ನವದೆಹಲಿ: ದೆಹಲಿಯ ಎಎಪಿ ಸರ್ಕಾರವು ಕೇಂದ್ರ ಸರ್ಕಾರದ ಜತೆ ಹೋರಾಟ ಮಾಡುವುದರಲ್ಲೇ ಒಂದು ದಶಕವನ್ನು ವ್ಯರ್ಥ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಇದನ್ನೂ ಓದಿ: ದೇಶದ ಸಂಪರ್ಕ ಭಾಷೆಯಾಗಿ ಹಿಂದಿ ಬಳಸಿ: ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
ಇಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ರಾಷ್ಟ್ರ ರಾಜಧಾನಿಯನ್ನು ಭವಿಷ್ಯದ ನಗರವನ್ನಾಗಿ ಮಾಡಲು ಬಿಜೆಪಿಗೆ ಅವಕಾಶ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಯಾವುದೇ ಸಾರ್ವಜನಿಕ ಕಲ್ಯಾಣ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ. ಆದ್ರೆ, ಅನುಷ್ಠಾನದಲ್ಲಿನ ಭ್ರಷ್ಟಾಚಾರವನ್ನು ಕಿತ್ತು ಬಿಸಾಡಲಿದೆ” ಎಂದು ಭರವಸೆ ನೀಡಿದರು.
“ಎಎಪಿ ಸರ್ಕಾರ ದೆಹಲಿಗೆ ಅಪ್ಪಳಿಸಿದ ಆಪತ್ತು. ಬಿಜೆಪಿ ಬದಲಾವಣೆಗೆ ನಾಂದಿ ಹಾಡುತ್ತದೆ. ದೆಹಲಿಯಿಂದ ಈ ಆಪತ್ತನ್ನು ತೊಡೆದುಹಾಕಿದಾಗ ಮಾತ್ರ ಅಭಿವೃದ್ಧಿಯ ಡಬಲ್ ಎಂಜಿನ್ ಬರಲು ಸಾಧ್ಯ. ಕೇಂದ್ರ ಸರ್ಕಾರವು ದೆಹಲಿಯಲ್ಲಿ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತಿದೆ, ನಮೋ ಭಾರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಅನ್ನು ಪ್ರಾರಂಭಿಸುತ್ತಿದೆ ಮತ್ತು ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ” ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕನ್ನೆಯಂತೆ ರಸ್ತೆಗಳು ಮಾಡುವೆ; ಬಿಜೆಪಿ ಆಭ್ಯರ್ಥಿ ಗೇಲಿ: ಕಾಂಗ್ರೆಸ್ ತಿರುಗೇಟು | Priyanka Gandhi
“ನೀವು ಮೆಟ್ರೊ ನಿಲ್ದಾಣದಿಂದ ಹೊರಬಂದ ಬಳಿಕ ಗುಂಡಿ ಬಿದ್ದ ರಸ್ತೆಗಳು, ತುಂಬಿ ಹರಿಯುವ ಚರಂಡಿಗಳೇ ಕಣ್ಣಿಗೆ ಕಾಣಿಸುತ್ತವೆ. ಕೆಲವು ಪ್ರದೇಶಗಳು ದೀರ್ಘ ಟ್ರಾಫಿಕ್ ಜಾಮ್‌ನಿಂದ ತುಂಬಿರುತ್ತವೆ. ಇದರಿಂದ ಆಟೊ ಮತ್ತು ಕ್ಯಾಬ್ ಚಾಲಕರು ಬೇಸತ್ತು ಸಂಚರಿಸಲು ನಿರಾಕರಿಸುತ್ತಾರೆ. ಕಳೆದ 10 ವರ್ಷಗಳಲ್ಲಿ ದೆಹಲಿಯು ಆಪತ್ತಿ ನಿಂದ ಸಾಕಾಗಿದೆ. ಈಗ ಬದಲಾವಣೆ ತರುವ ಮಾತು ಮಾತ್ರ ಕೇಳಿಬರುತ್ತಿವೆ” ಎಂದಿದ್ದಾರೆ,(ಏಜೆನ್ಸೀಸ್).
ಹೊಸ ವರ್ಷದ ಮೊದಲ ಹಬ್ಬಕ್ಕೆ 5 ತಮಿಳು ಚಿತ್ರಗಳು ರಿಲೀಸ್! ಇಲ್ಲಿದೆ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ | Tamil Movies