18 C
Bangalore
Friday, December 6, 2019

ಡೈಲಾಗ್​ಗಳ ಅಬ್ಬರ ಕಲ್ಪನೆಗಳ ಮಿಶ್ರಣ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

| ರವೀಂದ್ರ ದೇಶಮುಖ್ ಬೆಂಗಳೂರು

ಬಯೋಪಿಕ್​ಗಳು ತೆರೆ ಮೇಲೆ ಸೋತಿದ್ದೇ ಹೆಚ್ಚು. ಆದರೆ, ‘ಪಿಎಂ ನರೇಂದ್ರ ಮೋದಿ’ ಬಗ್ಗೆ ಭಾರಿ ಕುತೂಹಲವೇ ಇತ್ತು. ಅದೂ, ಚುನಾವಣೆ ಹೊತ್ತಲ್ಲಿ ಈ ಸಿನಿಮಾ ಬಿಡುಗಡೆ ಮಾಡಬಾರದೆಂದು ಚುನಾವಣಾ ಆಯೋಗ, ಕೋರ್ಟ್ ಮೆಟ್ಟಿಲು ಹತ್ತಿದ ಬಳಿಕವಂತೂ ಮೋದಿ ಸಿನಿಮಾದಲ್ಲಿ ಬಹಳಷ್ಟು ಸ್ವಾರಸ್ಯಗಳು ಇರಬಹುದು ಎಂಬ ನಿರೀಕ್ಷೆ ಗರಿಗೆದರಿತ್ತು. ಬೇಸರದ ಸಂಗತಿ ಎಂದರೆ, ಉತ್ತಮ ಬ್ಯಾಟ್ಸ್ ಮನ್ ಸಿಕ್ಸರ್ ಅಟ್ಟಬೇಕಾದ ಬೌಲಿಗೆ ಸಿಂಗಲ್ ರನ್ ತೆಗೆದು ಅವಕಾಶ ಕೈಚೆಲ್ಲಿದಂತೆ ನಿರ್ದೇಶಕ ಒಮಂಗ್ ಕುಮಾರ್, ಮೋದಿ ಬಯೋಪಿಕ್ ಅನ್ನು ಅದ್ಭುತವಾಗಿಸುವ ಚಾನ್ಸ್ ಕಳೆದುಕೊಂಡಿದ್ದಾರೆ. ಮೋದಿಯವರ ಚರಿಷ್ಮಾ ವ್ಯಕ್ತಿತ್ವ ಎತ್ತಿಹಿಡಿಯುವಲ್ಲಿ, ಅವರ ಬದುಕಿನ ಸೂಕ್ಷ್ಮ ಘಟ್ಟಗಳನ್ನು, ಮಹತ್ವದ ತಿರುವುಗಳನ್ನು ದರ್ಶಿಸುವಲ್ಲಿ ಸೋತಿರುವ ಚಿತ್ರ ಡೈಲಾಗ್​ಗಳಿಂದ ಆರ್ಭಟಿಸಿದೆ. ಪಂಚಿಂಗ್ ಡೈಲಾಗ್​ಗಳು, ಮೋದಿ ರ್ಯಾಲಿಯಲ್ಲೇ ಪ್ರಸ್ತಾಪಿಸಿದ ಡೈಲಾಗ್ ಚಿತ್ರದುದ್ದಕ್ಕೂ ಅನುರಣಿಸುತ್ತವೆ. ಅದರ ಜತೆ ಶಿಳ್ಳೆ, ಚಪ್ಪಾಳೆ ಹಾಕೋದಂತೂ ಮರೆಯೋದಿಲ್ಲ. ಚಿತ್ರಮಂದಿರದಲ್ಲೂ ಆಗಾಗ ‘ಮೋದಿ ಮೋದಿ’ ಎಂಬ ಕೂಗು!

ವಡ್​ನಗರ್ ರೈಲುನಿಲ್ದಾಣದಲ್ಲಿ ಚಾಯ್ವಾಲಾನ ಪಾತ್ರದಿಂದ ಚಿತ್ರ ಆರಂಭಗೊಂಡಿದೆ. ‘ಚಾಯ್ ಪೇ ಚರ್ಚಾ ಬೀನಾ ಖರ್ಚೆ ಕಾ ಶಿಕ್ಷಾ’ (ಚಹಾದ ಜತೆ ಚರ್ಚೆ ಖರ್ಚಿಲ್ಲದೆ ಶಿಕ್ಷಣ) ಎನ್ನುವ ಬಾಲಮೋದಿಯ ಪಾತ್ರ ಆರಂಭದಿಂದಲೇ ರಾಷ್ಟ್ರವಾದದ ವಿಚಾರಗಳನ್ನು, ದೇಶಪ್ರೇಮವನ್ನು ಹೇಳುತ್ತ ಬಂದಿದೆ. ಬಳಿಕ ಹಿಮಾಲಯದ ರಮ್ಯತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದ್ದು, ಕಣ್ಮನ ಸೆಳೆಯುತ್ತವೆ. ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದಿದ್ದು, ಲಕ್ಷ್ಮಣ್ ರಾವ್ ಇನಾಮಾದಾರ್ ಗರಡಿಯಲ್ಲಿ ಪಳಗಿದ್ದು, ಬಳಿಕ ರಾಜಕೀಯ ಪ್ರವೇಶ, ಅಲ್ಲಿ ಅನುಭವಿಸಿದ ತಾಪತ್ರಯಗಳು, ಗುಜರಾತ್ ಮುಖ್ಯಮಂತ್ರಿಯಾಗಿ ಮಾಡಿದ ಸಾಧನೆ… ಇವೆಲ್ಲವೂ ಅಚ್ಚುಕಟ್ಟಾಗಿ ತೋರಿಸಲಾಗಿದೆಯಾದರೂ, ಅಲ್ಲಲ್ಲಿ ಕಾಲ್ಪನಿಕ ದೃಶ್ಯಗಳನ್ನು ತುರುಕಿರುವುದರಿಂದ ರಸಭಂಗದ ಅನುಭವವಾಗುತ್ತದೆ.

ಮೋದಿ ಪಾತ್ರದಲ್ಲಿ ನಟಿಸಿರುವ ವಿವೇಕ್ ಒಬೆರಾಯ್ ಸಿದ್ಧತೆ, ಬದ್ಧತೆ, ನಟನೆಗೆ ಫುಲ್ ಮಾರ್ಕ್ಸ್. ಸಾಕಷ್ಟು ತಯಾರಿ ಮಾಡಿಕೊಂಡು ಮೋದಿಯೊಳಗಡೆ ಇಳಿದು, ಪಾತ್ರಕ್ಕೆ ಜೀವ ತುಂಬಿದ್ದಾರೆ ವಿವೇಕ್. ತಾಯಿ-ಮಗನ ವಾತ್ಸಲ್ಯದ ದೃಶ್ಯಗಳು ಕಣ್ಣೀರು ಜಾರಿಸುತ್ತವೆ. ಮೋದಿ ತಾಯಿ ಹೀರಾಬೆನ್ ಪಾತ್ರದಲ್ಲಿ ಝುರೀನಾ ವಾಹಿಬ್ ನಟನೆ ಪರ್ಫೆಕ್ಟ್. ಮೋಟಾ ಭಾಯ್ ಅಂದರೆ ಅಮಿತ್ ಷಾ ಪಾತ್ರದಲ್ಲಿ ಮನೋಜ್ ಜೋಶಿ, ರತನ್ ಟಾಟಾ ಪಾತ್ರದಲ್ಲಿ ಬೋಮನ್ ಇರಾನಿ ಗಮನ ಸೆಳೆಯುತ್ತಾರೆ.

‘ಚುನಾವಣೆ ದುಡ್ಡಿನಿಂದಲ್ಲ, ಜನರಿಂದ ಗೆಲ್ಲಲಾಗುತ್ತೆ..’, ‘ಸರ್ಕಾರ ನಡೆಸುವುದು ಕೂಡ ಚಹಾ ಮಾಡಿದಂತೆ..’, ‘ಕಣ್ಣುಗಳಲ್ಲಿ ಅದೆಷ್ಟು ಕನಸುಗಳು ಇವೆಯೆಂದರೆ ನಿದ್ದೆಗೆ ಜಾಗವೇ ಇಲ್ಲ..’- ಹೀಗೆ ಹಲವು ಡೈಲಾಗ್​ಗಳು ಮೋದಿ ಅಭಿಮಾನಿಗಳನ್ನು ಫುಲ್ ಖುಷ್ ಮಾಡುತ್ತವೆ. ‘ಮನ್ ಫಕೀರಾ ಚೈನ್ ನಾ ಪಾವೇ…’ ಹಾಡು ಕೇಳಿಸಿಕೊಳ್ಳುವಂತಿದೆ. ರಾಜನೀತಿಯ ಹಲವು ಪಾಠಗಳು, ಭ್ರಷ್ಟಾಚಾರದ ವಿರುದ್ಧ, ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು, ಸಮಸ್ಯೆಗಳು ಬಂದಾಗ ಎದೆಗುಂದದ ಮೋದಿ ನಿಲುವು ಸ್ಪಷ್ಟವಾಗಿ ನೋಡುಗರ ಮನಕ್ಕೆ ಇಳಿಯುತ್ತವೆ. ನೀರಿನ ಸಮಸ್ಯೆ ನಿವಾರಣೆಗೆ ಶ್ರಮದಾನ ಮಾಡಲು ಹೊರಟ ಮೋದಿ, ‘ಚುನಾವಣೆ ಜಾದು ಮೂಲಕ ಗೆಲ್ಲಬಹುದು. ಆ ಚಮತ್ಕಾರವೇ ಕೆಲಸ. ಕೆಲಸ ಮಾಡುತ್ತ ಹೋಗಿ, ವೋಟು ನಿಮ್ಮೆಡೆಗೆ ನಡೆದುಕೊಂಡು ಬರುತ್ತವೆ’ ಎಂದು ಹೇಳಿದ್ದು, ರಾಜಕಾರಣಿಗಳ ಪಾಲಿಗೆ ಅದ್ಭುತ ಸಂದೇಶ.

ಗುಜರಾತ್ ಸಿಎಂ ಆಗಿದ್ದಾಗ ಮೋದಿ ಅನುಸರಿಸಿದ ನೀತಿಗಳು, ಬಿಗಿ, ಪಾರದರ್ಶಕ ಆಡಳಿತವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಇದು ಬಯೋಪಿಕ್ ಆಗಿರುವುದರಿಂದ ಮೋದಿಯ ಬಾಲ್ಯ, ಯೌವನಾವಸ್ಥೆಯಲ್ಲಿ ಅವರ ಆಪ್ತರು, ವಿರೋಧಿಗಳ ಬಗೆಗೂ ನಮೋ ತೋರಿದ ಪ್ರೀತಿ-ಸಹಿಷ್ಣುತೆ ಇದನ್ನೆಲ್ಲ ಹೇಳುವ ಅವಕಾಶ ನಿರ್ದೇಶಕರಿಗಿತ್ತು. ಅವರ ದಿನಚರಿ, ಹವ್ಯಾಸಗಳ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲ. ಆದರೂ, ಮೋದಿ ಅಭಿಮಾನಿಗಳ ಪಾಲಿಗಂತೂ ರಂಜನೆ ವಿಷಯದಲ್ಲಿ ಖಮಂಗ್ (ಸ್ವಾದಿಷ್ಟ) ಢೋಕ್ಲಾನೇ ಸರಿ.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...