆ ಅನುಕೂಲವಾಗುವಂತೆ 10 ಅಡಿ ಅಗಲ ಮಾಡಲಾಗಿದೆ. ತಮಿಳುನಾಡಿನಿಂದ ತರಿಸಲಾದ ಬೃಹತ್ ಶಿಲಾಕಂಬಗಳಲ್ಲಿ ಕಾರ್ಕಳದ ಶಿಲ್ಪಿಗಳು ಆಕರ್ಷಕ ಕೆತ್ತನೆ ರಚಿಸಿದ್ದಾರೆ. ಜತೆಗೆ ಆಕರ್ಷಕ ವಿನ್ಯಾಸದ ಎರಡು ಕಂಚಿನ ಕಂಬ ಅಳವಡಿಸಲಾಗಿದೆ. ದುರ್ಗಾಪರಮೇಶ್ವರಿ ಹಾಗೂ ರಾಜರಾಜೇಶ್ವರಿ ಗುಡಿಯಲ್ಲಿ ಮರದ ಕೆಲಸಗಳಿಗೆ ಸಾಗುವಾನಿ, ಸುತ್ತುಪೌಳಿಗೆ ಕಿರಾಲುಬೋಗಿ ಮರ ಉಪಯೋಗಿಸಲಾಗಿದೆ. 13 ಸಾವಿರ ಸಿಎಫ್‌ಟಿ ಕಿರಾಲುಬೋಗಿ ಹಾಗೂ 4 ಸಾವಿರ ಸಿಎಫ್‌ಟಿಯಷ್ಟು ಸಾಗುವಾನಿ ಮರ ಬಳಸಲಾಗಿದೆ. ದೇವಳದ ಧ್ವಜಸ್ತಂಭ ಆರು ತಿಂಗಳಿಂದ ಎಳ್ಳೆಣ್ಣೆಯಲ್ಲಿದ್ದು, ಡಿ.16ರಂದು ಅದನ್ನು ತೆಗೆದು ಪ್ರತಿಷ್ಠಾಪನೆಗೆ ಸಿದ್ಧಪಡಿಸುವ ಪ್ರಕ್ರಿಯೆ ನಡೆಯಲಿದೆ.

ಹೊರ ಅಂಗಣಕ್ಕೆ ಹಾಸುಕಲ್ಲು: ಹೊರ ಅಂಗಣಕ್ಕೆ 20 ಸಾವಿರ ಚದರ ಅಡಿ ಪ್ರದೇಶದಲ್ಲಿ ಹಾಸುಕಲ್ಲು, ಒಳ ಅಂಗಣದ ಗೋಡೆಯಲ್ಲಿರುವ ಮರದ ದರಿಗೆ ನಾಲ್ಕು ಸುತ್ತಲೂ ಸಂಪೂರ್ಣವಾಗಿ ಹಿತ್ತಾಳೆ ಪ್ಲೇಟ್ ಅಳವಡಿಸಲಾಗುತ್ತದೆ. ದೇವಳದಲ್ಲಿರುವ ಎಂಟು ರಥಗಳನ್ನು ನಿಲ್ಲಿಸಲು ವಾಸ್ತು ಪ್ರಕಾರ ಒಂಭತ್ತು ಕೋಲು ಎತ್ತರದ ಸ್ಲಾೃಬ್ ರಚಿಸಲಾಗುತ್ತಿದೆ.

ಪ್ರಗತಿಯಲ್ಲಿದೆ ಈ ಕೆಲಸಗಳು: ಶ್ರೀ ದುರ್ಗಾಪರಮೇಶ್ವರಿ ದೇವರ ಗುಡಿಗೆ ತಾಮ್ರದ ಹೊದಿಕೆ ಅಳವಡಿಸುವ ಕೆಲಸ ಸಂಪೂರ್ಣವಾಗಿದೆ. ಶ್ರೀ ರಾಜರಾಜೇಶ್ವರಿ ದೇವರ ಪ್ರಧಾನ ಗುಡಿಯಲ್ಲಿ, ಒಳಾಂಗಣ ಸುತ್ತುಪೌಳಿ, ಶ್ರೀ ಕ್ಷೇತ್ರಪಾಲ ಸನ್ನಿಧಿ, ನೂತನ ಧ್ವಜಸ್ತಂಭ, ವಸಂತ ಮಂಟಪ, ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನ ಗುಡಿ, ಹೊರಾಂಗಣ ಹಾಸುಕಲ್ಲು, ಮಹಾಬಲಿ ಪೀಠ, ಅಗ್ರಸಭಾ, ಒಳಾಂಗಣ ನಡುಚಪ್ಪರ, ತೀರ್ಥಬಾವಿ ಕೆಲಸಗಳು ನಡೆಯುತ್ತಿವೆ.

ಮೂರ್ತಿಗಳಿಗೆ ವರ್ಣಲೇಪನ: ದೇವರ ಮೂಲ ಗರ್ಭಗುಡಿಯಲ್ಲಿ ಇರಿಸಲಾಗಿರುವ ಶ್ರೀ ರಾಜರಾಜೇಶ್ವರಿ, ಸುಬ್ರಹ್ಮಣ್ಯ, ಗಣಪತಿ, ಭದ್ರಕಾಳಿ ದೊಡ್ಡ ಮೂರ್ತಿಗಳು ಹಾಗೂ ವಾಹನಗಳು, ಅಷ್ಟದಿಕ್ಪಾಲಕರ ಮೂರ್ತಿಗಳಿಗೆ ವರ್ಣಲೇಪನ ಕೆಲಸಗಳು ನಡೆಯುತ್ತಿವೆ. 64 ಬಗೆಯ ಗಿಡಮೂಲಿಕೆ, ಬಂಗಾರದ ಹುಡಿ, ಬೆಳ್ಳಿಯ ಹುಡಿ, ಪಾದರಸವನ್ನೊಳಗೊಂಡ ಕಡು ಶರ್ಕರ ಲೇಪನ ಮೂರು ತಿಂಗಳ ಹಿಂದೆ ಮಾಡಲಾಗಿದೆ. ಕೇರಳದಲ್ಲಿ ಈ ಪದ್ಧತಿ ಬಳಕೆಯಲ್ಲಿದ್ದು, ಇದರಿಂದ ಮೂರ್ತಿಗೆ 300 ವರ್ಷ ಹಾನಿಯಾಗುವುದಿಲ್ಲ. ಮುಂದಿನ ಭಾಗವಾಗಿ ಗಿಡಮೂಲಿಕೆಗಳಿಂದ ತಯಾರಿಸಿದ ಬಣ್ಣ ಹಚ್ಚಲಾಗುತ್ತಿದ್ದು, ಒಂದು ತಿಂಗಳ ಕಾಲ ಈ ಕೆಲಸ ನಡೆಯಲಿದೆ.

ಬಾಲಾಲಯದಲ್ಲಿ ಪೂಜೆ: ಜೀರ್ಣೋದ್ಧಾರ ಕೆಲಸ ನಡೆಯುತ್ತಿರುವುದರಿಂದ ಶ್ರೀ ರಾಜರಾಜೇಶ್ವರಿ, ಭದ್ರಕಾಳಿ, ಮಹಾಗಣಪತಿ, ಸುಬ್ರಹ್ಮಣ್ಯ, ಶಾಸ್ತಾವು ದೇವರ ಪಂಚಲೋಹದ ವಿಗ್ರಹಗಳನ್ನು ಬಾಲಾಲಯದಲ್ಲಿ ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ದೇವರ ಮಣ್ಣಿನ ಮೂರ್ತಿಗಳು ಗರ್ಭಗುಡಿಯಲ್ಲೇ ಇದ್ದು ಅವುಗಳ ಶಕ್ತಿಯನ್ನು ಈ ವಿಗ್ರಹಗಳಿಗೆ ಆವಾಹನೆ ಮಾಡಲಾಗಿದೆ. ಕ್ಷೇತ್ರದ ಮೂಲ ದೇವರಾಗಿರುವ ಶ್ರೀ ದುರ್ಗಾಪರಮೇಶ್ವರಿ ದೇವರನ್ನು ಪ್ರತ್ಯೇಕ ಬಾಲಾಲಯದಲ್ಲಿ ಪೂಜಿಸಲಾಗುತ್ತಿದೆ. ಗರ್ಭಗುಡಿಯಲ್ಲಿರುವ ಶ್ರೀ ರಾಜರಾಜೇಶ್ವರಿ ಹಾಗೂ ಭದ್ರಕಾಳಿ ದೇವರ ಮೂರ್ತಿ 9 ಅಡಿ ಎತ್ತರವಿದ್ದರೆ, ಸುಬ್ರಹ್ಮಣ್ಯ ಹಾಗೂ ಮಹಾಗಣಪತಿ ದೇವರ 7 ಅಡಿ ಎತ್ತರ ಮೂರ್ತಿಗಳಿವೆ. ದುರ್ಗಾಪರಮೇಶ್ವರಿಯ ಕಲ್ಲಿನ ವಿಗ್ರಹ 2 ಅಡಿ ಎತ್ತರವಿದೆ.

ಪೊಳಲಿ ದೇವಳದ ಮೂಲ ಸ್ವರೂಪವನ್ನೇ ಉಳಿಸಿ ನವೀಕರಣ ಮಾಡಲಾಗುತ್ತಿದೆ. ಹಿಂದಿನ ಗರ್ಭಗುಡಿಯನ್ನೂ ಯಥಾಸ್ಥಿತಿ ಉಳಿಸಲಾಗಿದ್ದು, ಅದರಿಂದ ಹೊರಕ್ಕೆ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ.
| ಸುಬ್ರಾಯ ಕಾರಂತ್, ಜೀರ್ಣೋದ್ಧಾರ ಸಮಿತಿ ಸದಸ್ಯ

- Advertisement -

Stay connected

278,463FansLike
562FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...