VIDEO: ದೇಶಕ್ಕೆ ಹೆಮ್ಮೆಯ ಪುತ್ರ, ತಾಯಿಗೆ ಪ್ರೀತಿಯ ಮಗ: ಮತದಾನಕ್ಕೂ ಮುನ್ನ ಅಮ್ಮನ ಆಶೀರ್ವಾದ ಪಡೆದ ಪ್ರಧಾನಿ

ನವದೆಹಲಿ: ದೇಶಕ್ಕೆ ಅವರು ಹೆಮ್ಮೆಯ ಪುತ್ರ. ಆದರೆ, ತಾಯಿಗೆ ಅವರು ಪ್ರೀತಿಯ ಮಗ. ತಾಯಿಯ ಆಶೀರ್ವಾದ ಇಲ್ಲದೆ ಕೆಲಸವನ್ನು ಶುರು ಮಾಡದ ಬದ್ಧತೆ ಈ ಮಗನಿಗೆ. ಅಹಮದಾಬಾದ್​ನಲ್ಲಿ ತಮ್ಮ ಹಕ್ಕನ್ನು ಚಲಾಯಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಪ್ರತೀತಿಯನ್ನು ಮುಂದುವರಿಸಿದರು.

ಅಹಮದಾಬಾದ್​ಗೆ ತೆರಳುವ ಮುನ್ನ ಗಾಂಧಿನಗರದಲ್ಲಿರುವ ತಮ್ಮ ಮನೆಗೆ ಬಂದ ಪ್ರಧಾನಿ ಮೋದಿ ತಾಯಿ ಹೀರಾ ಬೆನ್​ ಅವರನ್ನು ಭೇಟಿಯಾಗಿ, ಕಾಲಿಗೆರಗಿ ಆಶೀರ್ವಾದ ಪಡೆದರು. ದೇಶದ ಹೆಮ್ಮೆಯ ಪುತ್ರನ ತಲೆ ಮೇಲೆ ಕೈಯಿರಿಸಿದ ತಾಯಿ ತುಂಬು ಹೃದಯದಿಂದ ಆಶೀರ್ವದಿಸಿದರು. ಬಳಿಕ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ಉಭಯ ಕುಶಲೋಪರಿ ನಡೆಸಿದರು.

ಪುತ್ರನನ್ನು ಆಶೀರ್ವದಿಸಿದ ಹೀರಾ ಬೆನ್​ ವಸ್ತ್ರವನ್ನು ನೀಡಿದರು. ಬಳಿಕ ದೇವರ ಪ್ರಸಾದವನ್ನು ತಿನ್ನಿಸಿದರು. ಪ್ರಧಾನಿ ಮೋದಿ ಅವರು ಕೂಡ ತಮ್ಮ ತಾಯಿಗೆ ಪ್ರಸಾದವನ್ನು ತಿನ್ನಿಸಿ, ಭಾವುಕರಾದರು. ಬಳಿಕ ಅಹಮದಾಬಾದ್​ನ ರಣಿಪ್​ ಪ್ರದೇಶದಲ್ಲಿರುವ ನಿಶಾನ್​ ಪ್ರೌಢಶಾಲೆಗೆ ತೆರಳಿ ಮತದಾನ ಮಾಡಿದರು. ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಮತಗಟ್ಟೆಯ ಹೊರಗಡೆ ಇದ್ದು, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *