ಪ್ರಧಾನಿ ಮೋದಿ ಪರಾಕ್ರಮ ಪಾಕ್‌ನಿಂದ ಪೈಲಟ್ ಹಿಂತಿರುಗುವುದರೊಂದಿಗೆ ಸಾಬೀತಾಗಿದೆ ಎಂದ ಸಚಿವೆ ಸ್ಮೃತಿ ಇರಾನಿ

ನವದೆಹಲಿ: ಪಾಕ್‌ ಸೈನಿಕರಿಗೆ ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಸೆರೆಸಿಕ್ಕ ಎರಡು ದಿನಗಳ ಬಳಿಕ ಹಿಂತಿರುಗಿದ್ದು, ಇದಕ್ಕೆ ಪ್ರಧಾನಿ ಮೋದಿಯವರ ಹೆಸರನ್ನು ಉಲ್ಲೇಖಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಶೌರ್ಯ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕ ಸುಧಾಂಶು ಮಿತ್ತಲ್‌ ಅವರ ‘ಆರ್‌ಎಸ್ಎಸ್‌: ಬಿಲ್ಡಿಂಗ್‌ ಇಂಡಿಯ ಥ್ರೂ ಸೇವಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್‌ಎಸ್‌ಎಸ್‌ ಸ್ವಯಂಸೇವಕ ಸಂಘದ ಪರಾಕ್ರಮದಿಂದಾಗಿ 48 ಗಂಟೆಗಳಲ್ಲಿ ಭಾರತದ ಮಗ ಭಾರತಕ್ಕೆ ಮರಳುತ್ತಿದ್ದಾನೆ ಎನ್ನುವ ಕುರಿತು ಸಂಘವು ಹೆಮ್ಮೆ ಪಡಬಹುದು. ಮೋದಿ ಅವರು ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದರು ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಲಾಭ ಪಡೆಯಲು ಪುಲ್ವಾಮಾ ಭಯೋತ್ಪಾದನೆ ದಾಳಿ ಮತ್ತು ಮೈಮಾನಿಕ ದಾಳಿಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎನ್ನುವ ರಾಜಕೀಯ ಎದುರಾಳಿಗಳ ಟೀಕೆ ಬೆನ್ನಲ್ಲೇ ಸ್ಮೃತಿ ಇರಾನಿ ಅವರ ಹೇಳಿಕೆಯು ಕೂಡ ಭಾರಿ ಟೀಕೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. (ಏಜೆನ್ಸೀಸ್)