ವಾರಾಣಸಿಯಲ್ಲಿ ನರೇಂದ್ರ ಮೋದಿ ಭಾರಿ ಮುನ್ನಡೆ, ಕಣದಲ್ಲಿದ್ದಾರೆ 25 ಅಭ್ಯರ್ಥಿಗಳು

ವಾರಾಣಸಿ: ಜಗತ್ತಿನಾದ್ಯಂತ ಭಾರಿ ಕುತೂಹಲ ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ವಾರಾಣಸಿಯಲ್ಲಿ ಸದ್ಯ 20,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಮೇ 19ರಂದು ವಾರಾಣಸಿಯಲ್ಲಿ ಚುನಾವಣೆ ನಡೆದಿದ್ದು, ಇಲ್ಲಿ ಮೋದಿಯವರಿಗೆ ಸ್ಪರ್ಧೆಯೊಡ್ಡಲು ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ ಕಾಂಗ್ರೆಸ್​ನ ಅಜಯ್​ ರಾಯ್​ ಹಾಗೂ ಬಿಎಸ್​ಪಿ-ಎಸ್ಪಿ ಮೈತ್ರಿಯ ಶಾಲಿನಿ ಯಾದವ್​ ಪ್ರಮುಖ ಪ್ರತಿಸ್ಫರ್ಧಿಗಳು.

ಈ ಬಾರಿ ವಾರಾಣಸಿಯಲ್ಲಿ ನರೇಂದ್ರ ಮೋದಿಯವರ ರೋಡ್​ ಶೋ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ರೋಡ್​ ಶೋ ನಡೆದ ದಿನವೇ ತಮ್ಮ ಗೆಲುವು ಖಚಿತ ಎಂದು ಮೋದಿ ತಿಳಿಸಿದ್ದರು. ಈ ಕ್ಷೇತ್ರದಲ್ಲಿ ಅಜಯ್​ ರಾಯ್​ ಪರ ಪ್ರಿಯಾಂಕಾ ರೋಡ್​ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ.

Leave a Reply

Your email address will not be published. Required fields are marked *