16 C
Bangalore
Wednesday, December 11, 2019

ಪೊಳಲಿಗೆ ಭಂಡಾರದ ಶೋಭಾಯಾತ್ರೆ

Latest News

ಬಾಲಿವುಡ್ ಆಕ್ಷನ್ ಸಿನಿಮಾದಲ್ಲಿ ಡಬ್ಲ್ಯುಡಬ್ಲ್ಯುಇ ಖ್ಯಾತಿಯ ಡ್ವೇನ್ ದಿ ರಾಕ್ ಜಾನ್ಸನ್ 

ಡಬ್ಲೂಡಬ್ಲೂಇ ‘ದಿ ರಾಕ್’ ಖ್ಯಾತಿಯ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಸದ್ಯ ‘ಜುಮಾಂಜಿ; ದಿ ನೆಕ್ಟ್ಸ್ ಲೆವೆಲ್’ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ಎಲ್ಲೆಡೆ...

ಅಮೃತ ಬಿಂದು

ಶಾಸ್ತ್ರಸಂಚೋದಿತೇ ಕಾಲೇ ನಿಃಶಬ್ದೇ ಚ ಮನೋರಮೇ | ಶಿವಲಿಂಗಾರಾಧನಂ ಯತ್ ಕಾಲಶುದ್ಧಿರಿಹೋದತೇ || ಧರ್ಮಶಾಸ್ತ್ರಗಳಲ್ಲಿ ಹೇಳಲಾದ ಪ್ರಶಾಂತವೂ ನಿಃಶಬ್ದವೂ ಮನೋರಮವೂ ಆದ ಸಮಯದಲ್ಲಿ ನಿಯತವಾಗಿ ತಪ್ಪದೆ ಶಿವಲಿಂಗಪೂಜೆ...

ಮೂವರು ಹೀರೋಯಿನ್​ಗಳ ಜತೆ ಗೋಲ್ಡನ್ ಸ್ಟಾರ್ ಗಣೇಶ್​​ ರೊಮ್ಯಾನ್ಸ್​ 

ಬೆಂಗಳೂರು: ‘ಗೋಲ್ಡನ್ ಸ್ಟಾರ್’ ಗಣೇಶ್ ಸದ್ಯ ‘ಗಾಳಿಪಟ’ ಹಾರಿಸುವುದರಲ್ಲಿ ಬಿಜಿಯಾಗಿದ್ದಾರೆ. ಅಂದರೆ ಯೋಗರಾಜ್ ಭಟ್ ನಿರ್ದೆಶನದ ‘ಗಾಳಿಪಟ 2’ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಕುದುರೆಮುಖದಲ್ಲಿ...

ಇಷ್ಟವಿಲ್ಲದ ಮದುವೆ ತಪ್ಪಿಸಲು ಸುಳ್ಳು ಹೇಳಿದ ವರ ಎಚ್​ಐವಿ ಕಥೆ ಕಟ್ಟಿ ಜೈಲುಪಾಲಾದ!

ವೈಯಕ್ತಿಕ ದ್ವೇಷಕ್ಕೋ ಅಥವಾ ಪ್ರೀತಿ-ಪ್ರೇಮದ ವಿಚಾರಕ್ಕೋ 3ನೇ ವ್ಯಕ್ತಿ ಸುಳ್ಳು ಹೇಳಿ ಮದುವೆ ಮುರಿಯುವುದು ಸಾಮನ್ಯ. ಆದರೆ, ಇಷ್ಟವಿಲ್ಲದ ಮದುವೆ ತಪ್ಪಿಸಿಕೊಳ್ಳಲು ವರನೇ ಎಚ್​ಐವಿ ಕಥೆ...

ಆಗ ಕೇರಾಫ್ ಫುಟ್​ಪಾತ್ ಈಗ ಖಗೋಳ ವಿಜ್ಞಾನಿ

ಕೆಲ ವರ್ಷಗಳ ಹಿಂದಿನ ಮಾತು. ಆರೇಳು ವರ್ಷದ ಬಾಲಕ ಆರ್ಯನ್ ಮಿಶ್ರಾ ವಾಸಿಸುತ್ತಿದ್ದುದು ದೆಹಲಿಯ ಕೊಳಗೇರಿ ಒಂದರಲ್ಲಿ. ಜೋಪಡಿಯಲ್ಲಿ ವಾಸಿಸುತ್ತಿದ್ದ ಈ ಬಾಲಕನಿಗೆ ಆಕಾಶವೇ ಸೂರು....

<ಅರ್ಕುಳದಿಂದ ಶ್ರೀ ರಾಜರಾಜೇಶ್ವರಿ ಸನ್ನಿಧಾನಕ್ಕೆ ಮೆರವಣಿಗೆ >

ಬಂಟ್ವಾಳ: ಫರಂಗಿಪೇಟೆ ಸಮೀಪದ ಅರ್ಕುಳ ಉಳ್ಳಾಕ್ಲು ಮಗ್ರಂತಾಯ ಧರ್ಮದೇವತೆಗಳ ಸಾನಿಧ್ಯಕ್ಕೂ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಏಳೆಂಟು ದಶಕಗಳಿಂದ ಪರಂಪರಾಗತವಾಗಿ ನಡೆದುಕೊಂಡು ಬಂದು ಮುಂದೆ ಕಾರಣಾಂತರದಿಂದ ಸ್ಥಗಿತಗೊಂಡಿದ್ದ ಅರ್ಕುಳದಿಂದ ಪೊಳಲಿಗೆ ಧರ್ಮ ದೇವತೆಗಳ ಭಂಡಾರದ ಶೋಭಾಯಾತ್ರೆ ಪೊಳಲಿಯ ಬ್ರಹ್ಮಕಲಶದ ಪುಣ್ಯವಸರದಲ್ಲಿ ಪುನಾರಂಭಗೊಳ್ಳಲಿದೆ.

ಪೊಳಲಿ ಕ್ಷೇತ್ರದ ಪುನಃ ನಿರ್ಮಾಣ ಹಿನ್ನೆಲೆಯಲ್ಲಿ ಪ್ರಶ್ನಾಚಿಂತನೆ ನಡೆಸಿದಾಗ ಅರ್ಕುಳಬೀಡು ಶ್ರೀ ಉಳ್ಳಾಕ್ಲು ಮಗ್ರಂತಾಯ ಧರ್ಮದೇವತೆಗಳ ಮಾಡ ಹಾಗೂ ಸಾಣವನ್ನು ಪುನಃ ನವೀಕರಣ ಮಾಡಿ ವರ್ಷಾವಧಿ ಜಾತ್ರೆ ಸಮಯದಲ್ಲಿ ಪೂರ್ವ ಕಟ್ಟುಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ದೈವಗಳ ಭಂಡಾರ ಪೊಳಲಿ ಕ್ಷೇತ್ರಕ್ಕೆ ಮೆಚ್ಚಿ ಸೇವೆ ನಡೆಯಬೇಕೆಂದು ಕಂಡುಬಂದಿದೆ. ಅದರಂತೆ ಪೊಳಲಿಯಲ್ಲಿ ಉಳ್ಳಾಕ್ಲು ಮಗ್ರಂತಾಯಿ ಧರ್ಮದೇವತೆಗಳಿಗೆ ವಾಸ್ತುಶಿಲ್ಪಗಳಿಗೆ ಅನುಗುಣವಾಗಿ ಹಾಗೂ ಶಾಸ್ತ್ರೋಕ್ತವಾಗಿ ಮಾಡ ಹಾಗೂ ಸಾಣವನ್ನು ನವೀಕರಣಗೊಳಿಸಿ ಮೆಚ್ಚಿ ಸೇವೆಗೂ ವ್ಯವಸ್ಥೆ ಮಾಡಲಾಗಿದೆ.

ಈ ವರ್ಷ ಅರ್ಕುಳ ಬೀಡಿನಿಂದ ಪೊಳಲಿ ಕ್ಷೇತ್ರಕ್ಕೆ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯ ಪುಣ್ಯವಸರದಲ್ಲಿ ಭಂಡಾರ ಹೋಗಿ ನೇಮ ಸೇವೆ ಎರಡು ಬಾರಿ ನಡೆಯಲಿದೆ ಎಂದು ಅರ್ಕುಳಬೀಡಿನ ವಜ್ರನಾಭ ಶೆಟ್ಟಿ ತಿಳಿಸಿದ್ದಾರೆ.

ಶೋಭಾಯಾತ್ರೆಯ ಹಾದಿ: ಮಾರ್ಚ್ 8ರಂದು ಪ್ರಾತಃಕಾಲ 6.30ಕ್ಕೆ ಅರ್ಕುಳ ಬೀಡಿನಿಂದ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ ಮೇರಮಜಲು, ಕುಟ್ಟಿಕಲ, ತೇವುಕಾಡು, ಅಬ್ಬೆಟ್ಟು, ಮಹಮ್ಮಾಯಿ ಕಟ್ಟೆ, ಅಮ್ಮುಂಜೆ, ಬಡಕಬೈಲು, ಪುಂಚಮೆ ಮಾರ್ಗವಾಗಿ 11.30ಕ್ಕೆ ಶ್ರೀ ಕ್ಷೇತ್ರ ಪೊಳಲಿ ತಲುಪಲಿದೆ. ಮಾ.13ರಂದು ರಾತ್ರಿ ಅರ್ಕುಳ ಶ್ರೀ ಉಳ್ಳಾಕ್ಲು ಮಗ್ರಂತಾಯಿ ಧರ್ಮದೇವತೆಗಳಿಗೆ ನೇಮ ಸೇವೆ ನಡೆಯಲಿದೆ. 14ರಂದು ಮಹಾಸಂಪ್ರೋಕ್ಷಣೆಯ ಅನಂತರ ಮಧ್ಯಾಹ್ನ 3ಕ್ಕೆ ಭಂಡಾರವು ಪೊಳಲಿಯಿಂದ ಹೊರಟು ಬಡಕಬೈಲು, ಧನುಪೂಜೆ, ಕಲ್ಪನೆ, ನೆತ್ರಕೆರೆ, ಕಡೆಗೋಳಿ, ಫರಂಗಿಪೇಟೆ ಮಾರ್ಗವಾಗಿ ಸಾಯಂಕಾಲ 6ಕ್ಕೆ ಅರ್ಕುಳ ಬೀಡು ತಲುಪಲಿದೆ ಎಂದು ವಜ್ರನಾಭ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಶತಮಾನದ ಇತಿಹಾಸ: ಅರ್ಕುಳ ಉಳ್ಳಾಕ್ಲು ಮಗ್ರಂತಾಯಿ ಧರ್ಮದೇವತೆಗಳ ಸಾನ್ನಿಧ್ಯಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ರಾಜಮನೆತನಗಳಿಂದ ಪೂಜಿಸಲ್ಪಡುತ್ತಿದ್ದ ಅರ್ಕುಳ ಧರ್ಮದೇವತೆಗಳ ಪೂಜೆ, ಮೆಚ್ಚಿ ಉತ್ಸವಗಳು ಬೀಡು ಮನೆತನದವರ ಹಿರಿತನದಲ್ಲಿ ಧಾರ್ಮಿಕ ಪರಂಪರೆ, ಸಾಂಪ್ರದಾಯಿಕ ರೀತಿ ರಿವಾಜುಗಳಿಗೆ ಅನುಗುಣವಾಗಿ ಅನೂಚಾನವಾಗಿ ತಲತಲಾಂತರಗಳಿಂದ ನಡೆಯುತ್ತಿದೆ. ಅರ್ಕುಳ ಬೀಡು ಮಂಗಳೂರಿನಿಂದ 14 ಕಿ.ಮೀ ದೂರದಲ್ಲಿ ನೇತ್ರಾವತಿ ನದಿ ತೀರದಲ್ಲಿದೆ. ಬೀಡು ಮನೆತನದವರು ಜೈನ ಮತಾವಲಂಬಿಗಳಾಗಿದ್ದು, ಬೀಡಿನ ಮನೆಯ ಶ್ರೀ ಪಾರ್ಶ್ವನಾಥ ಬಸದಿ, ಶೀ ಅನಂತನಾಥ ಬಸದಿ, ಶ್ರೀ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನ ಹಾಗೂ ಅದಕ್ಕೆ ಸಂಬಂಧಿತ ಪರಿವಾರ ದೈವಗಳ ವಿನಿಯೋಗಾದಿಗಳು ನಡೆಯುತ್ತಿವೆ. ಅರ್ಕುಳ ಬೀಡಿನ ನಾಯಕರು ಹಿಂದೆ 400 ಸೈನಿಕರನ್ನು ಹೊಂದಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕೈಪಿತ್ತುಗಳು ಎಂಬ ಪುಸ್ತಕದಲ್ಲಿದೆ. ಬೀಡಿನ ಹಿಂದೆ ಇರುವ ಕೋಟೆಯ ಕುರುಹು ಬೀಡಿನ ಹಿಂದಿನ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುತ್ತದೆ.

ದೇವಿ ಸನ್ನಿಧಿಯಲ್ಲಿ ಸಹೋದರಿಯರ ಶ್ರೀದೇವಿ ಮಹಾತ್ಮೆ ಹರಿಕಥೆ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಲಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಗುರುವಾರ ದೇವಸ್ಥಾನದ ಎದುರಿನ ಶ್ರೀ ದುರ್ಗಾಪರಮೇಶ್ವರಿ ವೇದಿಕೆ ಹಾಗೂ ಚೆಂಡಿನ ಗದ್ದೆಯಲ್ಲಿ ನಿರ್ಮಿಸಲಾದ ಶ್ರೀ ರಾಜರಾಜೇಶ್ವರಿ ವೇದಿಕೆಯಲ್ಲಿ ಭಗವದ್ಭಕ್ತರ ಮನಸ್ಸಿಗೆ ಆಹ್ಲಾದಕರವೆನಿಸುವ ಸಂಗೀತ ಹಾಗೂ ಹರಿಕಥಾ ಕಲಾಕ್ಷೇಪ ನಡೆಯಿತು.

ಬೆಳಗ್ಗೆ 8.30ರಿಂದ ಬೆಳ್ತಂಗಡಿಯ ಬಿ.ಪ್ರಕಾಶ್ ಮತ್ತು ಬಳಗದವರ ಸ್ಯಾಕ್ಸೋಫೋನ್ ವಾದನ, 11.30ರಿಂದ ಬೆಂಗಳೂರಿನ ಕುಮಾರ ಕಣವಿ ಹಾಗೂ ತಂಡದಿಂದ ಕನ್ನಡ ಗಝಲ್ ವಿಶೇಷ ರಸದೌತಣ ನೀಡಿತು. ರಾಜರಾಜೇಶ್ವರಿ ವೇದಿಕೆಯಲ್ಲಿ 12.30ರಿಂದ ಮೈಸೂರಿನ ವಾಣಿ-ವೀಣಾ ಸಹೋದರಿಯರು ಶ್ರೀ ದೇವಿ ಮಹಾತ್ಮೆ ಹರಿಕಥೆಗೆ ಪ್ರೇಕ್ಷಕರು ಮಂತ್ರಮುಗ್ಧರಾದರು. ಬಳಿಕ ರಾಜೇಶ್ ಬಾರ್ಕೂರು ತಂಡವವರಿಂದ ಭಾವಗಾನ ಪ್ರಸ್ತುತಗೊಂಡಿತು. ಮಧ್ಯಾಹ್ನ 3ರಿಂದ 4ವರೆಗೆ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನ ಕಲಾವಿದರಿಂದ ನೃತ್ಯ-ವೈವಿಧ್ಯ ಪ್ರದರ್ಶನಗೊಂಡಿತು.

ಭಗವತಿ ಮಹಾತ್ಮೆ: ಮಾ.6ರಂದು ರಾತ್ರಿ ಪೊಳಲಿ ಶ್ರೀ ಭಗವತಿ ತೀಯಾ ಸಮಾಜದ ಕಲಾವಿದರು ಪ್ರದರ್ಶಿಸಿದ ಯಕ್ಷಗಾನ ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ನೆರೆದಿದ್ದರು. ಫಯಾಜ್‌ಖಾನ್ ಬಳಗದವರ ಹಿಂದುಸ್ತಾನಿ ಗಾಯನ ಹಿರಿಕಿರಿಯ ಸಂಗೀತ ಪ್ರೇಮಿಗಳನ್ನು ಗಾನಗಂಧರ್ವ ಲೋಕದಲ್ಲಿ ವಿಹರಿಸುವಂತೆ ಮಾಡಿತು. ವಿದ್ವಾನ್ ಸುಧೀರ್ ರಾವ್ ಕೊಡವೂರು ನಿರ್ದೇಶನದಲ್ಲಿ ನಿಕೇತನ ಕಲಾವಿದರು ನಡೆಸಿಕೊಟ್ಟ ನೃತ್ಯ-ವೈವಿಧ್ಯ ಪ್ರೇಕ್ಷಕರಿಗೆ ಮುದ ನೀಡಿತು.

ಧಾರ್ಮಿಕ ಕಾರ್ಯಕ್ರಮಗಳು: ಮಾ.7ರಂದು ದೇವಸ್ಥಾನದಲ್ಲಿ ಕೆಲವು ವೈದಿಕ ಪೂಜೆ, ಹೋಮ-ಹವನಗಳು ನಡೆದವು. ಬೆಳಗ್ಗೆ 6ಕ್ಕೆ ಪುಣ್ಯಾಹ ಪೂಜಾ ಕಾರ್ಯಕ್ರಮ, ಬಳಿಕ ಗಣಪತಿ ಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಚೋರ ಶಾಂತಿ, ಸ್ವಶಾಂತಿ, ಸಪರಿವಾರ ಶ್ರೀ ರಾಜರಾಜೇಶ್ವರಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಅನುಜ್ಞಾ ಕಲಶಾಧಿವಾಸ, ಅಧಿವಾಸ ಹೋಮಗಳು ನಡೆದವು.

ಪೊಳಲಿ ದೇವಳದಲ್ಲಿ ಇಂದು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಐದನೇ ದಿನ ಮಾ.8ರಂದು ಸಾಯಂಕಾಲ ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ಪೊಳಲಿ ಶ್ರೀ ರಾಮಕೃಷ್ಣ ಆಶ್ರಮದ ವಿವೇಕ ಚೈತನ್ಯಾನಂದ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕೃಷ್ಣ ಆಚಾರ್ಯ ಕಾರ್ಕಳ(ಶಿಲೆಕಲ್ಲಿನ ಶಿಲ್ಪಿ), ಜಯಂತ ಗಂಜಿಮಠ(ಕಾಷ್ಠ ಶಿಲ್ಪಿ), ಸತೀಶ್ ಅಮ್ಮುಂಜೆ(ಗುತ್ತಿಗೆದಾರ) ಮತ್ತು ವಿ.ಪಿ.ಪ್ರಕಾಶ್(ಕಂಚಿನ ಕೆಲಸದ ಗುತ್ತಿಗೆದಾರ) ಅವರನ್ನು ಸನ್ಮಾನಿಸಲಾಗುವುದು.

ಧಾರ್ಮಿಕ ಕಾರ್ಯಕ್ರಮ: ಬೆಳಗ್ಗೆ 6ರಿಂದ ಪುಣ್ಯಾಹ, ಗಣಹೋಮ, ದುರ್ಗಾಹೋಮ, ಅನುಜ್ಞಾ ಪ್ರಾರ್ಥನೆ, ಮಹಾಪೂಜೆ ಹಾಗೂ ಸಂಜೆ 5ರಿಂದ ಮಂಟಪ ಸಂಸ್ಕಾರ, ಬ್ರಹ್ಮಕಲಶಕ್ಕೆ ಅಂಕುರೋಪಣೆ, ಮೂಲಾಯದಲ್ಲಿ ಸಪ್ತಶುದ್ಧಿ, ಅಸ್ತ್ರಕಲಶಪೂಜೆ, ಅಧಿವಾಸ ಹೋಮ, ಅರ್ಕುಲ ಶ್ರೀ ಉಳ್ಳಾಕ್ಲು ಮಗೃಂತಾಯ ದೈವಸ್ಥಾನದಲ್ಲಿ ಪ್ರಾಸಾದ ಶುದ್ಧಾದಿಗಳು, ಮಹಾಪೂಜೆ ನೆರವೇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಬೆಳಗ್ಗೆ 8.30ರಿಂದ 9.30ರವರೆಗೆ ಪಡುಬಿದ್ರೆ ಹಿದಾಯಿತುಲ್ಲಾ ಮತ್ತು ಬಳಗದಿಂದ ನಾದಸ್ವರ ವಾದನ, 11.30 ಮಧ್ಯಾಹ್ನ 12.30ರವರೆಗೆ ಚೆನ್ನೈನ ವಿಶ್ವಾಸ ಮತ್ತು ಬಳಗದಿಂದ ಮ್ಯಾಂಡೋಲಿನ್ ವಾದನ, 12.30ರಿಂದ 1.55ರವರೆಗೆ ಕಲ್ಲಡ್ಕ ವಿಠಲ ನಾಯ್ಕ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ, 2ರಿಂದ 2.25ರವರೆಗೆ ಮರ್ಕಮೆ ಪ್ರವೀಣ್ ಮತ್ತು ಬಳಗದಿಂದ ‘ಕುಸಲ್ದ ಕರ್ಲರಿ’, 2.30ರಿಂದ 2.45ಕ್ಕೆ ಪೊಳಲಿ ಅಶೋಕರಿಂದ ವಿಶೇಷ ನೃತ್ಯ, 2.50ರಿಂದ 4.30ರವರೆಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ, ಸಂಜೆ 4.30ರಿಂದ 5.55ರವರೆಗೆ ಬಪ್ಪನಾಡು ನಾಗೇಶ್ ಮತ್ತು ಬಳಗದಿಂದ ನಾದಸ್ವರ ವಾದನ. ರಾತ್ರಿ 7ರಿಂದ 9ರವರೆಗೆ ಅಂಬಯ್ಯನುಲಿ ಮತ್ತು ಬಳಗದಿಂದ ದಾಸರ ಪದಗಳು ಹಾಗೂ ರಾತ್ರಿ 9ರಿಂದ 10ರವರೆಗೆ ಮಂಗಳೂರು ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ನಿರ್ದೇಶನದಲ್ಲಿ ‘ಪುಣ್ಯಭೂಮಿ ಭಾರತ’ ಪ್ರಸ್ತುತಗೊಳ್ಳಲಿದೆ.

ಕದ್ರಿ ಹೊರೆಕಾಣಿಕೆ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪುನಃ ನವೀಕರಣ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ಸಲ್ಲಿಸಲು ಕದ್ರಿಯ ವೃಕ್ಷರಾಜ ಸೇವಾ ಸಮಿತಿ ಸ್ಥಾಪಿಸಿದ ಹೊರ ಕಾಣಿಕೆ ಸಂಗ್ರಹ ಕೇಂದ್ರವನ್ನು ಡಾ.ಐ.ಜಿ.ಭಟ್ ಉದ್ಘಾಟಿಸಿದರು. ಅಚ್ಯುತ ಭಟ್, ಎಸ್.ಪ್ರದೀಪ ಕುಮಾರ ಕಲ್ಕೂರ, ಶರವು ಗಣೇಶ ಭಟ್, ದಯಾನಂದ, ಸಂತೋಷ್ ಕುಮಾರ್, ರಾಘವೇಂದ್ರ, ರಮೇಶ ಅಮೀನ್, ಪ್ರಕಾಶ್, ಮಣಿ ಹೆಗ್ಡೆ ಉಪಸ್ಥಿತರಿದ್ದರು. ಮಾ.8ರಂದು ಹೊರೆಕಾಣಿಕೆ ಮೆರವಣಿಗೆ ಪೊಳಲಿಗೆ ಸಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Stay connected

278,738FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...