ಅಬುದಾಬಿಯಲ್ಲಿ ಮೊದಲ ಹಿಂದು ದೇಗುಲ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ

ಅಬುದಾಬಿ: ಮೂರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಯುಎಇನ ರಾಜಧಾನಿ ಅಅಬುದಾಬಿಯಲ್ಲಿ ಮೊದಲ ಹಿಂದು ದೇವಾಲಯದ ಯೋಜನೆಗೆ ಶಿಲಾನ್ಯಾಸ ನೇರವೇರಿಸಿದರು.

ಬಳಿಕ ದುಬೈನ ಒಪೆರಾಹೌಸ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿ, ಹಿಂದು ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ ಅಬುದಾಬಿಯ ರಾಜಕುಮಾರ ಮೊಹಮ್ಮದ್‌ ಬಿನ್‌ ಜಾಯೇದ್‌ ಅಲ್‌ ನಾಹ್ಯಾನ್‌ ಅವರಿಗೆ ಭಾರತೀಯರ ಪರವಾಗಿ ಅಭಿನಂದನೆ ಸಲ್ಲಿಸಿದರು. ಈ ದೇಗುಲ ನಿರ್ಮಾಣ ಕೇವಲ ವಾಸ್ತುಶಿಲ್ಪ ಮತ್ತು ವೈಭವದ ಸಂಕೇತವಾಗಿರದೆ ವಿಶ್ವದ ಜನರಿಗೆ ‘ವಸುದೈವ ಕುಟುಂಬಕಂ’ ಸಂದೇಶವನ್ನು ಸಾರಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

ಸುಮಾರು 55 ಸಾವಿರ ಸ್ಕ್ವೇರ್‌ ಮೀ. ಜಾಗದಲ್ಲಿ ಹಿಂದು ದೇಗುಲು ನಿರ್ಮಾಣವಾಗುತ್ತಿದ್ದು, ಈ ದೇಗುಲವನ್ನು ಭಾರತದ ಕುಶಲಕರ್ಮಿಗಳಿಂದಲೇ ಕೆತ್ತಿಸಿ ತಂದು ಅದನ್ನು ಯುಎಇ ನಲ್ಲಿ ಜೋಡಿಸಲಾಗುತ್ತಿದೆ. 2020ರ ವೇಳೆಗೆ ದೇಗುಲ ಪೂರ್ಣಗೊಳ್ಳಲಿದ್ದು, ಧಾರ್ಮಿಕ ಹಿನ್ನೆಲೆಯ ಜನರಿಗೆ ಲಭ್ಯವಾಗಲಿದೆ. ಇದೊಂದು ಹಿಂದೂ ಸಂಸ್ಕೃತಿಯನ್ನೊಳಗೊಂಡ ದೇಗುಲವಾಗಿರಲಿದೆ ಎಂದು ಸಾಮಾಜಿಕ ಮತ್ತು ಆಧ್ಯಾತ್ಮಿಕ ಹಿಂದೂ ಸಂಘಟನೆಯಾದ ಬಿಎಪಿಎಸ್‌(ಬೋಚಾಸನ್ವಾಶಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾನ) ವಕ್ತಾರರು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *