ಗರೀಬಿ ಹಟಾವೊ ಎನ್ನುತ್ತಲೇ ಬಡವರ ಲೂಟಿ ಹೊಡೆದ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ

Pm Modi

ಮುಂಬೈ: ‘ಬಡವರಿಗೆ ಪ್ರಯೋಜನ ಆಗುತ್ತಿದೆ ಎಂದರೆ ನೀವು ಸಂತೋಷ ಪಡುತ್ತೀರಿ. ಆದರೆ ಕಾಂಗ್ರೆಸ್ ಈ ಬಗ್ಗೆ ಸಂತೋಷ ಪಡುವುದಿಲ್ಲ. ಏಕೆಂದರೆ, ಬಡವರು ಉದ್ಧಾರ ಆಗಬಾರದು ಎನ್ನುವುದು ಕಾಂಗ್ರೆಸ್ ಮನಸ್ಥಿತಿ. ಗರೀಬಿ ಹಟಾವೊ ಎಂಬ ಘೋಷವಾಕ್ಯ ಹೇಳಿಕೊಂಡೇ ಅದು ಬಡವರನ್ನು ಲೂಟಿ ಮಾಡಿತು..’

ಇದು ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪರಿ. ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಗುರುವಾರ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾದ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮತಬ್ಯಾಂಕ್ ರಾಜಕಾರಣದಲ್ಲಿ ಕಾಂಗ್ರೆಸ್ ತೀರಾ ಮುಂದಿದ್ದರೂ ಅದು ಬಡವರ ಶತ್ರುವಾಗಿದೆ. ಬಡವರನ್ನು ಬಡವರನ್ನಾಗಿಯೇ ಉಳಿಸುವ ಅಜೆಂಡಾ ಇರಿಸಿಕೊಂಡೇ ಕಾಂಗ್ರೆಸ್ ಕೆಲಸ ಮಾಡಿದೆ. ಅವರು ಪೀಳಿಗೆಯಿಂದ ಪೀಳಿಗೆಗೆ ಬಡತನ ನಿವಾರಣೆಯ ಸ್ಲೋಗನ್ ಕೊಟ್ಟರೇ ಹೊರತು, ಬಡತನ ನಿವಾರಿಸಲಿಲ್ಲ. ಬದಲಿಗೆ ಬಡವರನ್ನೇ ಲೂಟಿ ಮಾಡಿದರು. ಅಂಥ ಕಾಂಗ್ರೆಸ್ಸನ್ನು ತಡೆಯುವ ಮಹತ್ವದ ಜವಾಬ್ದಾರಿ ಬಡವರ ಮೇಲೇ ಇದೆ ಎಂದು ಮೋದಿ ಹೇಳಿದರು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದ್ದು, ನಮ್ಮ ಸರ್ಕಾರ 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದರು.

ಪ್ರತ್ಯೇಕ ಸಂವಿಧಾನಕ್ಕಾಗಿ ಕಾಂಗ್ರೆಸ್ ಮೈತ್ರಿ ಯೋಜನೆ: ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನ ರೂಪಿಸಲು ಯೋಜನೆ ಹಾಕಿಕೊಂಡಿದ್ದು, 370ನೇ ವಿಧಿ ಮರುಸ್ಥಾಪಿಸಲು ಎಲ್ಲ ಯತ್ನಗಳನ್ನು ನಡೆಸುತ್ತಿವೆ ಎಂದು ಪ್ರಧಾನಿ ಮೋದಿಯವರು ಛತ್ರಪತಿ ಸಂಭಾಜಿನಗರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಕಾಶ್ಮೀರವನ್ನು 370ನೇ ವಿಧಿಯಿಂದ ಮುಕ್ತಗೊಳಿಸಿದಾಗ ಕಾಂಗ್ರೆಸ್ ಅದನ್ನು ಸಂಸತ್ತು ಮತ್ತು ನ್ಯಾಯಾಲಯದಲ್ಲಿ ವಿರೋಧಿಸಿತು. ಆದರೆ ಈಗ ಅವರು ಅದನ್ನು ಮರುಸ್ಥಾಪಿಸಲು ಯತ್ನಿಸುವ ಮೂಲಕ ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನ ತರಲು ಹವಣಿಸುತ್ತಿದ್ದಾರೆ ಎಂದು ಮೋದಿ ಕಿಡಿಕಾರಿದರು.

ಸಂವಿಧಾನ ರಕ್ಷಣೆಗೆ ಬದ್ಧ: ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನವನ್ನು ಓದಿಲ್ಲವಾದ್ದರಿಂದ ನಾನು ಹಿಡಿದುಕೊಂಡು ಓಡಾಡುತ್ತಿರುವ ಸಂವಿಧಾನದ ಕೆಂಪು ಪುಸ್ತಕ ಖಾಲಿ ಎಂದು ಭಾವಿಸಿದ್ದಾರೆ ಎಂಬುದಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಮಹಾರಾಷ್ಟ್ರದ ನಂದುರ್ಬಾರ್​ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾದ ಅವರು ಈ ಟೀಕೆ ಮಾಡಿದರು. ‘ಮೋದಿಯವರೇ.. ಇದು ಖಾಲಿ ಪುಸ್ತಕವಲ್ಲ, ಇದರಲ್ಲಿ ಭಾರತದ ಜ್ಞಾನ ಹಾಗೂ ಆತ್ಮವಿದೆ. ಡಾ.ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ, ಬಿರ್ಸಾ ಮುಂಡಾ, ಬುದ್ಧ ಮುಂತಾದವರ ತತ್ವ ಸಿದ್ಧಾಂತಗಳಿವೆ. ಇದನ್ನು ಖಾಲಿ ಎಂದರೆ ಅದು ನೀವು ಇವರಿಗೆಲ್ಲ ಮಾಡುವ ಅವಮಾನ. ನಾವು ಈ ಸಂವಿಧಾನದ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.

ಪತನವಾಗಲಿದೆ ರಾಹುಲ್ ವಿಮಾನ: ಸೋನಿಯಾ ಗಾಂಧಿ ತಮ್ಮ ಪುತ್ರನನ್ನು 20 ಸಲ ಲಾಂಚ್ ಮಾಡಲು ಯತ್ನಿಸಿದ್ದರು. ಆದರೆ ಅವರ ‘ರಾಹುಲ್ ವಿಮಾನ’ 21ನೇ ಬಾರಿಗೆ ಜಾರ್ಖಂಡ್​ನಲ್ಲಿ ಪತನವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ವಾಗ್ದಾಳಿ ನಡೆಸಿದ್ದಾರೆ. ಜಾರ್ಖಂಡ್​ನ ಗಿರಿಧಿಹ್​ನಲ್ಲಿ ಚುನಾ ವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ವಕ್ಪ್ ಬೋರ್ಡ್ ಪುರಾತನ ದೇವಸ್ಥಾನಗಳ ಭೂಮಿ ಕಬಳಿಸಿದೆ. ಅದನ್ನು ತಡೆಯಲು ತೀವ್ರ ವಿರೋಧದ ನಡುವೆಯೂ ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು ಎಂದು ಷಾ ಘೋಷಿಸಿದರು. ಜಾರ್ಖಂಡ್​ನಲ್ಲಿನ ನಕ್ಸಲಿಸಂ ಮತ್ತು ಒಳನುಸುಳುವಿಕೆ ಯನ್ನೂ ತೊಲಗಿಸುವುದಾಗಿ ಷಾ ಭರವಸೆ ನೀಡಿದರು.

ಖರ್ಗೆ ಬ್ಯಾಗ್ ತಪಾಸಣೆ: ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ತೆರಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಲಿಕಾಪ್ಟರ್ ಗುರುವಾರ ನಾಸಿಕ್​ನಲ್ಲಿ ಇಳಿಯುತ್ತಿದ್ದಂತೆ ಚುನಾವಣಾ ಆಯೋಗದ ಅಧಿಕಾರಿಗಳು ಖರ್ಗೆ ಅವರ ಬ್ಯಾಗ್ ತಪಾಸಣೆ ನಡೆಸಿದರು.

ಸರಣಿ ಜಯಿಸುವುದು ಕಠಿಣ ಸವಾಲುಗಳಲ್ಲಿ ಒಂದಾಗಿದೆ…Border-Gavaskar ಟ್ರೋಫಿಗೂ ಮುಂಚಿತಚಾಗಿ Team India ಕೋಚ್​ ಹೇಳಿಕೆ ವೈರಲ್​

Toxic ಅಖಾಡಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ Hollywood Star; ವಿಡಿಯೋ ವೈರಲ್​

Share This Article

Dream Science: ಕನಸಿನಲ್ಲಿ ಕಪ್ಪು, ಬಿಳಿ ಹಾವು ಕಂಡರೆ ಶುಭನಾ / ಅಶುಭನಾ?

Dream Science: ಮಲಗುವಾಗ ಕನಸುಗಳು ಬರುವುದು ಸಹಜ. ಕನಸಿನ ವಿಜ್ಞಾನದ ಪ್ರಕಾರ, ಇವೆಲ್ಲವೂ ಭವಿಷ್ಯದ ಘಟನೆಗಳ…

Neem Leaves Benefits: ಚಳಿಗಾಲದಲ್ಲಿ ಬೇವಿನ ಎಲೆಗಳ ಉಪಯೋಗವೇನು ಗೊತ್ತಾ?

Neem Leaves Benefits: ಬೇವಿನ ಮರದ ಪ್ರತಿಯೊಂದು ಭಾಗವು ನಮಗೆ ತುಂಬಾ ಉಪಯುಕ್ತವಾಗಿದೆ. ಬೇವಿನ ಔಷಧೀಯ…

ಅಣಬೆ ಖರೀದಿಸುವ ಅಗತ್ಯವಿಲ್ಲ.. ಮನೆಯಲ್ಲೆ ಬೆಳೆಯಿರಿ; ಸಿಂಪಲ್​ ವಿಧಾನ ಇಲ್ಲಿದೆ | Health Tips

ಅಣಬೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರ ಜತೆಗೆ ಆರೋಗ್ಯಕರ ಮತ್ತು ರುಚಿಕರವಾಗಿರುತ್ತವೆ. ವಿಟಮಿನ್ ಡಿ, ಪ್ರೋಟೀನ್, ಫೈಬರ್, ಆಂಟಿಆಕ್ಸಿಡೆಂಟ್​​ಗಳು,…