More

    VIDEO| ಪ್ರತಿಭಟನೆಯ ಮಧ್ಯೆಯೇ ಕೋಲ್ಕತ್ತ ತಲುಪಿದ ಪ್ರಧಾನಿ ಮೋದಿ; ಸಿಎಎ, ಎನ್​ಆರ್​ಸಿ ಹಿಂಪಡೆಯಲು ಮಮತಾ ಬ್ಯಾನರ್ಜಿ ಮನವಿ

    ಕೋಲ್ಕತ್ತ: ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಕೊಲ್ಕತ್ತಕ್ಕೆ ಪ್ರಧಾನಿ ಮೋದಿ ಶನಿವಾರ ತೆರಳಿದ್ದಾರೆ.

    ಮೋದಿ ಕೋಲ್ಕತ್ತಕ್ಕೆ ತೆರಳುವ ಒಂದು ಗಂಟೆ ಮುಂಚೆ ಅವರು ಬರುವ ದಾರಿಯಲ್ಲೇ ಪ್ರತಿಭಟನೆಯ ಕೂಗು ಕೇಳಿತ್ತು.

    ಈ ಮಧ್ಯೆ ಪ್ರಧಾನಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು. ಸಿಎಂ ಬ್ಯಾನರ್ಜಿ, “ಬಂಗಾಳವು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧವಿದೆ. ಹಾಗಾಗಿ ಇವೆರಡನ್ನು ರದ್ದು ಮಾಡಬೇಕು” ಎಂದು ಪ್ರಧಾನಿಯವರಲ್ಲಿ ಕೋರಿದರು.

    ಪ್ರಧಾನಿ ಆಗಮಿಸುವ ದಾರಿಯಲ್ಲಿ ಯುವಕರು, ರಾಜಕೀಯ ಪಕ್ಷಗಳು, ಮತ್ತಿತರರು ಸಿಎಎ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆಗಿಳಿದಿದ್ದರು. ಜತೆಗೆ ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್​ ಮೋದಿ ಎಂದು ಕೂಗಿದರು.

    ಮಧ್ಯಾಹ್ನ 3ರ ಹೊತ್ತಿಗೆ ಎಡಪಂಥೀಯ ವಿದ್ಯಾರ್ಥಿಗಳು ಇಲ್ಲಿನ ವಿಮಾನ ನಿಲ್ದಾಣದ ಎದುರಿಗೆ ಪ್ರತಿಭಟನೆಗಿಳಿದಿದ್ದರು. ಬಂಗಾಳ ರಾಜ್ಯದ ಸಚಿವ ಸಿದ್ಧಿಖ್​ ಉಲ್ಲಾ ಚೌಧರಿ ಕೋಲ್ಕತ್ತ ಮತ್ತು ಮುಶಿದಾಬಾದ್​ನಲ್ಲಿ ರ‍್ಯಾಲಿ ಹಮ್ಮಿಕೊಂಡಿದ್ದರು.

    ಪ್ರಧಾನಿ ಮೋದಿ ಅವರು ಕೋಲ್ಕತ್ತ ಫೋರ್ಟ್​ ಟ್ರಸ್ಟ್​ನ 150ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts