ಕವಯಿತ್ರಿಯರಿಗಾಗಿ ವಿಜಯವಾಣಿಯ ‘ಕವನ ಸಂಕ್ರಮಣ’

ಬೆಂಗಳೂರು: ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದು ಇದು ಎಳ್ಳು ಬೆಲ್ಲದ ಹದವಾದ ಸಿಹಿ-ಕಹಿ ಆವರಿಸಿಕೊಳ್ಳುವ ಸಮಯ. ಈ ವೇಳೆ ಕವಿಮನಸ್ಸಿನಲ್ಲಿ ಕಾವ್ಯಸ್ಫೂರ್ತಿ ಉಕ್ಕುತ್ತದೆ. ಹಾಗಾಗಿ ಈ ಬಾರಿ ವಿಜಯವಾಣಿ ದಿನಪತ್ರಿಕೆ ವಿಶೇಷವಾಗಿ ನಾಡಿನ ಕವಯಿತ್ರಿಯರಿಗೆಂದು ‘ಕವನ ಸಂಕ್ರಮಣ’ ವೇದಿಕೆ ಕಲ್ಪಿಸಿದೆ.

ಕವಯಿತ್ರಿಯರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಿಕೊಳ್ಳಲು ಇದು ವಿಶೇಷ ಅವಕಾಶವಾಗಿದ್ದು, ಆಸಕ್ತರು ‘ಮಕರ ಸಂಕ್ರಮಣ’ ಕುರಿತು ಕವನ ರಚಿಸಿ ನಮಗೆ ಕಳುಹಿಸಬೇಕು. ಕವನ ಚಿಕ್ಕದಿದ್ದಷ್ಟೂ ಪ್ರಕಟಣೆಗೆ ಅನುಕೂಲವಾಗುತ್ತದೆ ಮತ್ತು ನೀವು ನಮಗೆ ಕಳುಹಿಸುವ ಕವನ ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.

ಕವನ ಕಳುಹಿಸಬೇಕಾದ ವಿಳಾಸ: ವಿಜಯವಾಣಿ, ವಿಆರ್​ಎಲ್​ ಮೀಡಿಯಾ, ಸಂಕ್ರಾಂತಿ ಕವಿತೆಗಳು ವಿಭಾಗ, ಲಲಿತಾ ಪುರವಣಿ, ನಂ-24, ಶ್ರೀ ಸಾಯಿರಾಂ ಟವರ್ಸ್​, 5ನೇ ಮುಖ್ಯರಸ್ತೆ, ಪುಟ್ಟಣ್ಣ ಚೆಟ್ಟಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018. ಇ-ಮೇಲ್​: [email protected]