ಚೆನ್ನೈಯಲ್ಲಿ ಜಯಾ ಅಂತಿಮ ದರ್ಶನ ಪಡೆದ ಪ್ರಧಾನಿ

ಮತ್ತೆ ಚೆನ್ನೈಯತ್ತ ಹೊರಟ ರಾಷ್ಟ್ರಪತಿ ಪ್ರಣಬ್

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚೆನ್ನೈಗೆ ಆಗಮಿಸಿ ರಾಜಾಜಿ ಹಾಲ್ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅಂತಿಮ ದರ್ಶನ ಪಡೆದು ಪುಷ್ಪಗುಚ್ಛ ಅರ್ಪಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಜಯಲಲಿತಾ ಅವರ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆಯೇ ಭಾವುಕರಾದ ಪ್ರಧಾನಿ ಸ್ವಲ್ಪ ಹೊತ್ತು ಮೌನಕ್ಕೆ ಶರಣಾದರು. ಜಯಲಲಿತಾ ಆಪ್ತೆ ಶಶಿಕಲಾ, ನೂತನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಸಾಂತ್ವನ ಹೇಳಿದರು. ಹೊರಡುವ ಮುನ್ನ ಅಲ್ಲಿ ಇದ್ದ ಎಲ್ಲರಿಗೂ ಕೈಮುಗಿದು ನಮಸ್ಕರಿಸಿದರು.  ಪ್ರಧಾನಿ ಜೊತೆಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರೂ ಇದ್ದರು.

ದಿವಂಗತ ಜಯಲಲಿತಾ ಅವರಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಅವರು ವಾಯುಪಡೆ ವಿಮಾನದ ಮೂಲಕ ಮಂಗಳವಾರ ಚೆನ್ನೈಗೆ ಆಗಮಿಸಿದ್ದು, ರಾಜಾಜಿ ಹಾಲ್ಗೆ ಆಗಮಿಸಿದರು.

ಈ ಮಧ್ಯೆ ತಾಂತ್ರಿಕ ಅಡಚಣೆ ಕಾರಣ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಚೆನ್ನೈಗೆ ಒಯುತ್ತಿದ್ದ ವಾಯಪಡೆ ವಿಮಾನ ತಾಂತ್ರಿಕ ಅಡಚಣೆ ಕಾರಣ ದೆಹಲಿಗೆ ವಾಪಸಾಗಿದ್ದು, ಪ್ರಣಬ್ ಅವರು ಬೇರೆ ವಿಮಾನದಲ್ಲಿ ಮತ್ತೆ ಚೆನ್ನೈಗೆ ಹೊರಟಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ

ಏಜೆನ್ಸೀಸ್.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *