ಪ್ರಧಾನಿ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿಯಾಗಿ ನೃಪೇಂದ್ರ ಮಿಶ್ರಾ ಮರುನೇಮಕ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ ನೃಪೇಂದ್ರ ಮಿಶ್ರಾ ಅವರನ್ನು ಮರು ನೇಮಿಸಿ ಮಂಗಳವಾರ ಕ್ಯಾಬಿನೆಟ್ ನೇಮಕ ಸಮಿತಿಯು ಅನುಮೋದಿಸಿದೆ.

ಮೇ 31ರಂದಲೇ ಜಾರಿಗೆ ಬರುವಂತೆ 1967ನೇ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದ ನೃಪೇಂದ್ರ ಮಿಶ್ರಾ ಅವರು ಈಗಲೂ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಮಿಶ್ರಾ ಅವರನ್ನು ಮರು ನೇಮಕ ಮಾಡಿ ಆದೇಶಿಸಲಾಗಿದೆ.

ಅಲ್ಲದೆ ಪಿಕೆ ಮಿಶ್ರಾ ಅವರನ್ನು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕ ಮಾಡಲಾಗಿದ್ದು, ಅವರ ಕಚೇರಿ ಅವಧಿಯಲ್ಲಿ ಎರಡೂ ಅಧಿಕಾರಿಗಳಿಗೆ ಕ್ಯಾಬಿನೆಟ್ ಮಂತ್ರಿ ಸ್ಥಾನಮಾನವನ್ನು ಆದ್ಯತೆಯ ಕ್ರಮದಲ್ಲಿ ನಿಗದಿಪಡಿಸಲಾಗುವುದು ಎಂದು ಸರಕಾರದ ಅಧಿಸೂಚನೆಯಲ್ಲಿ ಮಂಗಳವಾರ ತಿಳಿಸಲಾಗಿದೆ.

ಅವರ ನೇಮಕವು ಪ್ರಧಾನ ಮಂತ್ರಿಯ ಅವಧಿಯೊಂದಿಗೆ ಸಹ-ಅವಧಿಯನ್ನು ಹೊಂದಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ಮೋದಿ ಎರಡನೇ ಬಾರಿಗೆ ಮೇ 30ರಂದು ಅಧಿಕಾರ ಸ್ವೀಕರಿಸಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *