ತವರ ಮಿಡಿತಗಳಿಗೆ ಬರೀ ಎರಡು ದಿನ ಸಾಕೇ?: ಕವನ

ಒಂದು ವಾರ ರಜೆ ಹಗುರಾಗಲೆಂದು ತವರಿಗೆ ಹೊರಟ ಎರಡನೆಯ ದಿನವೇ ಮಾತನಾಡಿತು ಮೊಬೈಲು ‘ಮನೆಗೆ ನೆಂಟರ ಆಗಮನ ಇವತ್ತೇ ವಾಪಸಾದರೆ ಚೊಲೊ ಇತ್ತು’   ಬ್ಯಾಗ್​ನಲ್ಲಿ ಹುದುಗಿದ್ದ ಬಟ್ಟೆಗಳು ಇನ್ನೂ ತವರಿನ ನೀರಲ್ಲಿ ನೆಂದಿಲ್ಲ ಮಗಳ ಗೊಂಬೆ ಚಪ್ಪಲಿಗಳನ್ನು ತೋಟ ಗದ್ದೆಯ ಮಣ್ಣು ಮುದ್ದಿಸಿಲ್ಲ   ಆಯಿ ಕಡುಬಿಗೆಂದು ಕೊಯ್ದಿಟ್ಟ ಹಲಸಿಕಾಯಿಯ ಕಂಪು ಮನೆತುಂಬಿಲ್ಲ ಮುಂದಿನ ಮನೆ ಹಿರಿಯಬ್ಬೆಯ ಕಷಾಯ ಸವಿದು ರೆಸೆಪಿ ತಲೆಗಿಳಿಸಿಬರುವ ಯೋಜನೆಗೆ ಸದ್ಯ ಆಯವೇ ಇಲ್ಲ   ಆಚೆಮನೆ ಕೊಟ್ಟಿಗೆಯ ಕರುವಿಗೆ ಹಳ್ಳದ … Continue reading ತವರ ಮಿಡಿತಗಳಿಗೆ ಬರೀ ಎರಡು ದಿನ ಸಾಕೇ?: ಕವನ