More

  ಪ್ರಧಾನಿ ಮೋದಿ ರೈತ ಸಮಾವೇಶದ ಬೆನ್ನಲ್ಲೇ ರೈತರ ಖಾತೆಗೆ ಬಂದ ಹಣ; ಕೋಲಾರದ ಈ ರೈತ ಹೇಳಿದ್ದೇನು?

  ಕೋಲಾರ: ತುಮಕೂರಿನಲ್ಲಿ ರೈತ ಸಮಾವೇಶಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ಕೋಲಾರದ ರೈತನಿಗೆ ಹಣ ಜಮಾ ಆಗಿದ್ದು ಇಲ್ಲಿನ ರೈತ ಸಂತಸ ವ್ಯಕ್ತಪಡಿಸಿದ್ದಾನೆ.

  ಬರದನಾಡು ಕೋಲಾರ ಜಿಲ್ಲೆಯ ರೈತನಿಗೆ ಹಣ ಜಮಾವಾಗಿದ್ದು, ಇಲ್ಲಿನ ರೈತರು ಸಂತೋಷ ವ್ಯಕ್ತಪಡಿಸಿದ್ದಾರೆ. ಕೋಲಾರ ತಾಲೂಕಿನ ಮಟ್ಟನಹಳ್ಳಿಯ ರೈತ ನಾರಾಯಣಗೌಡ ಅವರ ಖಾತೆಗೆ ಜಮವಾಗಿದೆ.

  ಮಧ್ಯಾಹ್ನ 2.30ಕ್ಕೆ ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನಿ ಮೋದಿ ದೇಶದ ಪ್ರಗತಿ ಪರ ರೈತರನ್ನು ಸನ್ಮಾನಿಸಿದ್ದರು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ರೈತರ ಖಾತೆಗೆ ಹಣ ಬಂದಿದೆ.

  ಕೋಲಾರದ ಮಟ್ಟನಹಳ್ಳಿಯ ರೈತ ನಾರಾಯಣಗೌಡ ಅವರ ಖಾತೆಗೆ 4 ಗಂಟೆ 1ನಿಮಿಷಕ್ಕೆ 2 ಸಾವಿರ ರೂಪಾಯಿಗಳ ಹಣ ಜಮಾವಾಗಿರುವುದಾಗಿ ಮೊಬೈಲ್​ ಸಂದೇಶ ಬಂದಿದೆ.

  ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ಯೋಜನೆ ಹಣ ಖಾತೆಗೆ ಬಂದಿರುವುದಾಗಿ ಸಂದೇಶ ತಿಳಿಸಿದೆ ಎಂದು ರೈತ ನಾರಾಯಣಗೌಡ ಹರ್ಷ ವ್ಯಕ್ತ ಪಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts