More

    ಪೊಗರು ಹಾಡಿಗೆ 3 ಕೋಟಿ ರೂಪಾಯಿ ಖರ್ಚು

    ಕೆ. ಗಂಗಾಧರ್ ನಿರ್ಮಾಣ, ನಂದಕಿಶೋರ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಪೊಗರು’ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ.

    ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಡೈಲಾಗ್ ಟ್ರೇಲರ್ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ಬಹುದಿನಗಳ ನಂತರ ಧ್ರುವ ಸರ್ಜಾ ಆಗಮನವಾಗಿದ್ದರಿಂದ ಅಭಿಮಾನಿಗಳಿಗೂ ಅದು ಹಬ್ಬದೂಟವನ್ನೇ ಬಡಿಸಿತ್ತು. ಈಗ ಇನ್ನೊಂದು ವಿಶೇಷವಾದುದನ್ನೇ ನೀಡಲು ಚಿತ್ರತಂಡ ತಯಾರಿ ನಡೆಸಿದೆ.

    ಬರೋಬ್ಬರಿ 3.5 ಕೋಟಿ ರೂ. ವೆಚ್ಚದಲ್ಲಿ ನಾಯಕನ ಇಂಟ್ರೊಡಕ್ಷನ್ ಹಾಡನ್ನು ಸೆರೆಹಿಡಿಯಲು ಪ್ಲ್ಯಾನ್ ಸಿದ್ಧವಾಗಿದೆ. ಹೈದರಾಬಾದ್​ನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಈಗಾಗಲೇ ಅದ್ದೂರಿ ಸೆಟ್​ಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಹಾಡಿನ ಕಂಪೋಸಿಂಗ್ ಸಹ ಮುಗಿದಿದೆ.

    ಜ. 26ಕ್ಕೆ ಇಡೀ ನೃತ್ಯ ತಂಡದೊಂದಿಗೆ ಹೈದರಾಬಾದ್​ನತ್ತ ಪ್ರಯಾಣ ಬೆಳಸಲಿದೆ ‘ಪೊಗರು’ ಟೀಮ್ ಇನ್ನುಳಿದಂತೆ ಡಬ್ಬಿಂಗ್ ಕೆಲಸವೂ ನಡೆದಿದ್ದು, ಹಾಡುಗಳ ಚಿತ್ರೀಕರಣ ಬಾಕಿ ಇದೆ. ಎಲ್ಲ ಅಂದುಕೊಂಡಂತೆ ಆದರೆ, ಮಾರ್ಚ್ ವೇಳೆಗೆ ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts