ವಿಷಯುಕ್ತ ಮೇವು ತಿಂದು 3 ಹಸು ಸಾವು

ಕೋಳಗುಂದ: ಇಲ್ಲಿನ ರೈತ ಮಹೇಶ್ವರಯ್ಯ ಎಂಬುವರಿಗೆ ಸೇರಿದ 2 ನಾಟಿ ಹಾಗೂ 1 ಮಿಶ್ರತಳಿ ಹಸುಗಳು ಇದ್ದಕ್ಕಿದ್ದಂತೆ ಮೃತಪಟ್ಟಿವೆ.

ಜೀವನಾಧಾರವಾಗಿದ್ದ ಮತ್ತು ಕಷ್ಟಪಟ್ಟು ಸಾಕಿದ್ದ ಜಾನುವಾರುಗಳ ಸಾವಿನಿಂದ ಮಹೇಶ್ವರಯ್ಯ ಕಂಗಾಲಾಗಿದ್ದು, ಅವರ ಕುಟುಂಬ ಕಣ್ಣೀರು ಸುರಿಸುವಂತಾಗಿದೆ.

ವಿಷಯ ತಿಳಿದ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಆರ್.ಆನಂದ್, ಸಿಬ್ಬಂದಿ ಮಹೇಶನಾಯಕ್ ಮತ್ತು ಅತೀಕ್ ಸ್ಥಳಕ್ಕೆ ಭೇಟಿ ನೀಡಿ ಹಸುಗಳ ಮೃತದೇಹ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆಸಿದ ಅವರು, ವಿಷಯುಕ್ತ ಮೇವು ತಿಂದು ಹಸುಗಳು ಸಾವಿಗೀಡಾಗಿರುವುದಾಗಿ ತಿಳಿಸಿದ್ದಾರೆ.

ಜಾನುವಾರುಗಳ ಸಾವಿನಿಂದ ನೊಂದಿರುವ ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *