ರಾಜಸ್ಥಾನ: ಪ್ರಧಾನಿ ನರೇಂದ್ರ ಮೋದಿ ಅವರ 74 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಜ್ಮೀರ್ ಷರೀಫ್ ದರ್ಗಾದಲ್ಲಿ ಉಚಿತವಾಗಿ ಆಹಾರ ವಿತರಣೆ ( ಲಂಗರ್) ನಡೆಯಲಿದೆ. ದರ್ಗಾ ಸಂಘಟಕರು ಸೆಪ್ಟೆಂಬರ್ 17 ರಂದು 4000 ಕೆಜಿ ಸಸ್ಯಾಹಾರಿ ಔತಣವನ್ನು ನೀಡಲಿದ್ದಾರೆ.
ಗುಜರಾತ್‌ನ ವಡ್ನಗರದಲ್ಲಿ 1950 ರಲ್ಲಿ ಜನಿಸಿದ ನರೇಂದ್ರ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ ಅಜ್ಮೀರ್ ಷರೀಫ್ ದರ್ಗಾದಲ್ಲಿ (ರಾಜಸ್ಥಾನದಲ್ಲಿ) ವಿಶೇಷ ಲಂಗರ್ ಆಯೋಜಿಸಲಾಗಿದೆ. ಅಜ್ಮೀರ್ ಷರೀಫ್ ಗಡ್ಡಿ ನಶೀನ್ ಸೈಯದ್ ಅಫ್ಶಾನ್ ಚಿಸ್ತಿ ಪ್ರಕಾರ, ಅಕ್ಕಿ, ಶುದ್ಧ ತುಪ್ಪ, ಒಣ ಹಣ್ಣುಗಳು ಇತ್ಯಾದಿಗಳೊಂದಿಗೆ ಆಹಾರವನ್ನು ತಯಾರಿಸಲಾಗುತ್ತದೆ. ಈ ಆಹಾರವನ್ನು ಬಡವರಿಗೆ ವಿತರಿಸಲಾಗುತ್ತದೆ. ‘ಸೇವಾ ಪಖವಾಡ’ದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ದರ್ಗಾ ಅಧಿಕಾರಿಗಳು.
ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 550 ವರ್ಷಗಳ ಹಿಂದಿನ ಸಂಪ್ರದಾಯದ ಭಾಗವಾಗಿರುವ ಪ್ರಸಿದ್ಧ ‘ಬಡೇ ಶಾಹಿ ದಾಗ್’ ನಲ್ಲಿ ಲಂಗರ್ ತಯಾರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಸುರಕ್ಷತೆಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಹ ಸಲ್ಲಿಸಲಾಗುವುದು. 4000 ಕೆ.ಜಿ. ಆಹಾರ ಸಂಪೂರ್ಣಾವಾಗಿ ಸಸ್ಯಹಾರಿಯಾಗಿರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಆಯೋಜಿಸಲಾದ ಲಂಗರ್ ಖಾದ್ಯವನ್ನು ‘ಬಾದಿ ಶಾಹಿ ದೇಗ್’ ನಲ್ಲಿ ತಯಾರಿಸಲಾಗುವುದು.
ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ ಮತ್ತು ಚಿಸ್ತಿ ಫೌಂಡೇಶನ್ ಲಂಗರ್ ಆಯೋಜಿಸಲಿವೆ. ಎಲ್ಲಾ ಅತಿಥಿಗಳು ಮತ್ತು ಭಕ್ತರು ಇದರಲ್ಲಿ ಪಾಲ್ಗೊಳ್ಳಲು ಅನುಮತಿಸಲಾಗಿದೆ. ಸೆಪ್ಟೆಂಬರ್ 17, 2024 ರ ರಾತ್ರಿ ಅಜ್ಮೀರ್ ಷರೀಫ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುವುದು ಸಮಾರಂಭವು ರಾತ್ರಿ 10:30 ಕ್ಕೆ ಪ್ರಾರಂಭವಾಗುತ್ತದೆ. ಕುರಾನ್ ಪಠಣ ಹಾಗೂ ಕವ್ವಾಲಿ ಗಾಯನವೂ ನಡೆಯಲಿದೆ.